‘ಧೂಮ್​ 4’ ಸಿನಿಮಾದಲ್ಲಿ ರಣಬೀರ್ ಕಪೂರ್ ವಿಲನ್? ಪೊಲೀಸ್ ಪಾತ್ರಕ್ಕೆ ನಟನ ಹುಡುಕಾಟ

ನೆಗೆಟಿವ್​ ಶೇಡ್​ ಇರುವ ಪಾತ್ರ ರಣಬೀರ್​ ಕಪೂರ್​ ಅವರಿಗೆ ಹೊಸದೇನೂ ಅಲ್ಲ. ಈಗ ಅವರಿಗೆ ‘ಧೂಮ್​ 4’ ಸಿನಿಮಾದಲ್ಲಿ ಕೂಡ ವಿಲನ್ ಆಗಲು ಆಫರ್​ ನೀಡಲಾಗಿದೆ. ಈವರೆಗೂ ‘ಧೂಮ್​’, ‘ಧೂಮ್​ 2’ ಮತ್ತು ‘ಧೂಮ್​ 3’ ಸಿನಿಮಾಗಳು ಪ್ರೇಕ್ಷಕರಿಗೆ ಸಖತ್​ ಮನರಂಜನೆ ನೀಡಿವೆ. ಆ ಯಶಸ್ಸಿನ ಪರಿಣಾಮವಾಗಿ ‘ಧೂಮ್​ 4’ ಚಿತ್ರಕ್ಕೆ ಸ್ಕ್ರಿಪ್ಟ್​ ಸಿದ್ಧವಾಗಿದೆ.

‘ಧೂಮ್​ 4’ ಸಿನಿಮಾದಲ್ಲಿ ರಣಬೀರ್ ಕಪೂರ್ ವಿಲನ್? ಪೊಲೀಸ್ ಪಾತ್ರಕ್ಕೆ ನಟನ ಹುಡುಕಾಟ
ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Sep 30, 2024 | 10:35 PM

ನಟ ರಣಬೀರ್​ ಕಪೂರ್​ ಅವರು ‘ಅನಿಮಲ್’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಅದಕ್ಕೆ ತಕ್ಕಂತೆ ಅವರಿಗೆ ಹಲವು ಅವಕಾಶಗಳು ಬರುತ್ತಿವೆ. ಈಗಾಗಲೇ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುವ ಅವಕಾಶ ರಣಬೀರ್​ ಕಪೂರ್​ ಅವರಿಗೆ ಸಿಕ್ಕಿದೆ. ‘ಅನಿಮಲ್’ ಸಿನಿಮಾದಲ್ಲಿ ಅವರು ಹೀರೋ ಆಗಿದ್ದರೂ ಕೂಡ ಆ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇತ್ತು. ಆ ಕಾರಣದಿಂದಲೋ ಏನೋ ಅವರಿಗೆ ಅಂಥ ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆ. ವರದಿಗಳ ಪ್ರಕಾರ, ‘ಧೂಮ್​ 2’ ಸಿನಿಮಾಗೆ ರಣಬೀರ್​ ಕಪೂರ್​ ವಿಲನ್​ ಆಗಲಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ‘ಧೂಮ್​’ ಸರಣಿಯ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿವೆ. ‘ಧೂಮ್​’ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಅವರು ನೆಗೆಟಿವ್​ ರೋಲ್​ ಮಾಡಿದ್ದರು. ‘ಧೂಮ್​ 2’ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರಿಗೆ ವಿಲನ್ ಪಾತ್ರ ಸಿಕ್ಕಿತು. ‘ಧೂಮ್​ 3’ ಸಿನಿಮಾದಲ್ಲಿ ಆಮಿರ್ ಖಾನ್​ ಅವರಿಗೆ ಆ ಪಾತ್ರ ಒಲಿಯಿತು. ಈಗ ‘ಧೂಮ್​ 4’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರು ವಿಲನ್​ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಲೂಟಿಯ ಕಾನ್ಸೆಪ್ಟ್​ ಇರುವ ಧೂಮ್​ ಕಹಾನಿಯಲ್ಲಿ ಪೊಲೀಸ್​ ಪಾತ್ರಕ್ಕೂ ಅಷ್ಟೇ ಮಹತ್ವ ಇದೆ. ‘ಧೂಮ್ 4’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಎದುರು ಪೊಲೀಸ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಯಾವ ನಟ ಆ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎಂಬುದು ತೀರ್ಮಾನ ಆಗಿಲ್ಲ ಎನ್ನಲಾಗಿದೆ. ಇನ್ನು, ಈ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ರಣಬೀರ್​-ಆಲಿಯಾ ಭಟ್​ ಮಗಳು ರಹಾ ಕಪೂರ್​ ಕ್ಯೂಟ್​ ವಿಡಿಯೋ

ಈತನಕ ‘ಧೂಮ್​’ ಸರಣಿಯ ಎಲ್ಲ ಸಿನಿಮಾಗಳಿಗೆ ವಿಜಯ್​ ಕೃಷ್ಣ ಆಚಾರ್ಯ ಅಲಿಯಾಸ್​ ವಿಕ್ಟರ್​ ಅವರು ಸ್ಕ್ರಿಪ್ಟ್​ ಬರೆದಿದ್ದರು. ‘ಧೂಮ್​ 3’ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾ ಕೂಡ ಸೂಪರ್​ ಹಿಟ್​ ಆಯಿತು. ಇಷ್ಟೆಲ್ಲ ಅನುಭವ ಇರುವ ಅವರಿಗೆ ‘ಧೂಮ್​ 4’ ಸಿನಿಮಾವನ್ನು ಕೂಡ ನಿರ್ದೇಶಿಸುವ ಅವಕಾಶ ನೀಡಲಾಗುತ್ತಿದೆ ಎಂಬ ಮಾತು ಬಿ-ಟೌನ್​ ಅಂಗಳದಲ್ಲಿ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್