Sanya Malhotra: ಆಮಿರ್​ ಖಾನ್​ ಬಳಗದ ಹುಡುಗಿ ಸಾನ್ಯಾ ಮಲ್ಹೋತ್ರಾ ಈಗ ಶಾರುಖ್​ ಖಾನ್​ ಜೊತೆ ಕೈ ಜೋಡಿಸಿದ್ದೇಕೆ? ನಿಜವಾಯ್ತು ಅನುಮಾನ

|

Updated on: May 26, 2023 | 7:47 PM

ಸಾನ್ಯಾ ಮಲ್ಹೋತ್ರಾ ಅವರ ಬಗ್ಗೆ ಇಂಥದ್ದೊಂದು ಗುಮಾನಿ ಹಲವರಿಗೆ ಮೂಡಿತ್ತು. ಆ ಬಗ್ಗೆ ಕೆಲವು ವರದಿಗಳು ಪ್ರಕಟ ಆಗಿದ್ದವು. ಈಗ ಆ ಗುಮಾನಿ ನಿಜವಾಗಿದೆ.

Sanya Malhotra: ಆಮಿರ್​ ಖಾನ್​ ಬಳಗದ ಹುಡುಗಿ ಸಾನ್ಯಾ ಮಲ್ಹೋತ್ರಾ ಈಗ ಶಾರುಖ್​ ಖಾನ್​ ಜೊತೆ ಕೈ ಜೋಡಿಸಿದ್ದೇಕೆ? ನಿಜವಾಯ್ತು ಅನುಮಾನ
ಸಾನ್ಯಾ ಮಲ್ಹೋತ್ರಾ, ಶಾರುಖ್​ ಖಾನ್​
Follow us on

ನಟಿ ಸಾನ್ಯಾ ಮಲ್ಹೋತ್ರಾ (Sanya Malhotra) ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಕೆಲವೇ ವರ್ಷಗಳು ಕಳೆದಿವೆ. ಅಷ್ಟರಲ್ಲಾಗಲೇ ಅವರು ಸಖತ್​ ಜನಪ್ರಿಯತೆ ಪಡೆದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅವರಿಗೆ ಸೂಪರ್​ ಸಕ್ಸಸ್​ ಸಿಕ್ಕಿತು. ಹೌದು, ಅವರು ನಟಿಸಿದ್ದ ಚೊಚ್ಚಲ ಚಿತ್ರ ‘ದಂಗಲ್​’. 2016ರಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಅವರಿಗೆ ಆಮಿರ್​ ಖಾನ್​ ಜೊತೆ ನಟಿಸುವ ಅವಕಾಶ ಸಿಕ್ಕಿತು. ತಂದೆ-ಮಗಳ ಪಾತ್ರದಲ್ಲಿ ಆಮಿರ್​ ಖಾನ್​ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದರು. ಬಳಿಕ ಆಮಿರ್​ ಖಾನ್​ ನಿರ್ಮಾಣ ಮಾಡಿ, ನಟಿಸಿದ ‘ಸೀಕ್ರೆಟ್​ ಸೂಪರ್​ ಸ್ಟಾರ್​’ಸಿನಿಮಾದ ಒಂದು ಹಾಡಿಗೆ ಸಾನ್ಯಾ ಅವರು ನೃತ್ಯ ನಿರ್ದೇಶನ ಮಾಡಿದ್ದರು. ಹೀಗೆ ಆಮಿರ್​ ಖಾನ್​ ಬಳಗದಲ್ಲಿ ಗುರುತಿಸಿಕೊಂಡಿದ್ದ ಅವರು ಈಗ ಶಾರುಖ್​ ಖಾನ್​ (Shah Rukh Khan) ಜೊತೆ ನಟಿಸಿದ್ದಾರೆ. ‘ಜವಾನ್​’ (Jawan) ಸಿನಿಮಾದಲ್ಲಿ ಸಾನ್ಯಾ ಮಲ್ಹೋತ್ರಾ ಕೂಡ ಬಣ್ಣ ಹಚ್ಚಿದ್ದಾರೆ ಎಂಬುದು ಈಗ ಖಚಿತವಾಗಿದೆ. ಸ್ವತಃ ಅವರೇ ಈ ವಿಷಯ ಸ್ಪಷ್ಟಪಡಿಸಿದ್ದಾರೆ ಎಂದು ‘ಈ ಟೈಮ್ಸ್​’ ವರದಿ ಮಾಡಿದೆ.

‘ಜವಾನ್​’ ಸಿನಿಮಾಗೆ ಅಟ್ಲಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಶಾರುಖ್​ ಖಾನ್​ ಹೀರೋ. ನಯನತಾರಾ, ವಿಜಯ್​ ಸೇತುಪತಿ ಮುಂತಾದ ಘಟಾನುಘಟಿ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಸಾನ್ಯಾ ಮಲ್ಹೋತ್ರಾ ಅವರು ಸಹ ಈ ಬಹುನಿರೀಕ್ಷಿತ ಚಿತ್ರದಲ್ಲಿ ನಟಿಸಿರಬಹುದು ಎಂಬ ಗುಮಾನಿ ಹಲವರಿಗೆ ಮೂಡಿತ್ತು. ಆ ಬಗ್ಗೆ ಕೆಲವು ವರದಿಗಳು ಪ್ರಕಟ ಆಗಿದ್ದವು. ಈಗ ಆ ಗುಮಾನಿ ನಿಜವಾಗಿದೆ. ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸಾನ್ಯಾ ಮಲ್ಹೋತ್ರಾ ಅವರು ಖುಷಿಯಾಗಿದ್ದಾರೆ.

ಇದನ್ನೂ ಓದಿ: Aamir Khan: ‘ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್​ ಖಾನ್​ ಮದುವೆ ಆಗ್ತಾರೆ’; ಬ್ರೇಕಿಂಗ್​ ನ್ಯೂಸ್​ ನೀಡಿದ ಕೆಆರ್​ಕೆ

ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾದ ಗೆಲುವಿನ ಬಳಿಕ ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಪ್ರಸ್ತುತ ಶಾರುಖ್​ ಖಾನ್​ ಅವರು ‘ಡಂಕಿ’ ಮತ್ತು ‘ಜವಾನ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಜವಾನ್​’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್​ ದಿನಾಂಕ ತಿಳಿಸಲು ಇತ್ತೀಚೆಗೆ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್​ 7ರಂದು ‘ಜವಾನ್​’ ತೆರೆಕಾಣಲಿದೆ ಎಂದು ಶಾರುಖ್​ ಖಾನ್​ ತಿಳಿಸಿದ್ದಾರೆ.

ಇದನ್ನೂ ಓದಿ: Shah Rukh Khan: ಜೂಹಿ ಚಾವ್ಲಾ ಪುತ್ರಿ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ ನಟ ಶಾರುಖ್​ ಖಾನ್​; ಫೋಟೋ ವೈರಲ್​

ಶಾರುಖ್​ ಖಾನ್​ ಅವರ ಹೋಂ ಬ್ಯಾನರ್​ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಶಾರುಖ್​ ಪತ್ನಿ ಗೌರಿ ಖಾನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೇಶದ ವಿವಿಧ ನಗರಗಳಲ್ಲಿ ಈ ಚಿತ್ರದ ಶೂಟಿಂಗ್​ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.