Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತ ಹಾಗೂ ಬಾಲಿವುಡ್ ನಡುವಿನ ವ್ಯಾತ್ಯಾಸ ವಿವರಿಸಿದ ಸೈಫ್ ಅಲಿ ಖಾನ್

Saif Ali Kha: ‘ದೇವರ’ ತೆಲುಗು ಸಿನಿಮಾದಲ್ಲಿ ನಟಿಸಿರುವ ಸೈಫ್ ಅಲಿ ಖಾನ್, ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ನಡುವೆ ಇರುವ ದೊಡ್ಡ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ದಕ್ಷಿಣ ಭಾರತ ಹಾಗೂ ಬಾಲಿವುಡ್ ನಡುವಿನ ವ್ಯಾತ್ಯಾಸ ವಿವರಿಸಿದ ಸೈಫ್ ಅಲಿ ಖಾನ್
Follow us
ಮಂಜುನಾಥ ಸಿ.
|

Updated on: Sep 29, 2024 | 5:55 PM

ದಶಕಗಳ ಕಾಲ ತನ್ನದೇ ಅಹಂನಲ್ಲಿ ಮೆರೆಯುತ್ತಿದ್ದ ಬಾಲಿವುಡ್​ ಈಗ ಮಂಕಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಮುಂದೆ ಬಾಲಿವುಡ್​ ಏನೂ ಅಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಕತೆ ಹೇಳುವ ವಿಧಾನ ಮಾತ್ರವೇ ಅಲ್ಲದೆ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ರೀತಿ, ವಿದೇಶಿ ಮಾರುಕಟ್ಟೆಯನ್ನು ತಲುಪುತ್ತಿರುವ ರೀತಿ ಎಲ್ಲದರಲ್ಲೂ ಬಾಲಿವುಡ್ ಅನ್ನು ಮೀರಿಸಿದೆ ದಕ್ಷಿಣ ಭಾರತ ಚಿತ್ರರಂಗ. ಬಾಲಿವುಡ್​ನ ಸ್ಟಾರ್ ನಟರು ಸಹ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಲನ್​ಗಳಾಗಿ ನಟಿಸಲೆಂದು ಬರುತ್ತಿದ್ದಾರೆ. ಈಗಾಗಲೇ ಸಂಜಯ್ ದತ್ ದಕ್ಷಿಣದ ಕೆಲ ಸಿನಿಮಾಗಳಲ್ಲಿ ವಿಲನ್ ಆಗಿದ್ದಾರೆ. ಇದೀಗ ಬಾಲಿವುಡ್​ ನಟ ಸೈಫ್ ಅಲಿ ಖಾನ್ ಸಹ ದಕ್ಷಿಣಕ್ಕೆ ಬಂದಿದ್ದಾರೆ.

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾನಲ್ಲಿ ಸೈಫ್ ಅಲಿ ಖಾನ್ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ನಡುವೆ ಸೈಫ್ ಅಲಿ ಖಾನ್ ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದ ನಡುವೆ ತಾವು ಗುರುತಿಸಿದ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗ ಬಾಲಿವುಡ್​ಗಿಂತಲೂ ಹೇಗೆ ಭಿನ್ನ ಎಂಬುದನ್ನು ಅವರು ಹೇಳಿದ್ದಾರೆ.

‘ನಾವು ಸದಾ ಸ್ಪೂರ್ತಿಗಾಗಿ ಪಶ್ಚಿಮದ ಕಡೆಗೆ ನೋಡುತ್ತಾ ಬಂದಿದ್ದೇವೆ. ನಾವು ಸಿನಿಮಾಗಳಲ್ಲಿ ವಿಷಯಗಳನ್ನು ತೋರಿಸಲು ಒಂದು ರೀತಿಯ ಕಾಸ್ಮೋಪಾಲಿಟನ್ ವಿಧಾನವನ್ನು ಅನುಸರಿಸುತ್ತೇವೆ. ಆದರೆ ದಕ್ಷಿಣದಲ್ಲಿ, ಕತೆ ಹೇಳುವ ರೀತಿ ಭಿನ್ನ. ಕತೆಯನ್ನು ಸಂಸ್ಕೃತಿ, ಪೌರಾಣಿಕತೆ, ಸ್ಥಳೀಯತೆಯ ಆಧಾರದಲ್ಲಿ ಹೇಳುತ್ತಾರೆ. ಇದಕ್ಕೆ ‘ಬಾಹುಬಲಿ’ ಅದ್ಭುತ ಉದಾಹರಣೆ. ಆ ಸಿನಿಮಾದಲ್ಲಿ ನಮ್ಮ ಸಂಸ್ಕೃತಿ ಮತ್ತು ಪೌರಾಣಿಕತೆಯನ್ನು ಅದ್ಭುತವಾಗಿ ಬೆರೆಸಲಾಗಿದೆ’ ಎಂದಿದ್ದಾರೆ ಸೈಫ್ ಅಲಿ ಖಾನ್.

ಇದನ್ನೂ ಓದಿ:‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ಎದುರು ವಿಲನ್ ಆಗ್ತಾರಾ ಸೈಫ್ ಅಲಿ ಖಾನ್, ಕರೀನಾ ದಂಪತಿ?

ಮುಂದುವರೆದು, ‘ಕಲ್ಕಿ’ ಸಿನಿಮಾದಲ್ಲಿಯೂ ಅಷ್ಟೆ, ಸಿನಿಮಾದ ಅಂತ್ಯದಲ್ಲಿ ಬರುವ ಮಹಾಭಾರತದ ದೃಶ್ಯಗಳು ಮೈನವಿರೇಳುವಂತೆ ಮಾಡುತ್ತವೆ. ದಕ್ಷಿಣದಲ್ಲಿ ನಾಯಕರನ್ನು ದೇವರ ರೀತಿ ತೋರಿಸುತ್ತಾರೆ. ಸಿನಿಮಾಗಳಲ್ಲಿ ತೋರಿಸುವ ನಾಯಕರನ್ನು ಸಾಮಾನ್ಯ ಜನರ ರೀತಿ ತೋರಿಸುವುದೇ ಇಲ್ಲ’ ಎಂದಿದ್ದಾರೆ ಸೈಫ್ ಅಲಿ ಖಾನ್.

‘ದೇವರ’ ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಮಾತನಾಡಿರುವ ಸೈಫ್, ‘ಭಾಷೆ ಬೇರೆ ಆಗಿರುವ ಕಾರಣ ಹಿಂಜರಿಕೆ ಇತ್ತು. ಆದರೆ ಒಮ್ಮೆ ಕ್ಯಾಮೆರಾ ಆನ್ ಆದ ಮೇಲೆ ನಟನೆ ತಾನಾಗಿಯೇ ಬಂದು ಬಿಟ್ಟಿತು. ಅಲ್ಲದೆ ನಿರ್ದೇಶಕ ಕೊರಟಾಲ ಶಿವ, ಸೈಫ್ ಅಲಿ ಖಾನ್​ಗೆ ಸಹಾಯ ಮಾಡುವುದಾಗಿ ಹೇಳಿದ್ದರಂತೆ. ತಮಗೆ ಸಹಾಯ ಮಾಡುವವರು ಇದ್ದ ಕಾರಣದಿಂದಾಗಿಯೇ ತಾವು ಸೆಟ್​ನಲ್ಲಿ ನಿರಾಳವಾಗಿ ಇದ್ದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ