‘ಲತಾ ಮಂಗೇಶ್ಕರ್​ ವಾತ್ಸಲ್ಯ ಮತ್ತು ಆಶೀರ್ವಾದ ಪಡೆಯುವ ಭಾಗ್ಯ ನನಗಿತ್ತು’; ಪಿಎಂ ನರೇಂದ್ರ ಮೋದಿ

|

Updated on: Sep 28, 2024 | 12:58 PM

ಲತಾ ಮಂಗೇಶ್ಕರ್ ಅವರು 70 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಇದ್ದರು. ಅವರು ಸಾವಿರಾರು ಹಾಡುಗಳನ್ನು ಹಾಡಿದ್ದರು. ಇದು ನಿಜಕ್ಕೂ ಸಣ್ಣ ಸಾಧನೆ ಅಲ್ಲ. ಅವರ ಹೆಸರಲ್ಲಿ ಗಿನ್ನೆಸ್ ದಾಖಲೆ ಕೂಡ ಇದೆ. 1974ರಲ್ಲಿ ಲತಾ ಮಂಗೇಶ್ಕರ್ ಅವರು 1974ರಲ್ಲಿ ಗಿನ್ನೆಸ್ ದಾಖಲೆಯಲ್ಲಿ ಸೇರಿದರು

‘ಲತಾ ಮಂಗೇಶ್ಕರ್​ ವಾತ್ಸಲ್ಯ ಮತ್ತು ಆಶೀರ್ವಾದ ಪಡೆಯುವ ಭಾಗ್ಯ ನನಗಿತ್ತು’; ಪಿಎಂ ನರೇಂದ್ರ ಮೋದಿ
Follow us on

ಲತಾ ಮಂಗೇಶ್ಕರ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದರು. ಹಲವು ಜನಪ್ರಿಯ ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿವೆ. ಇಂದು ಅವರು ನಮ್ಮ ಜೊತೆಗೆ ಇಲ್ಲ ಎನ್ನುವ ಬೇಸರ ಇದೆ. ಆದರೆ, ಅವರು ಹಾಡುಗಳ ಮೂಲಕ ಸದಾ ನಮ್ಮ ಜೊತೆಗಿದ್ದಾರೆ. ಇಂದು (ಸೆಪ್ಟೆಂಬರ್ 28) ಅವರ 95ನೇ ವರ್ಷದ ಜನ್ಮದಿನೋತ್ಸವ. ಅವರನ್ನು ಅನೇಕ ಸೆಲೆಬ್ರಿಟಿಗಳು ನೆನಪಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಲತಾ ಮಂಗೇಶ್ಕರ್​ನ ನೆನಪಿಸಿಕೊಂಡಿದ್ದಾರೆ.

ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ‘ಲತಾ ಮಂಗೇಶ್ಕರ್ ಅವರನ್ನು ಜನ್ಮದಿನದಂದು ನೆನಪಿಸಿಕೊಳ್ಳುತ್ತಿದ್ದೇನೆ. ತಮ್ಮ ಸುಮಧುರ ಹಾಡುಗಳಿಂದ ಅವರು ಯಾವಾಗಲೂ ಜನರ ಹೃದಯ ಮತ್ತು ಮನಸ್ಸಿನಲ್ಲಿ ಇರುತ್ತಾರೆ. ಲತಾ ದೀದಿ ಮತ್ತು ನಾನು ವಿಶೇಷವಾದ ಬಾಂಧವ್ಯ ಹೊಂದಿದ್ದೆವು. ಅವರ ವಾತ್ಸಲ್ಯ ಮತ್ತು ಆಶೀರ್ವಾದ ಪಡೆಯುವ ಭಾಗ್ಯ ನನಗಿತ್ತು’ ಎಂದಿದ್ದಾರೆ ಮೋದಿ.

ಲತಾ ಮಂಗೇಶ್ಕರ್ ಅವರು 70 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಇದ್ದರು. ಅವರು ಸಾವಿರಾರು ಹಾಡುಗಳನ್ನು ಹಾಡಿದ್ದರು. ಇದು ನಿಜಕ್ಕೂ ಸಣ್ಣ ಸಾಧನೆ ಅಲ್ಲ. ಅವರ ಹೆಸರಲ್ಲಿ ಗಿನ್ನೆಸ್ ದಾಖಲೆ ಕೂಡ ಇದೆ. 1974ರಲ್ಲಿ ಲತಾ ಮಂಗೇಶ್ಕರ್ ಅವರ ಹೆಸರು 1974ರಲ್ಲಿ ಗಿನ್ನೆಸ್ ದಾಖಲೆಯಲ್ಲಿ ಸೇರಿತು. ‘ಅತಿ ಹೆಚ್ಚು ಸಾಂಗ್ ರೆಕಾರ್ಡ್ ಮಾಡಿದ ಆರ್ಟಿಸ್ಟ್’ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿತ್ತು. 1948-74ರವರೆಗೆ ಅವರು 25 ಸಾವಿರ ಹಾಡುಗಳನ್ನು ಹಾಡಿದ್ದರು. ಅವರು 36  ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡ, ಹಿಂದಿ, ಮರಾಠಿ ಮೊದಲಾದ ಭಾಷೆಗಳಲ್ಲಿ ಅವರು ಹಾಡಿದ್ದಾರೆ.

ಇದನ್ನೂ ಓದಿ: 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಾಗ ಭಾರತ ತಂಡದ ಪಾಲಿಗೆ ಲಕ್ಷ್ಮೀಯಾಗಿ ಬಂದಿದ್ದ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಅವರು 1929ರಲ್ಲಿ ಜನಿಸಿದರು. ಅವರು ಮೃತಪಟ್ಟಿದ್ದು 2022ರ ಫೆಬ್ರವರಿ 6ರಂದು. ಅವರಿಗೆ ಆಗ 92 ವರ್ಷ ವಯಸ್ಸು. ಅವರು ಬಣ್ಣದ ಲೋಕದಲ್ಲಿ 1942ರಿಂದ 2022ರವರೆಗೆ ಆ್ಯಕ್ಟೀವ್ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:55 pm, Sat, 28 September 24