ಡ್ಯಾನ್ಸ್ ಬಾರದಿದ್ದ ಕತ್ರಿನಾ ಕೈಫ್​ಗೆ ಆತ್ಮವಿಶ್ವಾಸ ತುಂಬಿದ್ದು ದಕ್ಷಿಣದ ಸ್ಟಾರ್ ನಟ

Katrina Kaif: ಈಗ ಅದ್ಭುತ ಡ್ಯಾನ್ಸರ್ ಎನಿಸಿಕೊಂಡಿರುವ ಕತ್ರಿನಾ ಕೈಫ್​ಗೆ ವೃತ್ತಿ ಪ್ರಾರಂಭಿಸಿದಾಗ ಡ್ಯಾನ್ಸ್ ಬರುತ್ತಿರಲಿಲ್ಲ. ಆದರೆ ಕತ್ರಿನಾಗೆ ಆತ್ಮವಿಶ್ವಾಸ ತುಂಬಿದ್ದು ಯಾರು?

ಡ್ಯಾನ್ಸ್ ಬಾರದಿದ್ದ ಕತ್ರಿನಾ ಕೈಫ್​ಗೆ ಆತ್ಮವಿಶ್ವಾಸ ತುಂಬಿದ್ದು ದಕ್ಷಿಣದ ಸ್ಟಾರ್ ನಟ
Follow us
ಮಂಜುನಾಥ ಸಿ.
|

Updated on: Jan 17, 2024 | 5:50 PM

‘ಶೀಲಾ ಕಿ ಜವಾನಿ’, ‘ಧೂಮ್ ಮಚಾಲೆ’ ಹೊಸ ವರ್ಷನ್, ‘ಟೈಗರ್’ ಸಿನಿಮಾದ ಹಾಡುಗಳು, ‘ಕಮಲಿ-ಕಮಲಿ’, ‘ಕಾಲಾ ಚಸ್ಮಾ’,  ಇನ್ನೂ ಹಲವು ಹಿಟ್ ಹಾಡುಗಳಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ಕತ್ರಿನಾ ಕೈಫ್​ಗೆ (Katrina Kaif) ಒಂದು ಸಮಯದಲ್ಲಿ ಡ್ಯಾನ್ಸ್ ಬರುತ್ತಲೇ ಇರಲಿಲ್ಲ. ಹೌದು, ಕತ್ರಿನಾ ಕೈಫ್ ಮೊದಲು ಸಿನಿಮಾ ನಟಿಯಾದಾಗ ಅವರ ಲುಕ್ಸ್ ಏನೋ ಚೆನ್ನಾಗಿತ್ತು, ಆದರೆ ಅವರ ನಟನೆ ಹಾಗೂ ವಿಶೇಷವಾಗಿ ಅವರ ಡ್ಯಾನ್ಸ್ ಬಗ್ಗೆ ಹಲವರು ಟೀಕೆ ಮಾಡಿದ್ದರು. ಆದರೆ ಈಗ ಕತ್ರಿನಾ, ಬಾಲಿವುಡ್​ನ ಟಾಪ್ ಡ್ಯಾನ್ಸ್​ರ್​ಗಳಲ್ಲಿ ಒಬ್ಬರು. ಅವರ ಈ ಬದಲಾವಣೆಗೆ ಕಾರಣ, ದಕ್ಷಿಣ ಭಾರತದ ಸ್ಟಾರ್ ನಟ.

ಕತ್ರಿನಾ ಕೈಫ್ ನಟನೆಗೆ ಕಾಲಿರಿಸಿದ್ದು, ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ‘ಮಲ್ಲೇಶ್ವರಿ’ ಮೂಲಕ. ಆ ಸಿನಿಮಾದ ಬಳಿಕ ಅವರಿಗೆ ಹಲವು ಆಫರ್​ಗಳು ಬಂದವಂತೆ ಆದರೆ ಕತ್ರಿನಾ ಕೈಫ್ ಒಪ್ಪಿಕೊಂಡಿದ್ದು, ನಂದಮೂರಿ ಬಾಲಕೃಷ್ಣ ನಟಿಸಲಿದ್ದ ‘ಅಲ್ಲರಿ ಪಿಡುಗು’ ಸಿನಿಮಾ. ಬಾಲಕೃಷ್ಣ ತಮ್ಮ ಡೈಲಾಗ್, ಆಕ್ಷನ್ ಜೊತೆಗೆ ಡ್ಯಾನ್ಸ್​ ನಿಂದಲೂ ಜನಪ್ರಿಯರು. ಅವರ ಸಿನಿಮಾಗಳಲ್ಲಿ ಡ್ಯಾನ್ಸ್ ಇದ್ದೇ ಇರುತ್ತದೆ. ಆದರೆ ಕತ್ರಿನಾ ಕೈಫ್​ಗೆ ಡ್ಯಾನ್ಸ್ ಬರುತ್ತಿರಲಿಲ್ಲ. ಇದರಿಂದ ತೀವ್ರ ಸಮಸ್ಯೆಯನ್ನು ಕತ್ರಿನಾ ಕೈಫ್ ಎದುರಿಸಿದ್ದರಂತೆ.

ಇದನ್ನೂ ಓದಿ:Tiger 3: ಕತ್ರಿನಾ ಕೈಫ್​ ಟವೆಲ್​ ಫೈಟ್​ ಸೀನ್​ ಚೆನ್ನಾಗಿದೆ; ಆದರೆ ಅದರ ಹಿಂದಿನ ಕಷ್ಟ ಅವರಿಗೆ ಮಾತ್ರ ಗೊತ್ತು

ಎಲ್ಲರೂ ನನ್ನ ಡ್ಯಾನ್ಸ್ ಅನ್ನು ಟೀಕಿಸುತ್ತಿದ್ದರು. ಆದರೆ ಬಾಲಕೃಷ್ಣ ನನ್ನ ಬೆಂಬಲಕ್ಕೆ ನಿಂತರು, ಕ್ಯಾಮೆರಾ ಮುಂದೆ ಆಗಬಹುದಾದ ಅವಮಾನದಿಂದ ಕಾಪಾಡಿ, ಸರಳವಾದ ಸ್ಟೆಪ್​ಗಳನ್ನೇ ನನಗೆ ನೀಡುವಂತೆ ಸೂಚಿಸಿದರು. ಅಲ್ಲದೆ, ಕ್ಯಾಮೆರಾ ಮುಂದೆ ಹೇಗೆ ಡ್ಯಾನ್ಸ್ ಮಾಡಬೇಕು, ಸಂಗೀತಕ್ಕೆ ತಕ್ಕಂತೆ ಹೇಗೆ ಕುಣಿಯಬೇಕು, ಅಲ್ಲದೆ ಡ್ಯಾನ್ಸ್​ಗಿಂತಲೂ ಎಕ್ಸ್​ಪ್ರೆಶನ್​ಗೆ ಹೆಚ್ಚು ಗಮನ ಕೊಡಬೇಕು, ತಾಳವನ್ನು ಏಕೆ ಮಿಸ್ ಮಾಡಬಾರದು ಎಂಬುದೆಲ್ಲವನ್ನೂ ಹೇಳಿಕೊಟ್ಟರು ಎಂದು ಈ ಹಿಂದೆ ನೆನಪಿಸಿಕೊಂಡಿದ್ದರು.

ಇದೀಗ ಕತ್ರಿನಾ ಕೈಫ್, ದಕ್ಷಿಣದ ನಟ ವಿಜಯ್ ಸೇತುಪತಿ ಜೊತೆಗೆ ‘ಮೇರಿ ಕ್ರಿಸ್​ಮಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು ಕಳೆದ ವಾರವಷ್ಟೆ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿದೆ.ಸಿನಿಮಾದಲ್ಲಿ ವಿಜಯ್ ಹಾಗೂ ಕತ್ರಿನಾ ನಡುವೆ ಕೆಲವು ರೊಮ್ಯಾಂಟಿಕ್ ದೃಶ್ಯಗಳು ಸಹ ಸಿನಿಮಾದಲ್ಲಿವೆ. ಕತ್ರಿನಾ ಇದೀಗ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

2004ರಲ್ಲಿ ಬಿಡುಗಡೆ ಆದ ‘ಮಲ್ಲೇಶ್ವರಿ’ ಹಾಗೂ 2005ರ ‘ಅಲ್ಲರಿ ಪಿಡುಗು’ ಸಿನಿಮಾದ ಬಳಿಕ 2006 ರಲ್ಲಿ ಒಂದು ಮಲಯಾಳಂ ಸಿನಿಮಾನಲ್ಲಿ ಕತ್ರಿನಾ ನಟಿಸಿದರು. ಅದಾದ ಬಳಿಕ ದಕ್ಷಿಣದ ಕಡೆ ತಲೆಯೇ ಹಾಕಿಲ್ಲ ಈ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ