‘ವಾರ್ 2’ ಚಿತ್ರದ ತೆಲುಗು ವರ್ಷನ್ನಲ್ಲಿ ಇರಲಿದೆ ಹೃತಿಕ್ ಧ್ವನಿ; ಆದರೆ..
War 2 movie: ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇಬ್ಬರು ಸೂಪರ್ ಸ್ಟಾರ್ಗಳು ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಹಿಂದಿ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅಂದಹಾಗೆ ಸಿನಿಮಾದ ತೆಲುಗು ಆವೃತ್ತಿಗೆ ಸ್ವತಃ ಹೃತಿಕ್ ರೋಷನ್ ಧ್ವನಿ ನೀಡಿದ್ದಾರಂತೆ.

‘ವಾರ್ 2’ (War 2) ಸಿನಿಮಾ ರಿಲೀಸ್ ಆಗಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇವೆ. ಮುಂದಿನ ವಾರ ಈ ಚಿತ್ರವು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗ ಸಿನಿಮಾದ ಬಗ್ಗೆ ಒಂದು ಹೊಸ ವಿಚಾರ ಹೊರ ಬಿದ್ದಿದೆ. ಈ ಸಿನಿಮಾದ ತೆಲುಗು ವರ್ಷನ್ಗೆ ಹೃತಿಕ್ ಪಾತ್ರಕ್ಕೆ ಅವರದ್ದೇ ಧ್ವನಿ ಇರಲಿದೆಯಂತೆ. ಆದರೆ, ಎಐ ಮೂಲಕ ಇದನ್ನು ಮಾಡಲು ನಿರ್ಧರಿಸಲಾಗಿದೆ.
ಹೃತಿಕ್ ರೋಷನ್ ಖ್ಯಾತಿ ಸಾಕಷ್ಟಿದೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಈ ಕಾರಣಕ್ಕೆ ದಕ್ಷಿಣದಲ್ಲಿ ಅವರ ಧ್ವನಿಯ ಪರಿಚಯ ಅನೇಕರಿಗೆ ಇದೆ. ‘ವಾರ್ 2’ ಚಿತ್ರ ತೆಲುಗಿನಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ ಎಂಬುದು ವಿಶೇಷ. ಹೀಗಾಗಿ, ಹೃತಿಕ್ ಪಾತ್ರವನ್ನು ಬೇರೆ ಯಾರೋ ಡಬ್ ಮಾಡಿದರೆ ಪಾತ್ರಕ್ಕೆ ತೂಕ ಬರೋದಿಲ್ಲ ಎಂಬುದು ತಂಡದವರಿಗೆ ಸ್ಪಷ್ಟವಾಗಿದೆ. ಹೀಗಾಗಿ, ಅವರು ಹೊಸ ತಂತ್ರವನ್ನು ಉಪಯೋಗಿಸುತ್ತಿದ್ದಾರೆ.
ಇತ್ತೀಚೆಗೆ ‘ಎಐ’ ತಂತ್ರಜ್ಞಾನ ಮುಂದುವರಿದಿದೆ. ಇದನ್ನು ಬಳಸಿಕೊಳ್ಳಲು ತಂಡ ರೆಡಿ ಆಗಿದೆ. ಈ ಸಿನಿಮಾದ ತೆಲುಗು ವರ್ಷನ್ಗೆ ಹೃತಿಕ್ ಪಾತ್ರದ ಧ್ವನಿಗೆ ಎಐ ತಂತ್ರಜ್ಞಾನ ಬಳಿಸಿಕೊಳ್ಳಲಾಗಿದೆ. ಈ ಮೂಲಕ ಅದು ಹೃತಿಕ್ ಅವರೇ ತೆಲುಗಿನಲ್ಲಿ ಮಾತನಾಡಿದಂತೆ ಕೇಳಲಿದೆ. ಈ ಮೊದಲು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ತೆಲುಗು ವಾಯ್ಸ್ಗೆ ಇದೇ ರೀತಿಯ ಎಐ ತಂತ್ರಜ್ಞಾನವನ್ನು ಬಳಸಲಾಗಿತ್ತು. ಈಗ ಇದೇ ತಂತ್ರಜ್ಞಾನವನ್ನು ‘ವಾರ್ 2’ ಚಿತ್ರದಲ್ಲೂ ಬಳಸಲಾಗಿದೆ.
ಇದನ್ನೂ ಓದಿ:ಕಿಯಾರಾ ಅಡ್ವಾಣಿ ಬಿಕಿನಿ ದೃಶ್ಯದ ಮೇಕಿಂಗ್ ವಿಡಿಯೋ ಬಿಟ್ಟು ಟ್ರೋಲ್ ಆದ ‘ವಾರ್ 2’ ಟೀಂ
ಇನ್ನು, ಜೂನಿಯರ್ ಎನ್ಟಿಆರ್ ಅವರು ಹಿಂದಿ ವರ್ಷನ್ಗೆ ಅವರೇ ಡಬ್ ಮಾಡಿದ್ದಾರೆ. ಈ ಮೊದಲು ‘ದೇವರ 2’, ‘ಆರ್ಆರ್ಆರ್’ ಸಿನಿಮಾಗಳ ಕನ್ನಡ ವರ್ಷನ್ಗೆ ಅವರೇ ಡಬ್ ಮಾಡಿದ್ದರು. ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣದಲ್ಲಿ ಅವರು ಹೀರೋ ಆಗಿ ಫೇಮಸ್ ಆದವರು. ಈಗ ಅವರನ್ನು ವಿಲನ್ ಆಗಿ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕಿಯಾರಾ ಅವರು ಈ ಚಿತ್ರದಲ್ಲಿ ನಾಯಕಿ ಪಾತ್ರವನ್ನು ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Thu, 7 August 25



