ಬರ್ತಿದೆ ‘ಜೆಎನ್​ಯು’ ಸಿನಿಮಾ; ಶಿಕ್ಷಣ ಸಂಸ್ಥೆ ಬಗ್ಗೆ ಇರಲಿದೆಯೇ ಕಥೆ?

ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್​ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈಗ ‘ಜೆಎನ್​ಯು’ ಹೆಸರಲ್ಲಿ ಸಿನಿಮಾ ಬರ್ತಿದೆ.

ಬರ್ತಿದೆ ‘ಜೆಎನ್​ಯು’ ಸಿನಿಮಾ; ಶಿಕ್ಷಣ ಸಂಸ್ಥೆ ಬಗ್ಗೆ ಇರಲಿದೆಯೇ ಕಥೆ?
ಊರ್ವಶಿ

Updated on: Mar 14, 2024 | 8:47 AM

ಕೆಲವು ಸಿನಿಮಾಗಳ ಟೈಟಲ್​ಗಳು ಸಖತ್ ಸದ್ದು ಮಾಡುತ್ತವೆ. ಈಗ ‘ಜೆಎನ್​ಯು’ ಸಿನಿಮಾ ಶೀರ್ಷಿಕೆ ಸದ್ದು ಮಾಡುತ್ತಿದೆ. ‘ಜೆಎನ್​ಯು’ (JNU Movie) ಎಂದರೆ ‘ಜವಾಹರ್​ಲಾಲ್ ನೆಹರು ಯೂನಿವರ್ಸಟಿ’ ಅಲ್ಲ. ಈ ಸಿನಿಮಾದಲ್ಲಿ ‘ಜೆಎನ್​ಯು’ ಎಂದರೆ ‘ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ’ ಎಂದು. ಈ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್​ನಲ್ಲಿ ಕೈ ಒಳಗೆ ಭಾರತದ ಮ್ಯಾಪ್ ಇದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದಾರೆ.

ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್​ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದು ಭಯೋತ್ಪಾದಕರನ್ನು ಉತ್ಪಾದಿಸುವ ಶಿಕ್ಷಣ ಸಂಸ್ಥೆ ಎಂದು ಅನೇಕರು ಆರೋಪಿಸಿದ್ದು ಇದೆ. ಈಗ ‘ಜೆಎನ್​ಯು’ ಸಿನಿಮಾ ಬರುತ್ತಿರುವುದು ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: ಪಾಕಿಸ್ತಾನದ ಈ ಬೌಲರ್ ಮೇಲೆ ಊರ್ವಶಿ ರೌಟೇಲಾಗೆ ಹೆಚ್ಚಿತು ಒಲವು? ಟ್ರೋಲ್​ಗೆ ಒಳಗಾದ ನಟಿ

ಊರ್ವಶಿ ರೌಟೇಲಾ ಅವರು ‘ಜೆಎನ್​ಯು’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ಪೋಸ್ಟರ್​ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ನೀವು ನಿಮ್ಮನ್ನು ಸೆಲೆಬ್ರಿಟಿ ಎಂದು ಕರೆದುಕೊಳ್ಳಬೇಡಿ. ನೀವು ಭಾರತದಲ್ಲಿ ದ್ವೇಷವನ್ನು ಹರಡುತ್ತಿದ್ದೀರಿ’ ಎಂದು ಬರೆಯಲಾಗಿದೆ. ಇನ್ನೂ ಕೆಲವರು ‘ಈ ರೀತಿಯ ಟ್ರ್ಯಾಪ್​ಗಳಿಗೆ ಜನರು ಬಲಿಯಾಗುವುದಿಲ್ಲ. ಇದೊಂದು ಪ್ರೊಪೊಗಾಂಡ ಸಿನಿಮಾ’ ಎಂದು ಕರೆದಿದ್ದಾರೆ.

ಜೆಎನ್​ಯು ಸಿನಿಮಾ ಪೋಸ್ಟರ್​

ವಿನಯ್ ಶರ್ಮಾ ಅವರು ‘ಜೆಎನ್​ಯು’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಊರ್ವಶಿ ರೌಟೇಲಾ ಜೊತೆಗೆ ಸಿದ್ದಾರ್ಥ್ ಬೋಡ್ಕೆ, ಪಿಯುಷ್ ಮಿಶ್ರಾ, ರವಿ ಕಿಶನ್, ರಶ್ಮಿ ದೇಸಾಯಿ ಮೊದಲಾದವರು ನಟಿಸಿದ್ದಾರೆ.  ಈ ಚಿತ್ರ ರಿಲೀಸ್​ಗೂ ಮೊದಲೇ ವಿವಾದ ಸೃಷ್ಟಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us