ಸಿನಿಮಾ ಸ್ಟಾರ್ಗಳ (Movie) ಜೀವನ ಸದಾ ಐಶಾರಾಮಿ, ಗ್ಲಾಮರ್ನಿಂದ ತುಂಬಿರುತ್ತದೆ. ಈಗಂತೂ ಒಂದೆರಡು ಸಿನಿಮಾ ಹಿಟ್ ಆಗಿಬಿಟ್ಟರೆ ಸಾಕು ನಟರು ಶ್ರೀಮಂತರಾಗಿಬಿಡುತ್ತಾರೆ. ಐಶಾರಾಮಿ ಕಾರು, ಬಂಗ್ಲೆಗಳನ್ನು ಖರೀದಿಸುತ್ತಾರೆ. ಬಾಲಿವುಡ್ನಲ್ಲಿ ಸ್ಟಾರ್ ನಟ ಆಗಿದ್ದ ಇಮ್ರಾನ್, ಸಹ ಹೀಗೆಯೇ ಐಶಾರಾಮಿ ಕಾರು, ಬಂಗ್ಲೆಗಳನ್ನು ಹೊಂದಿದ್ದರು. ಆದರೆ ಅವೆಲ್ಲವನ್ನೂ ಮಾರಾಟ ಮಾಡಿ ಬರೋಬ್ಬರಿ ಹತ್ತು ವರ್ಷಗಳ ಕಾಲ ತೀರ ಸಾಮಾನ್ಯನ ರೀತಿ ಬದುಕಿದ್ದರು. ಅದೇಕೆ ಹಾಗೆ ಎಂಬುದನ್ನು ಅವರೇ ವಿವರಿಸಿದ್ದಾರೆ.
ಆಮಿರ್ ಖಾನ್ರ ಹತ್ತಿರದ ಸಂಬಂಧಿ ಇಮ್ರಾನ್ ಖಾನ್ ‘ಜಾನೆ ತು ಯ ಜಾನೆ ನ’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಸೂಪರ್-ಡೂಪರ್ ಹಿಟ್ ಆಯ್ತು. ಅದಾದ ಬಳಿಕ ಹಲವು ಸಿನಿಮಾಗಳ ಅವಕಾಶ ದೊರೆತವು ಕೆಲವು ಹಿಟ್ ಆದರೆ ಕೆಲವು ಫ್ಲಾಪ್ ಆದವು. 2008 ರಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟ ಇಮ್ರಾನ್ ಖಾನ್ 2015ರ ವರೆಗೆ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅದಾದ ಬಳಿಕ ಹಠಾತ್ತನೆ ಚಿತ್ರರಂಗಿದಂದ ದೂರಾಗಿಬಿಟ್ಟರು.
ಸ್ಟಾರ್ ಆಗಿದ್ದಾಗ ಅವರ ಬಳಿ ದುಬಾರಿ ಕಾರಾದ ಫೆರಾರಿ ಇತ್ತು, ಮುಂಬೈನ ಪಾಲಿ ಹಿಲ್ನಲ್ಲಿ ಐಶಾರಾಮಿ ಬಂಗ್ಲೆ ಇತ್ತು. ಐಶಾರಾಮಿ ಜೀವನವನ್ನೇ ಅವರು ಲೀಡ್ ಮಾಡುತ್ತಿದ್ದರು. ಆದರೆ 2015ರ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾದ ಇಮ್ರಾನ್ ಖಾನ್, ತಮ್ಮ ಬಳಿ ಇದ್ದ ಫೆರಾರಿ ಕಾರು ಮಾರಿದರು. ಐಶಾರಾಮಿ ಬಂಗ್ಲೆ ಮಾರಾಟ ಮಾಡಿದರು. ಬಾಂದ್ರಾನಲ್ಲಿ ಸಾಧಾರಣ ಅಪಾರ್ಟ್ಮೆಂಟ್ನಲ್ಲಿ ಕುಟುಂಬದೊಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ಇದನ್ನೂ ಓದಿ:ವಿಚ್ಛೇದನದ ಬಳಿಕವೂ ಪತ್ನಿ ಕಿರಣ್ ಜೊತೆ ಕೆಲಸ ಮಾಡೋದೇಕೆ? ಆಮಿರ್ ಖಾನ್ ಕೊಟ್ಟರು ಉತ್ತರ
ಅವರೇ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ‘ಫೆರಾರಿ ಕಾರು ಮಾರಿ ಸಾಧಾರಣ ವೋಲ್ಕ್ಸ್ ವ್ಯಾಗನ್ ಕಾರು ಖರೀದಿಸಿದೆ. ಅಪಾರ್ಟ್ಮೆಂಟ್ನಲ್ಲಿ ಸಹ ಕೇವಲ ಐದು ತಟ್ಟೆ, ಐದು ಚಮಚ, ಒಂದು ಕುಕ್ಕರ್, ಒಂದು ಪ್ಯಾನ್ ಇಷ್ಟನ್ನೇ ಇಟ್ಟುಕೊಂಡಿದ್ದೆವು. ಒಂದೇ ರೆಬನ್ ಗ್ಲಾಸ್ ಅನ್ನು ಬರೋಬ್ಬರಿ ಹತ್ತು ವರ್ಷ ಬಳಸಿದೆ. ಈಗಲೂ ಅದನ್ನೇ ಬಳಸುತ್ತೇನೆ. ಇತ್ತೀಚೆಗಷ್ಟೆ ಆಮಿರ್ ಖಾನ್ರ ಪುತ್ರಿ ಇರಾ ಖಾನ್ ಮದುವೆಗೆ ಹೋದಾಗ ಸಹ ಹತ್ತು ವರ್ಷದ ಹಿಂದೆ ನನ್ನ ಕೊನೆಯ ಸಿನಿಮಾದ ಪ್ರೆಸ್ಮೀಟ್ನಲ್ಲಿ ಧರಿಸಿದ್ದ ಕೋಟ್ ಅನ್ನೇ ಧರಿಸಿದ್ದೆ’ ಎಂದಿದ್ದಾರೆ.
2016ರ ಸಮಯದಲ್ಲಿ ನಾನು ವಯಕ್ತಿಕವಾಗಿ ಬಹಳ ಲೋ ಆಗಿಬಿಟ್ಟೆ. ಖಿನ್ನತೆ ಕಾಡಲಾರಂಭಿಸಿತು. ಹಣದ ಬಗ್ಗೆ ವ್ಯಾಮೋಹವೇ ಹೋಗಿಬಿಟ್ಟಿತು. ಅದೇ ಸಮಯಕ್ಕೆ ಮಗಳು ಜನಿಸಿದರು. ನನ್ನ ಕುಟುಂಬಕ್ಕಾಗಿ ನಾನು ಗಟ್ಟಿಯಾಗಬೇಕು ಎನಿಸಿತು. ಶಿಸ್ತಿನಿಂದ ಜೀವನ ನಡೆಸಬೇಕು ಎನಿಸಿತು. ಹಾಗಾಗಿ ನನ್ನ ವೈಯಕ್ತಿಕ ಆರೋಗ್ಯ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿದೆ’ ಎಂದಿದ್ದಾರೆ.
ಇಮ್ರಾನ್ ಖಾನ್ ಹತ್ತು ವರ್ಷದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅಬ್ಬಾಸ್ ಟೈರ್ವಾಲ ನಿರ್ದೇಶಿಸುತ್ತಿರುವ ವೆಬ್ ಸರಣಿಯಲ್ಲಿ ಇಮ್ರಾನ್ ನಟಿಸುತ್ತಿದ್ದು, ವೆಬ್ ಸರಣಿ ಜನಪ್ರಿಯ ಒಟಿಟಿಯೊಂದರಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ