ರೀ-ರಿಲೀಸ್ ಆದ ಶಾರುಖ್ ನಟನೆಯ ಮೂರು ಹಿಟ್ ಚಿತ್ರಗಳು; ಟಿಕೆಟ್ ಬೆಲೆ 112 ರೂಪಾಯಿ

‘ನಾಸ್ಟಾಲ್ಜಿಯಾ ಫಿಲ್ಮ್ ಫೆಸ್ಟಿವಲ್’ ಎಂದು ಕರೆಯಲಾಗಿದೆ. ಐಕಾನಿಕ್ ಸಿನಿಮಾ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ಮೆಗಾ ಹಿಟ್ ಸಿನಿಮಾ ‘ದಿಲ್ ತೋ ಪಾಗಲ್ ಹೈ’ ಮತ್ತು ಬ್ಲಾಕ್ ಬಸ್ಟರ್ ಚಿತ್ರ ‘ಚಕ್ ದೇ ಇಂಡಿಯಾ’ ಮತ್ತೆ ದೊಡ್ಡ ಪರದೆಯಲ್ಲಿ ವೀಕ್ಷಣೆ ಲಭ್ಯವಿದೆ.

ರೀ-ರಿಲೀಸ್ ಆದ ಶಾರುಖ್ ನಟನೆಯ ಮೂರು ಹಿಟ್ ಚಿತ್ರಗಳು; ಟಿಕೆಟ್ ಬೆಲೆ 112 ರೂಪಾಯಿ
ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 19, 2024 | 12:13 PM

ಶಾರುಖ್ ಖಾನ್ (Shah Rukh Khan) ಅವರು ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾ ಮೂಲಕ ಕಳೆದ ವರ್ಷ ದೊಡ್ಡ ಯಶಸ್ಸು ಕಂಡಿದ್ದಾರೆ. ಡಿಸೆಂಬರ್ 22ರಂದು ರಿಲೀಸ್ ಆದ ‘ಡಂಕಿ’ ಇನ್ನೂ ಥಿಯೇಟರ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗ ಅವರ ಮುಂಬರುವ ಚಿತ್ರಗಳ ಬಗ್ಗೆ ನಿರೀಕ್ಷೆ ಮೂಡಿದೆ. ಈ ಬಗ್ಗೆ ಸಾಕಷ್ಟು ಅಂತೆಕಂತೆಗಳು ಹರಿದಾಡುತ್ತಿವೆ. ಅವರು ಬ್ಯಾಕ್​ ಟು ಬ್ಯಾಕ್ ಮೂರು ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ, ಇದುವರೆಗೂ ಶಾರುಖ್ ಖಾನ್ ಅವರಿಂದಗಾಲೀ ಅಥವಾ ಯಾವುದೇ ನಿರ್ಮಾಪಕ/ನಿರ್ದೇಶಕರಿಂದಾಗಲೀ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಈ ಮಧ್ಯೆ ಯಶ್ ರಾಜ್ ಫಿಲ್ಮ್ಸ್ ಕಡೆಯಿಂದ ದೊಡ್ಡ ಘೋಷಣೆ ಆಗಿದೆ. ಶಾರುಖ್ ಅವರ ಮೂರು ಸಿನಿಮಾಗಳು ಒಟ್ಟಿಗೆ ರೀ-ರಿಲೀಸ್ ಆಗಿವೆ.

‘ಯಶ್ ರಾಜ್ ಫಿಲ್ಮ್ಸ್ ’ ಹಾಗೂ ಶಾರುಖ್ ಜೊತೆ ಒಳ್ಳೆಯ ಬಾಂಧವ್ಯ ಇದೆ. ಈ ನಿರ್ಮಾಣ ಸಂಸ್ಥೆ ಅಡಿ ಕೆಲಸ ಮಾಡಿ ಹಲವು ಹಿಟ್ ಚಿತ್ರ ನೀಡಿದ್ದಾರೆ ಶಾರುಖ್. 90ರ ದಶಕದಲ್ಲಿ ಮೋಡಿ ಮಾಡಿದ ಶಾರುಖ್ ಖಾನ್ ಅವರ ಮೂರು ಸಿನಿಮಾಗಳನ್ನು ಮತ್ತೆ ದೊಡ್ಡ ಪರದೆಯಲ್ಲಿ ತೋರಿಸಲು ಯಶ್​ ರಾಜ್ ಫಿಲ್ಮ್ಸ್ ಮುಂದಾಗಿದೆ. ಶಾರುಖ್ ಖಾನ್ ಅವರ ಮೂರು ಬ್ಲಾಕ್ ಬಸ್ಟರ್ ಚಿತ್ರಗಳು ಮತ್ತೆ ದೊಡ್ಡ ಪರದೆಯಲ್ಲಿ ಬಿಡುಗಡೆ ಆಗಿದೆ.

ಐಕಾನಿಕ್ ಸಿನಿಮಾ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ಮೆಗಾ ಹಿಟ್ ಸಿನಿಮಾ ‘ದಿಲ್ ತೋ ಪಾಗಲ್ ಹೈ’ ಮತ್ತು ಬ್ಲಾಕ್ ಬಸ್ಟರ್ ಚಿತ್ರ ‘ಚಕ್ ದೇ ಇಂಡಿಯಾ’ ಮತ್ತೆ PVR ಮತ್ತು INOXನಲ್ಲಿ ಬಿಡುಗಡೆಯಾಗುತ್ತಿದೆ. ಈ ಪೋಸ್ಟರ್ ಅನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಯಶ್ ರಾಜ್ ಫಿಲ್ಮ್ಸ್ ಶೇರ್ ಮಾಡಿಕೊಂಡಿದೆ.

ಇದನ್ನು ‘ನಾಸ್ಟಾಲ್ಜಿಯಾ ಫಿಲ್ಮ್ ಫೆಸ್ಟಿವಲ್’ ಎಂದು ಕರೆಯಲಾಗಿದೆ. ಇಂದಿನಿಂದ (ಜನವರಿ 19) ಪ್ರಾರಂಭವಾಗಿ ಜನವರಿ 22ರಂದು ಈ ಉತ್ಸವ ಕೊನೆಗೊಳ್ಳುತ್ತದೆ. ಇದರ ಟಿಕೆಟ್ ದರ  ಕೇವಲ 112 ರೂಪಾಯಿ ಇದೆ. ಶಾರುಖ್ ಖಾನ್ ಅವರ ಈ ಮೂರು ಚಿತ್ರಗಳು ಮುಂಬೈ, ಬೆಂಗಳೂರು, ಪುಣೆ, ಸೂರತ್, ಕೋಲ್ಕತ್ತಾ, ಹೈದರಾಬಾದ್, ಕೊಚ್ಚಿಯಂತಹ ಆಯ್ದ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಗೊಳ್ಳಲಿವೆ.

ಇದನ್ನೂ ಓದಿ: ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾರುಖ್ ಖಾನ್? ಈ ಬಾರಿ ಮತ್ತೊಂದು ಪ್ರಯೋಗ

ಶಾರುಖ್ ಖಾನ್ ಅವರು ರೊಮ್ಯಾಂಟಿಕ್ ಬಾಯ್ ಆಗಿ ಅನೇಕರಿಗೆ ಇಷ್ಟ ಆಗುತ್ತಾರೆ. ಅವರನ್ನು ಚಾಕೋಲೇಟ್ ಬಾಯ್ ಎಂದೂ ಕರೆದವರಿದ್ದಾರೆ. ಹೀಗಾಗಿ ಅವರ ನಟನೆಯ ಅನೇಕ ಸಿನಿಮಾಗಳು ಎವರ್​ಗ್ರೀನ್ ಎನ್ನುವ ಪಟ್ಟ ಪಡೆದಿವೆ. ಈ ಕಾರಣಕ್ಕೆ ಈ ಮೂರು ಚಿತ್ರಗಳನ್ನು ರೀ ರಿಲೀಸ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ