ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ; ತಂದೆ ಯಾರೆಂಬುದು ಇನ್ನೂ ತಿಳಿದಿಲ್ಲ

|

Updated on: Aug 06, 2023 | 7:04 AM

Ileana D'Cruz Baby: ಸೋಶಿಯಲ್ ಮೀಡಿಯಾದಲ್ಲಿ ಇಲಿಯಾನಾ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ತಾವು ಸಾಕಷ್ಟು ಖುಷಿಯಾಗಿ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ; ತಂದೆ ಯಾರೆಂಬುದು ಇನ್ನೂ ತಿಳಿದಿಲ್ಲ
ಇಲಿಯಾನಾ
Follow us on

ನಟಿ ಇಲಿಯಾ ಡಿಕ್ರೂಜ್ (Ileana D’Cruz) ಅವರು ಈಗ ತಾಯಿ ಆಗಿದ್ದಾರೆ. ಆಗಸ್ಟ್ 1ರಂದು ಅವರು ಗಂಡು ಮಗುವಿಗೆ ಜನ್ಮನೀಡಿದ್ದು ಈ ವಿಚಾರವ ಸ್ವಲ್ಪ ತಡವಾಗಿ ರಿವೀಲ್ ಮಾಡಿದ್ದಾರೆ. ಮಗು ಜನಿಸಿದ ವಿಚಾರ ಕೇಳಿ ಅಭಿಮಾನಿಗಳು ನಟಿಗೆ ಶುಭಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಮಗುವಿನ ತಂದೆಯ ಹೆಸರನ್ನೂ ರಿವೀಲ್ ಮಾಡಿ ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯನ್ನು ಇಲಿಯಾನ ಯಾವಾಗ ಪೂರೈಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಲಿಯಾನಾ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ತಾವು ಸಾಕಷ್ಟು ಖುಷಿಯಾಗಿ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮಗುವಿಗೆ ಕೋವಾ ಫೀನಕ್ಸ್ ಡೋಲನ್ ಎಂಬ ಹೆಸರನ್ನು ಇಟ್ಟಿದ್ದಾರೆ. ‘ನಿಮಗೆ ಕೋವಾ ಫೀನಕ್ಸ್ ಡೋಲನ್​ನ ಪರಿಚಯಿಸುತ್ತಿದ್ದೇವೆ. ಆಗಸ್ಟ್​ 1ರಂದು ಈತ ಜನಿಸಿದ’ ಎಂದು ಇಲಿಯಾನಾ ಮಾಹಿತಿ ನೀಡಿದ್ದಾರೆ.

ಇಲಿಯಾನಾ ಮಾಡಿದ ಈ ಪೋಸ್ಟ್​ಗೆ ಆಥಿಯಾ ಶೆಟ್ಟಿ, ನರ್ಗೀಸ್ ಫಕ್ರಿ, ಡಬೂ ರತ್ನಾನಿ ಸೇರಿ ಅನೇಕರು ಶುಭಕೋರಿದ್ದಾರೆ. ಸಾಮಾನ್ಯವಾಗಿ ಮಗು ಜನಿಸಿದ ಬಳಿಕ ಅದರ ಮುಖ ತೋರಿಸಲು ಇಷ್ಟಪಡುವುದಿಲ್ಲ. ಆದರೆ, ಇಲಿಯಾನಾ ಆ ರೀತಿ ಮಾಡಿಲ್ಲ. ಅವರು ಮಗುವಿನ ಫೋಟೋನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೇಬಿ ಬಂಪ್​ಗೆ ಹೊಸ ಹೆಸರು ಕೊಟ್ಟ ನಟಿ ಇಲಿಯಾನಾ; ಮಗುವಿನ ತಂದೆಯ ಹೆಸರು ಇನ್ನೂ ನಿಗೂಢ

ಇಲಿಯಾನಾಗೆ ದೊಡ್ಡ ಅಭಿಮಾನಿ ಬಳಗ ಇದೆ. ತೆಲುಗು, ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಪ್ರೆಗ್ನೆಂಟ್ ಆದ ಬಳಿಕ ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ತಾವು ತಾಯಿ ಆಗುತ್ತಿರುವ ವಿಚಾರವನ್ನು ಅವರು ಸಂಭ್ರಮಿಸಿದ್ದರು. ಈಗ ತಾಯಿ ಆದ ಬಳಿಕವೂ ಅವರು ಖುಷಿಯಿಂದ ಕುಪ್ಪಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಂಭ್ರಮಾಚರಣೆ ಮಾಡಿದ್ದಾರೆ. ವಿಶೇಷ ಎಂದರೆ ಇಲಿಯಾನಾ ಮದುವೆ ಆದ ವಿಚಾರವನ್ನು ಹೇಳಿಕೊಂಡಿಲ್ಲ. ಬಾಯ್​​ಫ್ರೆಂಡ್ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಎಲ್ಲಿಯೂ ಅವರ ಹೆಸರನ್ನು ರಿವೀಲ್ ಮಾಡಿಲ್ಲ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಮಗುವಿನ ತಂದೆ ಹೆಸರು ರಿವೀಲ್ ಮಾಡುವಂತೆ ಅನೇಕರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರದಲ್ಲಿ ಅವರು ಟ್ರೋಲ್ ಕೂಡ ಆಗುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಇಲಿಯಾನಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:03 am, Sun, 6 August 23