ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್ ಕುಂದ್ರಾ ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಮುಖ ಕಾಣದಂತೆ ಮಾಸ್ಕ್ ಧರಿಸಿರುತ್ತಾರೆ. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ಅವರು ಈ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈಗ ಸ್ಟಾಂಡಪ್ ಕಾಮಿಡಿ ಶುರು ಮಾಡಿಕೊಂಡಿದ್ದಾರೆ. ಈ ವಿಡಿಯೋದ ತುಣುಕನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಮಾಸ್ಕ್ ಧರಿಸಿದ್ದರು ಅನ್ನೋದು ವಿಶೇಷ.
ಕಪ್ಪು ಬಣ್ಣದ ಜಂಪ್ಸ್ಯೂಟ್ ಹಾಕಿ ಶೋಗೆ ಬಂದಿದ್ದಾರೆ ರಾಜ್ ಕುಂದ್ರಾ. ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಅವರ ಜೊತೆ ಸಾಕಷ್ಟು ಬಾಡಿಗಾರ್ಡ್ಸ್ ಇದ್ದರು. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ತಮ್ಮನ್ನು ತಾವು ಅವರು ಪರಿಚಯಿಸಿಕೊಂಡರು. ‘ನಾನು ರಾಜ್ ಕುಂದ್ರಾ. ಮಾಸ್ಕ್ ಮ್ಯಾನ್ ಎಂದೇ ಫೇಮಸ್. ಶಿಲ್ಪಾ ಶೆಟ್ಟಿ ಪತಿ ಅಂತಲೂ ಜನಪ್ರಿಯತೆ ಪಡೆದಿದ್ದೇನೆ’ ಎಂದಿದ್ದಾರೆ ರಾಜ್ ಕುಂದ್ರಾ.
ವೇದಿಕೆ ಏರಿದ ತಕ್ಷಣ ಅವರು ವಿಷಯಕ್ಕೆ ಬಂದಿದ್ದಾರೆ. ‘ನಾನು ಸೆಕ್ಸ್ ಜೋಕ್ ಹೇಳುತ್ತೇನೆ. ಯಾರಿಗಾದರೂ ಸರಿ ಎನಿಸಿಲ್ಲ ಎಂದರೆ 10 ನಿಮಿಷ ಹೊರಗೆ ಇರಬಹುದು’ ಎಂದರು. ಆದರೆ ಯಾರೊಬ್ಬರೂ ಹೊರಗೆ ಹೋಗಲೇ ಇಲ್ಲ. ಇದಕ್ಕೆ ರಾಜ್ ಕುಂದ್ರಾ ‘ನೀವೆಲ್ಲ ವಿಕೃತರು’ ಎಂದು ನಕ್ಕರು. ಆ ಬಳಿಕ ಅವರು ಅಶ್ಲೀಲ ಸಿನಿಮಾ ನಿರ್ಮಾಣದ ವಿಚಾರವಾಗಿ ಪರೋಕ್ಷವಾಗಿ ಮಾತನಾಡಿದರು.
‘18ನೇ ವಯಸ್ಸಿಗೆ ಲಂಡನ್ನಲ್ಲಿ ಟ್ಯಾಕ್ಸಿ ಓಡಿಸಲು ಆರಂಭಿಸಿದೆ. 21ನೇ ವಯಸ್ಸಿಗೆ ಸಾಮ್ರಾಜ್ಯ ಸ್ಥಾಪಿಸಿದೆ. ನಾನು ಯಾವಾಗಲೂ ಜನರು ಬಟ್ಟೆ ಧರಿಸಲಿ ಎಂದು ಬಯಸುತ್ತಿದ್ದೆ, ಅದನ್ನು ತೆಗೆಯಲು ಅಲ್ಲ’ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ಈ ಹೇಳಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಇದು ಅಶ್ಲೀಲ ಸಿನಿಮಾ ನಿರ್ಮಾಣದ ಪ್ರಕರಣದ ಕುರಿತು ಹೇಳಿದ ಮಾತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವೀಡಿಯೋ ಹಂಚಿಕೆ ಪ್ರಕರಣ, ರಾಜ್ ಕುಂದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಸುಪ್ರೀಂ
ರಾಜ್ ಕುಂದ್ರಾ ಮಾಸ್ಕ್ ಧರಿಸುವ ವಿಚಾರವನ್ನು ಅನೇಕರು ಟೀಕೆ ಮಾಡುತ್ತಿದ್ದಾರೆ. ‘ಧೈರ್ಯವಿದ್ದರೆ ಮಾಸ್ಕ್ ತೆಗೆದು ಬನ್ನಿ’ ಎಂದು ಅವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Thu, 5 October 23