‘ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆ ಮಾಡಲು ಸಿದ್ಧ’; ಕೊನೆಗೂ ತಲೆಬಾಗಿದ ಕಂಗನಾ

ನಟಿ, ಸಂಸದೆ ಕಂಗನಾ ರನೌತ್ ತಾವೇ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣವೂ ಮಾಡಿರುವ ಸಿನಿಮಾದ ಬಿಡುಗಡೆಗೆ ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾವನ್ನು ಕಂಗನಾ ನಿರ್ದೇಶನ ಮಾಡಿದ್ದು, ಈ ಸಿನಿಮಾ ಇಂದಿರಾ ಗಾಂಧಿ ಜೀವನ ಆಧರಿಸಿದ ಕತೆ ಹೊಂದಿದೆ. ಈಗ ಸಿನಿಮಾ ರಿಲೀಸ್ ಆಗುವ ಸೂಚನೆ ಸಿಕ್ಕಿದೆ.

‘ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆ ಮಾಡಲು ಸಿದ್ಧ’; ಕೊನೆಗೂ ತಲೆಬಾಗಿದ ಕಂಗನಾ
ಕಂಗನಾ ರನೌತ್
Follow us
|

Updated on: Sep 30, 2024 | 12:46 PM

ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ರಿಲೀಸ್ ಭಾಗ್ಯ ಸಿಗುವ ಸೂಚನೆ ಸಿಕ್ಕಿದೆ. ಪರಿಷ್ಕರಣಾ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಮಾಡಲು ನಿರ್ಮಾಣ ಸಂಸ್ಥೆ ಒಪ್ಪಿದೆ. ಈ ಬಗ್ಗೆ ತಂಡದವರು ಬಾಂಬೆ ಹೈಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಸೋಮವಾರ (ಸೆಪ್ಟೆಂಬರ್ 30) ಕೋರ್ಟ್​ಗೆ ಈ ಬಗ್ಗೆ ತಂಡ ಮಾಹಿತಿ ನೀಡಿದ್ದು, ಗುರುವಾರ (ಅಕ್ಟೋಬರ್ 3) ಮುಂದಿನ ವಿಚಾರಣೆ ಇದೆ.

ಸೆನ್ಸಾರ್ ಮಂಡಳಿಯವರು ‘ಎಮರ್ಜೆನ್ಸಿ’ ನೋಡಿ ನಂತರ ಅದನ್ನು ಪರಿಷ್ಕರಣಾ ಸಮಿತಿಗೆ ವರ್ಗಾಯಿಸಿತ್ತು. ಅವರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಲು ನಿರಕಾರಿಸಿದ್ದರು. ಜೊತೆಗೆ ಒಂದಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದರು. ಆದರೆ, ಇದಕ್ಕೆ ತಂಡ ಸಿದ್ಧ ಇರಲಿಲ್ಲ. ಕೊನೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್​ಗೆ ತಂಡದವರು ಮಾಹಿತಿ ನೀಡಿದ್ದು, ಬದಲಾವಣೆಗೆ ಒಪ್ಪಿರೋದಾಗಿ ತಿಳಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ರಿಲೀಸ್ ದಿನಾಂಕ ವಿಳಂಬವಾಗಿದೆ. ಕೊನೆಗೂ ಸಿನಿಮಾ ರಿಲೀಸ್ ಆಗುತ್ತಿದೆ.

‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ಅನೇಕರು ಆತಂಕ ಹೊರಹಾಕಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸಿಖ್ ಸಮುದಾಯದವರು ಅಪಸ್ವರ ತೆಗೆದಿದ್ದಾರೆ. ‘ಸಿಖ್ ಸಮುದಾಯದಯಕ್ಕೆ ಇರುವ ಗೌರವ ಹಾಳು ಮಾಡುವ ಕೆಲಸ ಆಗಿದೆ’ ಎಂದು ಸಿಖ್ ಸಮುದಾಯದವರು ಅಭಿಪ್ರಾಯಪಟ್ಟಿದ್ದರು.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಸಿನಿಮಾ ಇದೆ. ಕಂಗನಾ ಅವರು ಈ ಚಿತ್ರ ನಿರ್ದೇಶನ ಮಾಡಿದ್ದು ಜೊತೆಗೆ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಡೆ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಬಾಂಬೆ ಕೋರ್ಟ್ ಆದೇಶದಿಂದ ಕಂಗನಾ ನಿರಾಳ: ‘ಎಮರ್ಜೆನ್ಸಿ’ಗೆ ಬಿಡುಗಡೆ ಭಾಗ್ಯ?

ಕಂಗನಾ ಈಗ ಕೇವಲ ನಟಿ ಮಾತ್ರವಲ್ಲ. ಸಂಸದೆ ಕೂಡ ಹೌದು. ರಾಜಕೀಯದಲ್ಲಿ ಯಶಸ್ಸು ಸಿಕ್ಕರೆ ಚಿತ್ರರಂಗ ತೊರೆಯೋದಾಗಿ ಹೇಳಿದ್ದರು. ಈ ಬಗ್ಗೆ ಅವರು ತಮ್ಮ ನಿಲುವು ಏನು ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಅವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.