ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ: ಜಾನ್ಹವಿ ಆಕ್ರೋಶ

Janhvi Kapoor: ನೆರೆಯ ಬಾಂಗ್ಲಾದೇಶದಲ್ಲಿ ಹಿಂದು ಯುವಕ ದೀಪು ದಾಸ್ ಹತ್ಯೆ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕೆಲವು ಸಿನಿಮಾ ನಟಿಯರು ಸಹ ದೀಪಿ ದಾಸ್ ಹತ್ಯೆ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಶೇಷವಾಗಿ ನಟಿ ಜಾನ್ಹವಿ ಕಪೂರ್, ದೀಪು ದಾಸ್ ಹತ್ಯೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದನ್ನು ಟೀಕಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ: ಜಾನ್ಹವಿ ಆಕ್ರೋಶ
Janhvi Kapoorr

Updated on: Dec 26, 2025 | 3:36 PM

ನೆರೆಯ ಬಾಂಗ್ಲಾದೇಶದಲ್ಲಿ ಹಿಂದು ಯುವಕ ದೀಪು ದಾಸ್ (Deepu Das) ಹತ್ಯೆ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕೆಲವು ಸಿನಿಮಾ ನಟಿಯರು ಸಹ ದೀಪಿ ದಾಸ್ ಹತ್ಯೆ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಶೇಷವಾಗಿ ನಟಿ ಜಾನ್ಹವಿ ಕಪೂರ್, ದೀಪು ದಾಸ್ ಹತ್ಯೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದನ್ನು ‘ಹಿಪಾಕ್ರಸಿ’ (ಬೂಟಾಟಿಕೆ) ಎಂದು ಕರೆದಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಜಾನ್ಹವಿ ಕಪೂರ್, ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಅನಾಗರಿಕ. ಇದು ನರಮೇಧ. ಎಲ್ಲ ಘಟನೆಗಳಲ್ಲಿ ಒಂದು ಎಂಬಂತೇನಲ್ಲ. ಈ ಅಮಾನವೀಯ ಸಾರ್ವಜನಿಕ ಗುಂಪು ಹತ್ಯೆಯ ಬಗ್ಗೆ ನಿಮಗೆ ತಿಳಿದಿಲ್ಲದೇ ಇದ್ದರೆ, ಅದರ ಬಗ್ಗೆ ಓದಿ, ವೀಡಿಯೊಗಳನ್ನು ನೋಡಿ, ಪ್ರಶ್ನೆಗಳನ್ನು ಕೇಳಿ. ಇದೆಲ್ಲದರ ಹೊರತಾಗಿಯೂ ನಿಮಗೆ ಕೋಪ ಬರದಿದ್ದರೆ, ನಮಗೆ ತಿಳಿಯುವ ಮೊದಲೇ ನಮ್ಮನ್ನು ನಾಶಮಾಡುವ ಪ್ರಕ್ರಿಯೆಯ ದಾಳವಾಗಿದ್ದೀರಿ ಎಂದರ್ಥ. ನಮ್ಮ ಸ್ವಂತ ಸಹೋದರ ಸಹೋದರಿಯರು ಸುಟ್ಟು ಸಾಯುತ್ತಿರುವಾಗ ನಾವು ಪ್ರಪಂಚದಾದ್ಯಂತ ನಡೆಯುತ್ತಿರುವ ಬೇರೆ ವಿಷಯಗಳ ಬಗ್ಗೆ ಅಳುತ್ತಲೇ ಇರುತ್ತೇವೆ. ನಾವು ಸಂತ್ರಸ್ತರಾಗಲಿ ಅಥವಾ ಅಪರಾಧಿಗಳಾಗಲಿ, ಕೋಮು ಹಿಂಸಾಚಾರ ಮತ್ತು ತೀವ್ರಗಾಮಿತನವನ್ನು ಮೊದಲು ಖಂಡಿಸಬೇಕು. ನಾವು ಅದೃಶ್ಯ ರೇಖೆಯ ಎರಡೂ ಬದಿಗಳಲ್ಲಿ ವಾಸಿಸುತ್ತಿದ್ದೇವೆ ಎಂದು ನಂಬುವ ಪ್ಯಾದೆಗಳು. ಇದನ್ನು ಗುರುತಿಸಿ. ಮತ್ತು ಈ ಕೋಮು ಘರ್ಷಣೆಯಲ್ಲಿ ನಿರಂತರವಾಗಿ ಕಳೆದುಹೋಗುವ ಮತ್ತು ಭಯಭೀತರಾಗುವ ಮುಗ್ಧ ಜೀವಗಳ ಪರವಾಗಿ ನಿಲ್ಲಲು ಜ್ಞಾನದಿಂದ ನಿಮ್ಮನ್ನು ಸಜ್ಜುಗೊಳಿಸಿ’ ಎಂದಿದ್ದಾರೆ ಜಾನ್ಹವಿ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಸಿನಿಮಾವ ಕೊಂಡಾಡಿದ ಬಾಲಿವುಡ್ ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಅವರು ಮಾತ್ರವಲ್ಲದೆ ನಟಿ ಕಾಜಲ್ ಅಗರ್ವಾಲ್ ಸಹ ಈ ವಿಷಯದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬನ ಮರಕ್ಕೆ ಕಟ್ಟಿ ಸುಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ನಟಿ ಕಾಜೊಲ್, ‘ಆಲ್ ಐಸ್ ಆನ್ ಬಾಂಗ್ಲಾದೇಶಿ ಹಿಂದೂ’ ಎಂದಿದ್ದಾರೆ. ‘ದಯವಿಟ್ಟು ಎದ್ದೇಳಿ ಹಿಂದೂಗಳೆ, ಮೌನ ನಿಮ್ಮನ್ನು ಕಾಪಾಡಲಾರದು’ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಈ ಹಿಂದೆ ಕೆಲವು ಬಾಲಿವುಡ್ ನಟಿಯರು ಗಾಜಾ, ಇಸ್ರೇಲ್ ಇನ್ನಿತರೆ ದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪೋಸ್ಟ್​​ಗಳನ್ನು ಹಂಚಿಕೊಂಡಿದ್ದರು, ಆದರೆ ಈಗ ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ಪೋಸ್ಟ್ ಹಂಚಿಕೊಂಡಿಲ್ಲ, ಇದು ಅವರ ಕಪಟತನವನ್ನು ತೋರುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಜಾನ್ಹವಿ ಹಾಗೂ ಕಾಜಲ್ ಅವರನ್ನು ಅಭಿನಂದಿಸಿದ್ದಾರೆ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Fri, 26 December 25