ಈ ವರ್ಷದ ಸಕ್ಸಸ್ಫುಲ್ ಸಿನಿಮಾಗಳ ಪಟ್ಟಿಯಲ್ಲಿ ‘ಜವಾನ್’ ಸಿನಿಮಾ (Jawan Movie) ಅಗ್ರ ಸ್ಥಾನ ಪಡೆದುಕೊಂಡಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ 1004 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಭಾರತದಲ್ಲಿ 19ನೇ ದಿನಕ್ಕೆ 566 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಗೆಲುವಿನಿಂದ ಶಾರುಖ್ ಖಾನ್ (Shah Rukh Khan) ಅವರು ಬಾಕ್ಸ್ ಆಫೀಸ್ ಕಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಟ್ಲಿ ನಿರ್ದೇಶನದ ಈ ಚಿತ್ರಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸತತ 19 ದಿನ ಪ್ರದರ್ಶನ ಕಂಡಿರುವ ‘ಜವಾನ್’ ಸಿನಿಮಾ ಸೋಮವಾರ (ಸೆಪ್ಟೆಂಬರ್ 25) ಭಾರತದ ಮಾರುಕಟ್ಟೆಯಲ್ಲಿ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈವರೆಗೆ ಭಾರತದಲ್ಲಿ ಒಟ್ಟು ಕಲೆಕ್ಷನ್ (Jawan Box Office Collection) 566 ಕೋಟಿ ರೂಪಾಯಿ ಆಗಿದ್ದು, ಮುಂದಿನ ಗುರಿ 600 ಕೋಟಿ ರೂಪಾಯಿ! ನಾಲ್ಕನೇ ವೀಕೆಂಡ್ನಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡರೆ ಖಂಡಿತವಾಗಿಯೂ ಈ ಗುರಿ ತಲುಪಬಹುದು.
ಶಾರುಖ್ ಖಾನ್, ಪ್ರಿಯಾಮಣಿ, ಸುನಿಲ್ ಗ್ರೋವರ್, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ದೀಪಿಕಾ ಪಡುಕೋಣೆ ಮುಂತಾದವರು ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಗೆಲುವು ಸಿಕ್ಕಿದ್ದರಿಂದ ಈ ಎಲ್ಲ ಕಲಾವಿದರ ಖ್ಯಾತಿ ಹೆಚ್ಚಿದೆ. ನಿರ್ದೇಶಕ ಅಟ್ಲಿ ಅವರು ಈಗ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.
ಇದನ್ನೂ ಓದಿ: ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಜವಾನ್’ ಸಿನಿಮಾ; ಶಾರುಖ್ ಖಾನ್ ಹೊಸ ದಾಖಲೆ
ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾದಲ್ಲಿ ಆ್ಯಕ್ಷನ್ ಅವತಾರ ತಾಳಿದ್ದಾರೆ. ಇದು ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗಿದೆ. ಈ ಸಿನಿಮಾದಲ್ಲಿ ಮಾಸ್ ಮನರಂಜನೆಯ ಜೊತೆಗೆ ಅನೇಕ ಸಾಮಾಜಿಕ ಕಳಕಳಿಯ ವಿಷಯಗಳನ್ನು ಕೂಡ ಹೇಳಲಾಗಿದೆ. ಚಿತ್ರದ ಗೆಲುವಿಗೆ ಇದು ಕೂಡ ಪ್ರಮುಖ ಕಾರಣ. ಉತ್ತರ ಭಾರತ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ‘ಜವಾನ್’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದನ್ನೂ ಓದಿ: ‘ಜವಾನ್’ ತಂಡದಲ್ಲಿ ಕಿರಿಕ್? ನಯನತಾರಾ ಮುನಿಸಿಗೆ ಪ್ರತಿಕ್ರಿಯೆ ನೀಡಿದ ಶಾರುಖ್ ಖಾನ್
ಗೌರಿ ಖಾನ್ ಅವರು ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ‘ಜವಾನ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅವರಿಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗಿದೆ. ಶಾರುಖ್ ಖಾನ್ ನಟಿಸುತ್ತಿರುವ ‘ಡಂಕಿ’ ಸಿನಿಮಾ ಕೂಡ ಇದೇ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಆದರೆ ಒಂದೇ ವರ್ಷದಲ್ಲಿ ಮೂರು ಗೆಲುವು ಪಡೆದ ಖ್ಯಾತಿ ಅವರಿಗೆ ಸಲ್ಲಲಿದೆ. ‘ಡಂಕಿ’ ಚಿತ್ರಕ್ಕೆ ರಾಜ್ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡುತ್ತಿರುವುದರಿಂದ ಗೆಲುವು ಖಚಿತ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.