Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳು ಹೇಳಿದ್ದಕ್ಕೆ ಅಮಿತಾಬ್ ಬಚ್ಚನ್​ ವಿರದ್ಧ ದೂರು, 10 ಲಕ್ಷ ದಂಡ ವಿಧಿಸುವಂತೆ ಒತ್ತಾಯ

Amitabh Bachchan:ತೆರೆಯ ಮೇಲೆ ತೆರೆಯಾಚೆಯೂ ಶುದ್ಧ ವ್ಯಕ್ತಿತ್ವ ಕಾಪಾಡಿಕೊಂಡಿರುವ ಅಮಿತಾಬ್ ಬಚ್ಚನ್ ಮೇಲೆ ಸುಳ್ಳು ಹೇಳಿರುವ ಆರೋಪ ಹೇರಲಾಗಿದೆ. ಸುಳ್ಳು ಹೇಳಿದ್ದಕ್ಕೆ ನಟನಿಗೆ 10 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಒತ್ತಾಯಿಸಲಾಗಿದೆ.

ಸುಳ್ಳು ಹೇಳಿದ್ದಕ್ಕೆ ಅಮಿತಾಬ್ ಬಚ್ಚನ್​ ವಿರದ್ಧ ದೂರು, 10 ಲಕ್ಷ ದಂಡ ವಿಧಿಸುವಂತೆ ಒತ್ತಾಯ
ಅಮಿತಾಬ್ ಬಚ್ಚನ್
Follow us
ಮಂಜುನಾಥ ಸಿ.
|

Updated on: Oct 04, 2023 | 8:20 PM

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ (Amitabh Bachchan) ಸಂಕಷ್ಟವೊಂದಕ್ಕೆ ಸಿಲುಕಿದ್ದಾರೆ. ತೆರೆಯ ಮೇಲೆ ತೆರೆಯಾಚೆಯೂ ಶುದ್ಧ ವ್ಯಕ್ತಿತ್ವ ಕಾಪಾಡಿಕೊಂಡಿರುವ ಅಮಿತಾಬ್ ಬಚ್ಚನ್ ಮೇಲೆ ಸುಳ್ಳು ಹೇಳಿರುವ ಆರೋಪ ಹೇರಲಾಗಿದೆ. ಹೌದು, ಜಾಹೀರಾತೊಂದರಲ್ಲಿ ನಟ ಅಮಿತಾಬ್ ಬಚ್ಚನ್ ಸುಳ್ಳು ಹೇಳಿ, ಗ್ರಾಹಕರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಅಲ್ಲದೆ, ಸಣ್ಣ-ಮಧ್ಯಮ ಸಗಟು ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಒತ್ತಾಯಿಸಿದೆ.

ಆನ್​ಲೈನ್ ಶಾಪಿಂಗ್ ಮಳಿಗೆ ಫ್ಲಿಪ್​ಕಾರ್ಟ್​ನ ರಾಯಭಾರಿ ಆಗಿರುವ ನಟ ಅಮಿತಾಬ್ ಬಚ್ಚನ್ ಇತ್ತೀಚೆಗಷ್ಟೆ ಫ್ಲಿಪ್​ಕಾರ್ಟ್​ನ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಜಾಹೀರಾತು ಫ್ಲಿಪ್​ಕಾರ್ಟ್​ನ ಬಿಗ್​ಬಿಲಿಯನ್​ ಡೇ ಕುರಿತಾದದ್ದಾಗಿತ್ತು. ಜಾಹೀರಾತಿನಲ್ಲಿ ಗುಣಮಟ್ಟದ, ದುಬಾರಿ ಸ್ಮಾರ್ಟ್​ಫೋನ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವ ಆಫರ್​ ಕುರಿತಾದದ್ದಾಗಿತ್ತು. ಈ ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ತಪ್ಪು ಮಾಹಿತಿ ನೀಡಿ ಗ್ರಾಹಕರ ದಾರಿ ತಪ್ಪಿಸಿದ್ದಾರೆ ಎಂದು ಸಿಎಐಟಿ ಆರೋಪಿಸಿದ್ದು, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ದೂರು ನೀಡಿದೆ.

ಜಾಹೀರಾತು, ಗ್ರಾಹಕರ ದಿಕ್ಕು ತಪ್ಪಿಸುವಂತಿದ್ದು, ತಪ್ಪು ಮಾಹಿತಿಯನ್ನು ಒಳಗೊಂಡಿದೆ ಹಾಗಾಗಿ ಜಾಹೀರಾತು ನೀಡಿರುವ ಫ್ಲಿಪ್​ಕಾರ್ಟ್​ ಸಂಸ್ಥೆಗೆ ದಂಡ ವಿಧಿಸುವ ಜೊತೆಗೆ ಜಾಹೀರಾತಿನಲ್ಲಿ ನಟಿಸಿ ಗ್ರಾಹಕರಿಗೆ ತಪ್ಪು ಮಾಹಿತಿ ಒದಗಿಸಿರುವ ನಟ ಅಮಿತಾಬ್ ಬಚ್ಚನ್​ಗೆ 10 ಲಕ್ಷ ರೂಪಾಯಿ ದಂಡ ವಿಧಿಸಬೇಕು ಹಾಗೂ ಈ ಕೂಡಲೇ ಜಾಹೀರಾತನ್ನು ಹಿಂಪಡೆಯುವಂತೆ ಫ್ಲಿಪ್​ಕಾರ್ಟ್​ಗೆ ಸೂಚಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ:ರಿಯಲ್ ಎಸ್ಟೇಟ್ ಬ್ಯುಸಿನೆಸ್ ವಿಸ್ತರಿಸಿದ ಅಮಿತಾಬ್ ಬಚ್ಚನ್, ಸಾರಾ-ಕಾರ್ತಿಕ್​ ಸಹ ಹಿಂದುಳಿದಿಲ್ಲ

ಜಾಹೀರಾತಿನಲ್ಲಿ ಕಚೇರಿಯೊಂದರಲ್ಲಿ ನಡೆಯುತ್ತಿರುವ ಮಾತುಕತೆಯ ಸನ್ನಿವೇಶವಿದ್ದು, ವ್ಯಕ್ತಿಯೊಬ್ಬ ಫ್ಲಿಫ್​ಕಾರ್ಟ್​ನ ಬಿಗ್​ಬಿಲಿಯನ್​ ಡೇನಲ್ಲಿ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳಿಗೆ ಭಾರಿ ಕಡಿಮೆ ಬೆಲೆ ಇದ್ದು ಒಳ್ಳೆಯ ಆಫರ್​ಗಳಿವೆ ಎನ್ನುತ್ತಾನೆ, ಅದಕ್ಕೆ ಮತ್ತೊಬ್ಬ ವ್ಯಕ್ತಿ, ಆ ಆಫರ್​ಗಳನ್ನು ಪಕ್ಕದ ಅಂಗಡಿಯವನೂ ಕೊಡುತ್ತಾನೆ ಎನ್ನುತ್ತಾನೆ. ಕೂಡಲೇ ಪ್ರತ್ಯಕ್ಷವಾಗುವ ಅಮಿತಾಬ್ ಬಚ್ಚನ್, ಫ್ಲಿಪ್​ಕಾರ್ಟ್ ಕೊಡುತ್ತಿರುವ ಆಫರ್​ಗಳನ್ನು ಅಂಗಡಿಯವ ಕೊಡಲು ಸಾಧ್ಯವೇ ಇಲ್ಲ, ಇಂಥಹಾ ಆಫರ್​ಗಳು ಫ್ಲಿಪ್​ಕಾರ್ಟ್​ನ ಬಿಗ್​ಬಿಲಿಯನ್​ ಡೇ ನಲ್ಲಿ ಮಾತ್ರವೇ ಸಿಗುತ್ತವೆ ಎನ್ನುತ್ತಾರೆ.

ಈ ಜಾಹೀರಾತು ಸಗಟು ವ್ಯಾಪಾರಿಗಳ ವಿರುದ್ಧವಾಗಿದೆ. ಆನ್​ಲೈನ್ ಮಳಿಗೆಯಂತೆ ಆಫ್​ಲೈನ್ ಮಳಿಗೆಗಳೂ ಸಹ ಆಫರ್​ಗಳನ್ನು ನೀಡುತ್ತವೆ ಎಂದು ಬಚ್ಚನ್ ವಿರುದ್ಧ ದೂರು ನೀಡಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಹೇಳಿದೆ. ಬಚ್ಚನ್​ರ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?