Ileana D’cruz Pregnant: ಮದುವೆಗೂ ಮುನ್ನ ಪ್ರೆಗ್ನೆಂಟ್​ ಆದ ಇಲಿಯಾನಾ ಡಿಕ್ರೂಜ್​; ಮಗಳ ನಿರ್ಧಾರಕ್ಕೆ ಅಮ್ಮನ ಬೆಂಬಲ

|

Updated on: Apr 18, 2023 | 12:03 PM

Ileana D'cruz: ತಮ್ಮ ಮಗುವಿನ ತಂದೆ ಯಾರು ಎಂಬುದನ್ನು ಇಲಿಯಾನಾ ಡಿಕ್ರೂಜ್​ ತಿಳಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

Ileana Dcruz Pregnant: ಮದುವೆಗೂ ಮುನ್ನ ಪ್ರೆಗ್ನೆಂಟ್​ ಆದ ಇಲಿಯಾನಾ ಡಿಕ್ರೂಜ್​; ಮಗಳ ನಿರ್ಧಾರಕ್ಕೆ ಅಮ್ಮನ ಬೆಂಬಲ
ಇಲಿಯಾನಾ ಡಿಕ್ರೂಜ್
Follow us on

​ನಟಿ ಇಲಿಯಾನಾ ಡಿಕ್ರೂಜ್ (Ileana D’cruz)​ ಅವರು ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ಅವರು ಈಗ ತಾಯಿ ಆಗುತ್ತಿದ್ದಾರೆ. ಶೀಘ್ರದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಸುದ್ದಿ ಕೇಳಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಯಾಕೆಂದರೆ ಇಲಿಯಾನಾ ಡಿಕ್ರೂಜ್ ಅವರಿಗೆ ಇನ್ನೂ ಮದುವೆ ಆಗಿಲ್ಲ. ಮದುವೆ ಆಗದೆಯೇ ಅವರು ಗರ್ಭಿಣಿ (Ileana D’cruz Pregnant) ಆಗಿದ್ದಾರೆ. ಸದ್ಯ ಅವರ ಪಾರ್ಟ್ನರ್​ ಯಾರು ಎಂಬುದನ್ನು ಕೂಡ ಅವರು ಬಹಿರಂಗ ಮಾಡಿಲ್ಲ. ಹಾಗಾಗಿ ಅವರ ಈ ನಿರ್ಧಾರದಿಂದ ಫ್ಯಾನ್ಸ್​ ಅಚ್ಚರಿಪಟ್ಟಿದ್ದಾರೆ. ತಾವು ಪ್ರೆಗ್ನೆಂಟ್​ ಎಂಬುದನ್ನು ಇಲಿಯಾನಾ ಡಿಕ್ರೂಜ್​ ಅವರು ನೇರವಾಗಿ ಹೇಳಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಪರೋಕ್ಷವಾಗಿ ಪೋಸ್ಟ್​ ಮಾಡಿದ್ದಾರೆ.

‘ಕಮಿಂಗ್​ ಸೂನ್​.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್​ ಡಾರ್ಲಿಂಗ್​’ ಎಂದು ಇಲಿಯಾನಾ ಡಿಕ್ರೂಜ್​ ಅವರು ಬರೆದುಕೊಂಡಿದ್ದಾರೆ. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ (Mama) ಎಂಬ ಡಾಲರ್​ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್​ ಕೂಡ ಕಮೆಂಟ್​ ಮಾಡಿದ್ದಾರೆ. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದಾರೆ. ಶಿಬಾನಿ ದಾಂಡೇಕರ್​, ನಿಶಾ ಅಗರ್​ವಾಲ್​ ಮುಂತಾದ ಸೆಲೆಬ್ರಿಟಿಗಳು ಕೂಡ ಕಮೆಂಟ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ
Ileana D’Cruz: ಅಡ್ವಾನ್ಸ್​ ಹಣ ಪಡೆದು ಮೋಸ ಮಾಡಿದ ಆರೋಪ; ತಮಿಳು ಚಿತ್ರರಂಗದಲ್ಲಿ ನಟಿ ಇಲಿಯಾನಾ ಬ್ಯಾನ್​?
Ileana Dcruz: ಆಸ್ಪತ್ರೆಗೆ ದಾಖಲಾದ ಇಲಿಯಾನಾ ಡಿಕ್ರೂಸ್​; ಫೋಟೋ ಮೂಲಕ ಮಾಹಿತಿ ತಿಳಿಸಿದ ಖ್ಯಾತ ನಟಿ
ಕತ್ರಿನಾ ಸಹೋದರನ ಜತೆ ಇಲಿಯಾನಾ ಡಿಕ್ರೂಜ್ ಡೇಟಿಂಗ್? ಒಂದು ಫೋಟೋ ಮೂಲಕ ಹೊರಬಿತ್ತು ಸತ್ಯ
ನಟಿ ಇಲಿಯಾನಾ ಪ್ರೆಗ್ನೆಂಟ್​ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ

ಇಲಿಯಾನಾ ಡಿಕ್ರೂಜ್​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು. ಇತ್ತೀಚೆಗೆ ಇಲಿಯಾನಾ ಡಿಕ್ರೂಜ್​ ಅವರು ನಟಿ ಕತ್ರಿನಾ ಕೈಫ್​ ಸಹೋದರ ಸೆಬ್ಬಾಸ್ಟಿಯನ್​ ಲೊರಾನ್​ ಮಿಶಾಲ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಆದರೆ ಈಗ ತಾವು ಮಗು ಪಡೆಯುತ್ತಿರುವುದು ಯಾರ ಜೊತೆ ಎಂಬುದನ್ನು ಇಲಿಯಾನಾ ತಿಳಿಸಿಲ್ಲ.

ಇದನ್ನೂ ಓದಿ: ಅಡ್ವಾನ್ಸ್​ ಹಣ ಪಡೆದು ಮೋಸ ಮಾಡಿದ ಆರೋಪ; ತಮಿಳು ಚಿತ್ರರಂಗದಲ್ಲಿ ನಟಿ ಇಲಿಯಾನಾ ಬ್ಯಾನ್​?

‘ನಿಮಗೆ ಮದುವೆ ಆಗಿದೆಯೇ? ಹಾಗಿದ್ದರೆ ಮಗುವಿನ ತಂದೆ ಯಾರು’ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಅವರು ಯಾವಾಗ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. 2006ರಿಂದಲೂ ಇಲಿಯಾನಾ ಡಿಕ್ರೂಜ್​ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.