AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫಾ ಅವಾರ್ಡ್ಸ್ 2024: ಟಿವಿ9, ನ್ಯೂಸ್​9ನಲ್ಲಿ ನೋಡಿ ಅದ್ಧೂರಿ ಸಮಾರಂಭದ ಹೈಲೆಟ್ಸ್

2024ನೇ ಐಫಾ ಅವಾರ್ಡ್ಸ್ ವಿತರಣೆ ಕಾರ್ಯಕ್ರಮ ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದು ಬಾಲಿವುಡ್​, ತೆಲುಗು, ತಮಿಳು, ಮಲಯಾಳಂ, ಕನ್ನಡ ಚಿತ್ರರಂಗದ ಹಲವಾರು ಮಂದಿ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದ ಹೈಲೈಟ್ಸ್​ಗಳು, ವಿಡಿಯೋ, ವರದಿಗಳನ್ನು ಟಿವಿ9, ನ್ಯೂಸ್9ನಲ್ಲಿ ವೀಕ್ಷಿಸಬಹುದಾಗಿದೆ.

ಐಫಾ ಅವಾರ್ಡ್ಸ್ 2024: ಟಿವಿ9, ನ್ಯೂಸ್​9ನಲ್ಲಿ ನೋಡಿ ಅದ್ಧೂರಿ ಸಮಾರಂಭದ ಹೈಲೆಟ್ಸ್
ಮಂಜುನಾಥ ಸಿ.
|

Updated on: Sep 28, 2024 | 4:37 PM

Share

ಅಬು ದಬಿಯ ಯಾಸ್ ದ್ವೀಪದಲ್ಲಿ ಮೂರು ದಿನಗಳ ಕಾಲ ಐಫಾ ಅವಾರ್ಡ್ಸ್​ 2024 ಬಲು ಅದ್ಧೂರಿಯಾಗಿ ನಡೆಯುತ್ತಿದೆ. ಸಹಿಷ್ಣುತೆ ಮತ್ತು ಸಹಬಾಳ್ವೆಯ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಗೌರವಾನ್ವಿತ ಪ್ರೋತ್ಸಾಹದ ಕಾರಣದಿಂದಾಗಿ ಮೂರನೇ ಬಾರಿ ಐಫಾ, ಅಬುಧಾನಿಯಲ್ಲಿ ನಡೆಯುತ್ತಿದೆ. ರ ಸೆಪ್ಟೆಂಬರ್ 27 ರಿಂದ 29 ರವರೆಗೆ ಐಫಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಐಫಾದ 24ನೇ ಆವೃತ್ತಿ ಇದಾಗಲಿದೆ. ಎತಿಹಾದ್ ಅರೆನಾ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ – ಅಬುಧಾಬಿ ಮತ್ತು ಮಿರಾಲ್‌ನ ಸಹಭಾಗಿತ್ವದಲ್ಲಿ ಐಫಾ ಅವಾರ್ಡ್ಸ್ 2024 ನಡೆಯುತ್ತಿದೆ. ಭಾರತದ ಐದು ಅತ್ಯುತ್ತಮ ಸಿನಿಮಾ ರಂಗಗಳ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸುವ ಮೂಲಕ ಭಾರತೀಯ ಸಿನಿಮಾದ ಅತ್ಯುತ್ತಮತೆಯನ್ನು ಸಂಭ್ರಮಿಸುವ ಕ್ಷಣಗಳನ್ನು ಐಫಾ ಸೃಷ್ಟಿಸುತ್ತಿದೆ.

ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಪ್ರಶಸ್ತಿಗಳು 24 ವರ್ಷಗಳಿಂದ ಸಿನಿಮೀಯ ಉತ್ಕೃಷ್ಟತೆಯನ್ನು ಗೌರವಿಸುತ್ತಾ ಬಂದಿದೆ. ಶುಕ್ರವಾರದಂದು ‘ಐಫಾ ಉತ್ಸವಂ’ ಪ್ರಶಸ್ತಿಗಳೊಂದಿಗೆ ಸೆಪ್ಟೆಂಬರ್ 27 ರಂದು ದಕ್ಷಿಣ ಭಾರತದ ಚಿತ್ರರಂಗದ ತೇಜಸ್ಸಿನ ಮೇಲೆ ಬೆಳಕು ಚೆಲ್ಲುವ ಮೂಲಕ ಪ್ರಶಸ್ತಿ ಸಮಾರಂಭ, ವಿತರಣೆ ಪ್ರಾರಂಭವಾಯ್ತು. ಇದರ ನಂತರ, IIFA ಪ್ರಶಸ್ತಿಗಳು ಶನಿವಾರ, ಸೆಪ್ಟೆಂಬರ್ 28 ರಂದು ನಡೆಯಲಿದ್ದು, ಹಿಂದಿ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು, ಹಿಂದಿ ಚಿತ್ರರಂಗದ ಗ್ಲಾಮರ್, ಸ್ಟಾರ್​ಡಮ್​ಗಳನ್ನು ಗುರುತಿಸಿ ಗೌರವಿಸಲಾಗುತ್ತದೆ. ಸೆಪ್ಟೆಂಬರ್ 29 ರ ಭಾನುವಾರದಂದು ಬಹು ನಿರೀಕ್ಷಿತ IIFA ರಾಕ್ಸ್‌ನೊಂದಿಗೆ ಭವ್ಯವಾದ ಶೈಲಿಯಲ್ಲಿ ಐಫಾ ಅವಾರ್ಡ್ಸ್​ ಮುಕ್ತಾಯಗೊಳ್ಳಲಿದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭ ಇದು ಸಂಗೀತ, ಫ್ಯಾಷನ್ ಮತ್ತು ಮನರಂಜನೆಯ ರೋಮಾಂಚಕ ಆಚರಣೆಯಾಗಿದೆ. ಐಫಾ ಅವಾರ್ಡ್ಸ್​ ನಡೆವ ಮೂರು ದಿನದ ಕಾರ್ಯಕ್ರಮದ ಎಲ್ಲ ಹೈಲೈಟ್ಸ್ ಅನ್ನು, ಮಾಹಿತಿ, ವಿಡಿಯೋಗಳನ್ನು ಟಿವಿ9 ಹಾಗೂ ನ್ಯೂಸ್​9 ನಲ್ಲಿ ವೀಕ್ಷಿಸಬಹುದಾಗಿದೆ.

ಐಫಾದ ನಿರ್ದೇಶಕ ಆಂಡ್ರೆ ಟಿಮ್ಮಿನ್ಸ್ ಮಾತನಾಡಿ, ‘ಈ 27 ರಿಂದ 29 ಸೆಪ್ಟೆಂಬರ್‌ನ ವರೆಗೆ ಭಾರತದ ಐದು ಅಪ್ರತಿಮ ಚಿತ್ರೋದ್ಯಮಗಳ ಅತ್ಯದ್ಭುತ ತಾರೆಗಳನ್ನು ಒಟ್ಟುಗೂಡಿಸಿ ಭಾರತೀಯ ಚಿತ್ರರಂಗದ ಭವ್ಯತೆಯನ್ನು ಒಟ್ಟಾಗಿ ಆಚರಸಲು, ಸಂಭ್ರಮಿಸುತ್ತಿರುವುದು ನಮಗೆ ರೋಮಾಂಚನ ತದಿದೆ. ಇದು ಈವರೆಗಿನ ನಮ್ಮ ಅತಿದೊಡ್ಡ ಮತ್ತು ಅತ್ಯಂತ ಅದ್ಭುತವಾದ ಐಫಾ ಉತ್ಸವವಾಗಿದೆ. ಯಾಸ್ ಐಲ್ಯಾಂಡ್‌ನ ಸಾಟಿಯಿಲ್ಲದ ಆತಿಥ್ಯ ಮತ್ತು ಕಣ್ಮನ ಸೆಳೆಯುವ ಹಿಂದಿ ಸಿನಿಮಾ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳ ತಾರೆಗಳೊಟ್ಟಿಗೆ ಸಿನಿಮೀಯ ಗಡಿಗಳನ್ನು ಮೀರಿದ ಅಭೂತಪೂರ್ವ ಆಚರಣೆಯಾಗಿದೆ ಐಫಾ. ಈ ಬಾರಿಯ ಐಫಾದ ಎಲ್ಲ ಟಿಕೆಟ್​ಗಳು ಮುಂಚಿತವಾಗಿಯೇ ಮಾರಾಟವಾಗಿಬಿಟ್ಟಿದ್ದವು’ ಎಂದಿದ್ದಾರೆ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿಗೆ ಮತ್ತೊಂದು ಗರಿ, ಜೀವಮಾನ ಶ್ರೇಷ್ಠ ಗೌರವ ನೀಡಿದ ಐಫಾ

ಐಫಾ ನಿರೂಪಕರ ಪಟ್ಟಿ ಇಂತಿದೆ

ಕನ್ನಡ: ಅಕುಲ್ ಬಾಲಾಜಿ-ವಿಜಯ್ ರಾಘವೇಂದ್ರ

ತೆಲುಗು: ರಾಣಾ ದಗ್ಗುಬಾಟಿ ಮತ್ತು ತೇಜ್ ಸಜ್ಜಾ

ತಮಿಳು: ಸತೀಶ್-ದಿವ್ಯಾ ಮೆನನ್

ಮಲಯಾಳಂ: ಸುದೇವ್ ನಾಯರ್-ಪಾರ್ಲೆ ಮಾನೆ

ಹಿಂದಿ: ಶಾರುಖ್ ಖಾನ್, ವಿಕ್ಕಿ ಕೌಶಲ್, ಕರಣ್ ಜೋಹರ್

ಐಫಾ ವೇದಿಕೆ ಮೇಲೆ ಪ್ರದರ್ಶನ ನೀಡಲಿರುವ ಕಲಾವಿದರ ಪಟ್ಟಿ

ಪ್ರಭು ದೇವಾ, ರೆಜಿನಾ ಕೆಸಾಂಡ್ರಾ, ಮಾಲಾಶ್ರೀ, ಪ್ರಗ್ಯಾ ಜೈಸ್ವಾಲ್, ಡಿಎಸ್​ಪಿ, ಶೇನ್ ನಿಗಮ್, ರಾಶಿ ಖನ್ನಾ, ರೇಖಾ. ಶಾಹಿದ್ ಕಪೂರ್, ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ, ಜಾನ್ಹವಿ ಕಪೂರ್, ಅನನ್ಯಾ ಪಾಂಡೆ, ಶಂಕರ್-ಎಹಸಾನ್-ಲಾಯ್, ಹನಿ ಸಿಂಗ್, ಇನ್ನೂ ಹಲವರು ವೇದಿಕೆ ಮೇಲೆ ಪ್ರದರ್ಶನ ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ