AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಲೋವರ್ ಕಡಿಮೆಯಾಗಿದ್ದಕ್ಕೆ ಇನ್​ಫ್ಲುಯೆನ್ಸರ್ ಸಾವು, ಮೊದಲೇ ಊಹಿಸಿದ್ದೆ ಎಂದ ನಟಿ

Influencer Misha Agarwal: ಇನ್​ಸ್ಟಾಗ್ರಾಂ, ಫೇಸ್​ಬುಕ್​ನ ನಕಲಿ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಅಲ್ಲಿ ಬರುವ ಲೈಕುಗಳು, ಕಮೆಂಟುಗಳೇ ನಿಜವೆಂದು ನಂಬಿಕೊಂಡಿರುವ ಲಕ್ಷಾಂತರ ಜನರಿದ್ದಾರೆ. ಇಂಥಹದ್ದೇ ಒಂದು ಸುಳ್ಳು ಜಗತ್ತನ್ನು ನಂಬಿ ಬದುಕುತ್ತಿದ್ದ ಇನ್​ಸ್ಟಾಗ್ರಾಂ ಇನ್​ಫ್ಲುಯೆನ್ಸರ್ ಮಿಶಾ ಅಗರ್ವಾಲ್ ತಮ್ಮ ಫಾಲೋವರ್​ಗಳ ಸಂಖ್ಯೆ ಕಡಿಮೆ ಆಯ್ತೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫಾಲೋವರ್ ಕಡಿಮೆಯಾಗಿದ್ದಕ್ಕೆ ಇನ್​ಫ್ಲುಯೆನ್ಸರ್ ಸಾವು, ಮೊದಲೇ ಊಹಿಸಿದ್ದೆ ಎಂದ ನಟಿ
Misha Agarwal
ಮಂಜುನಾಥ ಸಿ.
|

Updated on:May 03, 2025 | 8:24 AM

Share

ಸಾಮಾಜಿಕ ಜಾಲತಾಣ (Social Media) ಒಂದು ಸುಳ್ಳು ಪ್ರಪಂಚವನ್ನು ಜನಗಳ ಸುತ್ತ ಕಟ್ಟಿದೆ. ನಕಲಿ ಜೀವನದ ಪ್ರದರ್ಶನ, ಅದಕ್ಕೆ ಬರುವ ಲೈಕು, ಕಮೆಂಟುಗಳೇ ನಿಜ ಪ್ರಶಂಸೆ, ಸಾಧನೆ ಎಂದು ನಂಬುತ್ತಿರುವ ಹೊಸ ವರ್ಗವೇ ಸೃಷ್ಟಿಯಾಗಿದೆ. ಫಾಲೋವರ್​ಗಳಿಗಾಗಿ ಏನು ಬೇಕಾದರೂ ಮಾಡುವ ಇನ್​ಫ್ಲುಯೆನ್ಸರ್​ಗಳು ಇದ್ದಾರೆ. ಇದೀಗ ಈ ನಕಲಿ ಪ್ರಪಂಚವನ್ನೇ ನಂಬಿದ್ದ ಒಬ್ಬ ಇನ್​ಫ್ಲುಯೆನ್ಸರ್ ಜೀವವನ್ನೇ ಕಳೆದುಕೊಂಡಿದ್ದಾರೆ. ಜನಪ್ರಿಯ ಇನ್​ಪ್ಲುಯೆನ್ಸರ್ ಆಗಿದ್ದ ಮಿಶಾ ಅಗರ್ವಾಲ್, ಫಾಲೋವರ್ಸ್ ಕಡಿಮೆ ಆದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಮಿಶಾ ಅಗರ್ವಾಲ್, ಒಳ್ಳೆಯ ಇನ್​ಸ್ಟಾಗ್ರಾಂ ಇನ್​ಫ್ಲುಯೆನ್ಸರ್ ಆಗಿದ್ದರು. ಆರಂಭದಲ್ಲಿ ವ್ಯಕ್ತಿಯ ದಿನ ನಿತ್ಯದ ಸಮಸ್ಯೆಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಹೇಳಿ ಬಹಳ ಜನಪ್ರಿಯತೆ ಗಳಿಸಿದ್ದ ಮಿಶಾ ಅಗರ್ವಾಲ್, ಫಾಲೋವರ್ ಹೆಚ್ಚಿಸಿಕೊಳ್ಳಲು ವ್ಲಾಗ್, ಕೊಲ್ಯಾಬ್, ಫ್ಯಾಷನ್ ಕಂಟೆಂಟ್​ಗಳನ್ನು ಸಹ ಹಾಕಲು ಪ್ರಾರಂಭಿಸಿದ್ದರು. ಆರಂಭದಲ್ಲಿ ತುಸು ಸದ್ದು ಮಾಡಿದ ಮಿಶಾ ಅಗರ್ವಾಲ್​ ಆ ನಂತರ ಬೇಡಿಕೆ ಕಳೆದುಕೊಂಡರು. ಅವರ ಫಾಲೋವರ್​ಗಳ ಸಂಖ್ಯೆಯೂ ಕಡಿಮೆ ಆಗತೊಡಗಿತು. ಇದರಿಂದ ಬೇಸರಗೊಂಡ ಮಿಶಾ ಅಗರ್ವಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಿಶಾರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರ ಸಹೋದರಿ, ‘ನನ್ನ ಸಹೋದರಿ ಇನ್​ಸ್ಟಾಗ್ರಾಂನ ಸುತ್ತ ಒಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಳು. ಆಕೆಯ ಫಾಲೋವರ್ಸ್​ ಆಕೆಯ ಪ್ರಪಂಚ ಆಗಿದ್ದರು. ಆಕೆಗೆ ಇದ್ದ ಏಕೈಕ ಗುರಿ 1 ಮಿಲಿಯನ್ ಫಾಲೋವರ್​ಗಳನ್ನು ಪಡೆಯುವುದಾಗಿತ್ತು. ಆಕೆಯ ಫಾಲೋವರ್​ಗಳ ಸಂಖ್ಯೆ ಕಡಿಮೆ ಆಗಲು ಶುರುವಾದಾಗ ಆಕೆ ತಳಮಳಗೊಂಡಳು. ಆಕೆಗೆ ತಾನು ಮುಖ್ಯಳಲ್ಲ, ತಾನು ಮೌಲ್ಯ ಇಲ್ಲದವಳು ಅನಿಸಲು ಶುರುವಾಯ್ತು. ಹಲವು ಬಾರಿ ಈ ವಿಷಯಕ್ಕೆ ನನ್ನನ್ನು ತಬ್ಬಿ ಅತ್ತಿದ್ದಿದೆ. ನಾನು ಸಮಾಧಾನ ಮಾಡಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ:ತಮಿಳುನಾಡು: ಬಾಲಕಿಯ ಕತ್ತು ಸೀಳಿ ಚಿನ್ನದ ಸರ ಕದ್ದುಹೋದ ಇನ್​ಸ್ಟಾಗ್ರಾಂ ಫ್ರೆಂಡ್​

ಆಕೆ ಎಲ್​ಎಲ್​ಬಿ ಪದವೀಧರೆ, ಪಿಸಿಎಸ್​ಜೆ ಪರೀಕ್ಷೆಯ ತಯಾರಿ ನಡೆಸುತ್ತಿದ್ದಳು. ಅದನ್ನು ಆಕೆಗೆ ನೆನಪು ಮಾಡಿಸಿದೆ. ಚೆನ್ನಾಗಿ ಓದಿ ಒಂದು ದಿನ ಜಡ್ಜ್ ಆಗು ಎಂದೆ ಆದರೆ ಅದನ್ನೆಲ್ಲ ಆಕೆ ನಿರ್ಲಕ್ಷ್ಯ ಮಾಡಿದಳು. ಇನ್​ಸ್ಟಾಗ್ರಾಂ ಆಕೆಯ ಪ್ರಪಂಚ ಆಗಿಬಿಟ್ಟಿತ್ತು. ಫಾಲೋವರ್ಸ್ ಕಡಿಮೆ ಆದಂತೆ ಆಕೆ ಖಿನ್ನತೆಗೆ ಜಾರಿದಳು’ ಎಂದು ಮಿಶಾ ಅಗರ್ವಾಲ್ ಅವರ ಸಹೋದರಿ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ನಿರ್ಮಾಪಕ ತಾಪ್ಸಿ ಪನ್ನು, ‘ಇಂಥಹದ್ದೊಂದು ಘಟನೆ ನಡೆಯುತ್ತದೆಯೆಂದು ನಾನು ಮೊದಲೇ ಊಹಿಸಿ ಭಯಪಟ್ಟಿದ್ದೆ. ನನ್ನ ಭಯ ನಿಜವಾಗಿದೆ. ಒಂದು ದಿನ ಬರುತ್ತದೆ ಅಂದು ಸಂಖ್ಯೆಗಳು, ನಿಜವಾದ ಪ್ರೀತಿ ಮತ್ತು ಗೆಳೆತನವನ್ನು ಹಿಂದೆ ಸರಿಸಿ ಬಿಡುತ್ತವೆ ಎಂಬುದು ನನ್ನ ಭಯವಾಗಿತ್ತು ಅದೀಗ ನಿಜವಾಗಿದೆ’ ಎಂದಿದ್ದಾರೆ ತಾಪ್ಸಿ ಪನ್ನು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 am, Sat, 3 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್