ಕಿಯಾರಾ ಅಡ್ವಾಣಿ ಬಿಕಿನಿ ದೃಶ್ಯದ ಮೇಕಿಂಗ್ ವಿಡಿಯೋ ಬಿಟ್ಟು ಟ್ರೋಲ್ ಆದ ‘ವಾರ್ 2’ ಟೀಂ
ವಾರ್ 2 ಚಿತ್ರದ ಪ್ರಚಾರಕ್ಕಾಗಿ ಕಿಯಾರಾ ಅಡ್ವಾಣಿ ಅವರ ಬಿಕಿನಿ ಬಿಟಿಎಸ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಚೀಪ್ ಗಿಮಿಕ್ ಎಂದು ಟ್ರೋಲ್ ಮಾಡಿದರೆ, ಇನ್ನು ಕೆಲವರು ಇದನ್ನು ಚುರುಕಾದ ಮಾರ್ಕೆಟಿಂಗ್ ತಂತ್ರ ಎಂದು ಬಣ್ಣಿಸಿದ್ದಾರೆ.

ಸಿನಿಮಾ ಪ್ರಚಾರಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕರು ಯಾವ ಹಂತವನ್ನು ಬೇಕಿದ್ದರೂ ತಲುಪಬಹುದು. ಇದಕ್ಕೆ ನಾನಾ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಈಗ ‘ವಾರ್ 2’ ಟೀಂ ಕೂಡ ಇದೇ ರೀತಿಯ ಚೀಪ್ ಗಿಮಿಕ್ ಮಾಡಿ ಟ್ರೋಲ್ ಆಗಿದ್ದನ್ನು ನೀವು ಗಮನಿಸಬಹುದು. ಸಿನಿಮಾ ಪ್ರಚಾರಕ್ಕೆ ಕಿಯಾರಾ ಅಡ್ವಾಣಿ (Kiara Advani) ಅವರ ಬಿಕಿನಿ ಬಿಟಿಎಸ್ ರಿಲೀಸ್ ಮಾಡಲಾಗಿದೆ. ಇದನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಇನ್ನೂ ಕೆಲವರು ತಂಡವನ್ನು ಸಮರ್ಥಿಸಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿ ಈಗ ಮಗುವಿನ ತಾಯಿ. ಅವರು ‘ವಾರ್ 2’ ಸಿನಿಮಾ ಪ್ರಚಾರದಲ್ಲಿ ನೇರವಾಗಿ ಭಾಗಿ ಆಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅವರು ಸೋಶಿಯಲ್ ಮೀಡಿಯಾದ ಮೂಲಕ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ವಿವಿಧ ಅಪ್ಡೇಟ್ಗಳನ್ನು ನೀಡುತ್ತಿರುವುದನ್ನು ನೀವು ಕಾಣಬಹುದು.
‘ವಾರ್ 2’ ಸಿನಿಮಾದಲ್ಲಿ ಕಿಯಾರಾ ಅವರು ಬಿಕಿನಿ ಧರಿಸಿದ್ದಾರೆ. ‘ಆವನ್ ಜವಾನ್’ ಹಾಡಿಗಾಗಿ ಅವರು ಹೀಗೆ ಮಾಡಿದ್ದರು. ಇದರ ಬಿಟಿಎಸ್ನ ತಂಡದವರು ರಿಲೀಸ್ ಮಾಡಿದ್ದಾರೆ. ಇದನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ‘ಸಿನಿಮಾ ಪ್ರಚಾರಕ್ಕೆ ಬೇರೆ ಏನೂ ಸಿಗಲಿಲ್ಲವೇ’ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಚರ್ಚೆಗೆ ಕಾರಣ ಆಗಿದೆ.
ಸಾಂಗ್ ಮೇಕಿಂಗ್ ವಿಡಿಯೋ
ಇನ್ನೂ ಕೆಲವರು ಈ ವಿಡಿಯೋ ರಿಲೀಸ್ ಮಾಡಲು ಬೇರೆಯದೇ ಕಾರಣ ಇದೆ ಎಂದು ವಾದಿಸಿದ್ದಾರೆ. ಕೆಲವರು ಕಿಯಾರಾ ನಿಜವಾಗಲೂ ಬಿಕಿನಿ ಧರಿಸಿಲ್ಲ, ಇದು ಸಿಜಿಐ ವಿಡಿಯೋ, ಎಐ ವಿಡಿಯೋ ಎಂದೆಲ್ಲ ಹೇಳಿದ್ದರು. ಆದರೆ, ಅದನ್ನು ಸುಳ್ಳು ಎಂದು ತಂಡದವರಿಗೆ ಸಾಬೀತು ಮಾಡಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಮಗು ಜನಿಸಿ ಕೆಲವೇ ದಿನಕ್ಕೆ ‘ವಾರ್ 2’ ಪ್ರಚಾರ ಆರಂಭಿಸಿದ ಕಿಯಾರಾ ಅಡ್ವಾಣಿ
‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್, ತೆಲುಗಿನ ಜೂನಿಯರ್ ಎನ್ಟಿಆರ್ ಹಾಗೂ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರು ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ. ಈ ಕಾರಣದಿಂದ ಮೊದಲ ದಿನ ಈ ಚಿತ್ರವು ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎನ್ನುವ ಕುತೂಹಲವೂ ಎಲ್ಲ ಕಡೆಗಳಲ್ಲೂ ಮೂಡಿದೆ. ಈ ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:34 am, Thu, 7 August 25







