AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧಕ್ಕೆ ನಿಂತೋಯ್ತು ಸಲ್ಮಾನ್ ಖಾನ್-ರಶ್ಮಿಕಾ ನಟನೆಯ ‘ಸಿಖಂದರ್’ ಶೂಟಿಂಗ್?

Salman Khan: ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ತೊಂದರೆಗೆ ಒಳಪಟ್ಟಿದೆ. ಈ ಸಿನಿಮಾದ ಶೂಟಿಂಗ್ ಅನ್ನು ಅನಿವಾರ್ಯವಾಗಿ ಅರ್ಧಕ್ಕೆ ನಿಲ್ಲಿಸಲಾಗಿದೆ.

ಅರ್ಧಕ್ಕೆ ನಿಂತೋಯ್ತು ಸಲ್ಮಾನ್ ಖಾನ್-ರಶ್ಮಿಕಾ ನಟನೆಯ ‘ಸಿಖಂದರ್’ ಶೂಟಿಂಗ್?
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 28, 2024 | 10:39 PM

Share

ಸಲ್ಮಾನ್ ಖಾನ್, ಹೀರೋ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿ ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ತೊಂದರೆ ಎದುರಾಗಿದೆ. ಈ ಚಿತ್ರದ ಶೂಟಿಂಗ್ ಮುಂಬೈನಲ್ಲಿ ಸಾಗುತ್ತಿದೆ. ಮುಂಬೈನ ಗೋರೆಗಾಂವನಲ್ಲಿ ಸಿನಿಮಾದ ಸೆಟ್ ಹಾಕಲಾಗಿತ್ತು. ಆದರೆ, ಸುರಿದ ಭಾರೀ ಮಳೆಗೆ ಸೆಟ್​ಗಳು ನಾಶ ಆಗಿ ಹೋಗಿವೆ. ಹೀಗಾಗಿ, ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿದೆ.

ಹೌದು, ಆಗಸ್ಟ್ ತಿಂಗಳಿಂದ ಇಲ್ಲಿ ಶೂಟಿಂಗ್ ಆಗುತ್ತಾ ಇತ್ತು. ಈಗ ಮುಂಬೈನಾದ್ಯಂತ ಭರ್ಜರಿ ಮಳೆ ಆಗುತ್ತಿದೆ. ಆದರೆ, ಲೈಟಿಂಗ್ ಉಪಕರಣಗಳ ಬಗ್ಗೆ ಆತಂಕ ಮೂಡಿದೆ. ಈ ಕಾರಣದಿಂದ ಸಿನಿಮಾನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸಲ್ಮಾನ್ ಖಾನ್ ಅವರು ಸಂಜೆ 5 ಗಂಟೆಗೆ ಕಾಣಿಸಿಕೊಂಡಿದ್ದಾರೆ. ರಾತ್ರಿ ಶೂಟ್ ಮಾಡಲು ಅವರು ನಿರ್ಧರಿಸಿದ್ದರು. 7 ಗಂಟೆಗೆ ಶೂಟ್ ಆರಂಭ ಆಯಿತು. ಆದರೆ, ಮಳೆ ಹೆಚ್ಚುತ್ತಲೇ ಹೋಯಿತು. ಈ ಕಾರಣಕ್ಕೆ ಶೂಟ್ ನಿಲ್ಲಿಸುವ ನಿರ್ಧಾರ ಮಾಡಲಾಯಿತು. ಈ ರೀತಿಯ ಹವಾಮಾನದಲ್ಲಿ ರಾತ್ರಿ ಶೂಟ್ ಅಸಾಧ್ಯ ಎಂದು ತಂಡದವರಿಗೆ ಅನಿಸಿದೆಯಂತೆ.

ಇದನ್ನೂ ಓದಿ:58ನೇ ವಯಸ್ಸಿನಲ್ಲೂ ಹೇಗಿದೆ ನೋಡಿ ಸಲ್ಮಾನ್ ಖಾನ್ ಫಿಟ್ನೆಸ್​; ಇಲ್ಲಿದೆ ಫೋಟೋ

ಶೂಟಿಂಗ್ ತಂಡ ಶೀಘ್ರವೇ ಸಿನಿಮಾ ಶೂಟ್ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ, ಹವಾಮಾನ ಇದೇ ರೀತಿ ಮುಂದುವರಿದರೆ ಅದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಸದ್ಯ ಎರಡು ದಿನದ ಶೂಟ್ ನಿಂತ ಮಾತ್ರಕ್ಕೆ ಸಿನಿಮಾ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರಿಯುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಮುಂದಿನ ಈದ್ಗೆ ರಿಲೀಸ್ ಆಗಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಶೂಟಿಂಗ್ ಮಾಡಲಾಗುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡುವ ನಿರೀಕ್ಷೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತಮಿಳಿನ ನಿರ್ದೇಶಕ ಆ್ಯಕ್ಷನ್ ಕಟ್ ಹೇಳುತ್ತಿರುವುದರಿಂದ ಹಿಂದಿ ಮಂದಿಗೂ ನಿರೀಕ್ಷೆ ಇದೆ. ಇದಾದ ಬಳಿಕ ಸಲ್ಮಾನ್ ಖಾನ್ ಅವರು ಅಟ್ಲಿ ಜೊತೆ ಸಿನಿಮಾ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ