‘ವಾರ್ 2’ ಹೊಸ ಹಾಡಿನಲ್ಲಿ ಧೂಳೆಬ್ಬಿಸಿದ ಜೂ. ಎನ್​ಟಿಆರ್, ಹೃತಿಕ್ ರೋಷನ್

‘ವಾರ್ 2’ ಸಿನಿಮಾದ ‘ಜನಾಬ್-ಏ-ಆಲಿ’ ಹಾಡಿನ ಪ್ರೋಮೋ ಬಿಡುಗಡೆ ಆಗಿದೆ. ಇದು ಭರ್ಜರಿ ಡ್ಯಾನ್ಸ್ ನಂಬರ್. ಪರಸ್ಪರ ಪೈಪೋಟಿ ನೀಡುವ ರೀತಿಯಲ್ಲಿ ಜೂನಿಯರ್ ಎನ್​​ಟಿಆರ್​ ಹಾಗೂ ಹೃತಿಕ್ ರೋಷನ್ ಡ್ಯಾನ್ಸ್ ಮಾಡಿದ್ದಾರೆ. ಈಗ ಬರೀ ಪ್ರೋಮೋ ಬಂದಿದೆ. ಪೂರ್ತಿ ಹಾಡು ನೋಡಬೇಕು ಎಂದರೆ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರಬೇಕು.

‘ವಾರ್ 2’ ಹೊಸ ಹಾಡಿನಲ್ಲಿ ಧೂಳೆಬ್ಬಿಸಿದ ಜೂ. ಎನ್​ಟಿಆರ್, ಹೃತಿಕ್ ರೋಷನ್
Hrithik Roshan, Jr Ntr

Updated on: Aug 07, 2025 | 8:44 PM

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಅವರು ಎಂಥ ಅದ್ಭುತ ಡ್ಯಾನ್ಸರ್ ಎಂಬುದು ಎಲ್ಲರಿಗೂ ಗೊತ್ತು. ಅದೇ ರೀತಿ, ಜೂನಿಯರ್ ಎನ್​ಟಿಆರ್ ಕೂಡ ಡ್ಯಾನ್ಸ್ ವಿಚಾರದಲ್ಲಿ ಯಾರಿಗೂ ಕಡಿಮೆ ಇಲ್ಲ. ಇವರಿಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿದರೆ ಅಭಿಮಾನಿಗಳ ಕಣ್ಣಿಗೆ ಹಬ್ಬವೇ ಸರಿ. ‘ವಾರ್ 2’ (War 2) ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ ಮತ್ತು ಹೃತಿಕ್ ರೋಷನ್ ಅವರು ತೆರೆ ಹಂಚಿಕೊಂಡಿದ್ದಾರೆ. ಅವರಿಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿರುವ ‘ಜನಾಬ್-ಏ-ಆಲಿ’ ಹಾಡಿನ ಪ್ರೋಮೋ ಬಿಡುಗಡೆ ಆಗಿದೆ. ಇದರಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ (Jr NTR) ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.

ಹಲವು ಕಾರಣಗಳಿಂದಾಗಿ ‘ವಾರ್ 2’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಮೂಲಕ ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಆಗಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ನೋಡಿದರೆ ಪ್ರತಿ ಫ್ರೇಮ್​​ನಲ್ಲೂ ಅದ್ದೂರಿತನ ಕಾಣಿಸುತ್ತಿದೆ. ‘ಜನಾಬ್​-ಏ-ಆಲಿ’ ಹಾಡಿನ ತುಣುಕು ಕೂಡ ಸಖತ್ ರಿಚ್ ಆಗಿ ಮೂಡಿಬಂದಿದೆ.

ಅಂದಹಾಗೆ, ಈಗ ಬಿಡುಗಡೆ ಆಗಿರುವುದು ‘ಜನಾಬ್​-ಏ-ಆಲಿ’ ಹಾಡಿನ ಪ್ರೋಮೋ ಮಾತ್ರ. ಪೂರ್ತಿ ಹಾಡು ನೋಡಬೇಕು ಎಂಬ ಬಯಕೆ ಅಭಿಮಾನಿಗಳಿಗೆ ಮೂಡಿದೆ. ಆದರೆ ಸದ್ಯಕ್ಕೆ ಯೂಟ್ಯೂಬ್​ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿಲ್ಲ. ‘ಚಿತ್ರಮಂದಿರದಲ್ಲಿ ಮಾತ್ರ ಪೂರ್ತಿ ಹಾಡು’ ಎಂದು ಈ ಪ್ರೋಮೋದಲ್ಲಿ ತಿಳಿಸಲಾಗಿದೆ! ಹಾಡು ನೋಡಬೇಕು ಎಂಬ ಆಸೆ ಇರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರಲೇಬೇಕು.

Janaab-e-Aali Song Teaser | WAR 2 | Hrithik Roshan, NTR | Pritam, Sachet Tandon, Saaj Bhatt, Amitabh

ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಪ್ರೀತಮ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹೃತಿಕ್ ರೋಷನ್, ಜೂನಿಯರ್ ಎನ್​ಟಿಆರ್ ಜೊತೆ ಕಿಯಾರಾ ಅಡ್ವಾನಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅಂದಾಜು 400 ಕೋಟಿ ರೂಪಾಯಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಆಗಸದಲ್ಲಿ ‘ವಾರ್ 2’; ಗಾಬರಿಯಾದ ಮೆಲ್ಬರ್ನ್ ಜನತೆ: ವಿಡಿಯೋ ವೈರಲ್

ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಆದ್ದರಿಂದ ಅವರ ಅಭಿಮಾನಿಗಳ ಪಾಲಿಗೆ ಇದು ಸ್ಪೆಷಲ್ ಸಿನಿಮಾ. ಈ ಮೊದಲು ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡಿಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್​ಟಿಆರ್ ಅವರ ಡ್ಯಾನ್ಸ್ ಕಾಂಬಿನೇಷನ್ ಗಮನ ಸೆಳೆದಿತ್ತು. ಅದೇ ರೀತಿ ಈಗ ‘ಜನಾಬ್-ಏ-ಆಲಿ’ ಹಾಡಿನಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ ಅವರ ಕಾಂಬಿನೇಷನ್ ಸದ್ದು ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us