ಜಾನ್ವಿ ಕಪೂರ್​ಗೆ ಒಟ್ಟೊಟ್ಟಿಗೆ ಸಿಕ್ತು ಮೂರು ದೊಡ್ಡ ಆಫರ್; ಇನ್ನಾದರೂ ಬದಲಾಗುತ್ತಾ ಅದೃಷ್ಟ?

|

Updated on: Feb 09, 2024 | 8:45 AM

ಜಾನ್ವಿ ಕಪೂರ್ ಸದ್ಯ ಜೂ. ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಏಪ್ರಿಲ್ 5ರಂದು ರಿಲೀಸ್ ಆಗುತ್ತಿದೆ. ದಕ್ಷಿಣ ಭಾರತದಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾ. ಇದರ ಜೊತೆಗೆ ಇನ್ನೂ ಮೂರು ಸಿನಿಮಾಗಳು ಅವರಿಗೆ ಸಿಕ್ಕಿವೆ.

ಜಾನ್ವಿ ಕಪೂರ್​ಗೆ ಒಟ್ಟೊಟ್ಟಿಗೆ ಸಿಕ್ತು ಮೂರು ದೊಡ್ಡ ಆಫರ್; ಇನ್ನಾದರೂ ಬದಲಾಗುತ್ತಾ ಅದೃಷ್ಟ?
ಜಾನ್ವಿ
Follow us on

ನಟಿ ಜಾನ್ವಿ ಕಪೂರ್ (Janhvi Kapoor) ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಅವರಿಗೆ ಮೊದಲ ಸಿನಿಮಾ ‘ದಡಕ್’ ಚಿತ್ರದಿಂದ ಗೆಲುವು ಸಿಕ್ಕಿತ್ತು. ಇದಾದ ಬಳಿಕ ಅವರಿಗೆ ಗೆಲುವಿನ ರುಚಿ ಸವಿಯೋಕೆ ಆಗಿಲ್ಲ. ಈ ವರ್ಷ ತಮ್ಮ ಅದೃಷ್ಟ ಬದಲಾಗಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ. ಇದಕ್ಕೆ ಕಾರಣ ಅವರಿಗೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳು ಸಿಕ್ಕಿವೆ. ಎಲ್ಲವೂ ಸ್ಟಾರ್ ಹೀರೋಗಳ ಚಿತ್ರವೇ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

ಜಾನ್ವಿ ಕಪೂರ್ ಅವರು ಸದ್ಯ ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಏಪ್ರಿಲ್ 5ರಂದು ರಿಲೀಸ್ ಆಗೋ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾ. ಇದಾದ ಬಳಿಕ ರಾಮ್ ಚರಣ್ ಮುಂದಿನ ಸಿನಿಮಾದಲ್ಲಿ ಜಾನ್ವಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ರಾಮ್ ಚರಣ್ ಮಾತ್ರವಲ್ಲದೆ ತಮಿಳು ನಟ ಸೂರ್ಯ ಹಾಗೂ ಹಿಂದಿ ನಟ ವರುಣ್ ಧವನ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರಂತೆ.

ರಾಮ್ ಚರಣ್ ಅವರ ಮುಂಬರುವ ಸಿನಿಮಾ ‘ಆರ್​ಸಿ 16’ಗೆ ಜಾನ್ವಿ ಕಪೂರ್ ನಾಯಕಿ. ಅವರು ರಾಮ್ ಚರಣ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಮೊದಲ ಸಿನಿಮಾ. ಇದು ಪ್ಯಾನ್ ಇಂಡಿಯಾ ಚಿತ್ರ ಆಗಿದ್ದು ‘ಉಪ್ಪೇನಾ’ ಖ್ಯಾತಿಯ ಬುಚಿ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅವರು ಕಥೆ ಕೇಳಿ ಇಷ್ಟಪಟ್ಟಿದ್ದಾರೆ.

ಇದರ ಜೊತೆಗೆ ಸೂರ್ಯ ನಟಿಸುತ್ತಿರುವ ‘ಕರ್ಣ’ ಸಿನಿಮಾದಲ್ಲಿ ದ್ರೌಪದಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಜಾನ್ವಿ ಕಪೂರ್ ಅವರ ಲುಕ್​ ಟೆಸ್ಟ್ ಕೂಡ ಪೂರ್ಣಗೊಂಡಿದೆ.

ಇದನ್ನೂ ಓದಿ: ಮತ್ತೊಂದು ತೆಲುಗು ಆಫರ್ ಬಾಚಿಕೊಂಡ ಜಾನ್ವಿ ಕಪೂರ್; ಸ್ಟಾರ್ ಹೀರೋ ಜೊತೆ ನಟನೆ

ಜಾನ್ವಿ ಹಾಗೂ ವರುಣ್ ಧವನ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಶಶಾಂಕ್ ಖೈತಾನ್ ನಿರ್ದೇಶನದ, ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾಗೆ ಜಾನ್ವಿ ನಾಯಕಿ ಎನ್ನಲಾಗಿದೆ. ಧರ್ಮ ಪ್ರೊಡಕ್ಷನ್ ಜೊತೆ ಜಾನ್ವಿಗೆ ಒಳ್ಳೆಯ ನಂಟಿದೆ. ಹೀಗಾಗಿ, ಅವರಿಗೆ ಈ ಆಫರ್ ಹೋಗಿದೆ. ಈ ಚಿತ್ರದ ಕೆಲಸಗಳು ಈ ವರ್ಷ ಮೇ ತಿಂಗಳಲ್ಲಿ ಆರಂಭ ಆಗುವ ಸಾಧ್ಯತೆ ಇದೆ. ಜಾನ್ವಿ ಕಪೂರ್ ಅವರಿಗೆ ಒಟ್ಟೊಟ್ಟಿಗೆ ಇಷ್ಟೊಂದು ಆಫರ್ ಸಿಕ್ಕಿರುವುದರಿಂದ ಅವರಿಗೆ ಖುಷಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ