ಐಶ್ವರ್ಯಾ ಮೇಲಿನ ಪ್ರೀತಿಗೆ ಯಾರನ್ನೂ ಹಗ್ ಮಾಡುತ್ತಿರಲಿಲ್ಲ ಸಲ್ಮಾನ್
ಶೀಬಾ ಚಡ್ಡಾ ಅವರು ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್ ಅವರ ಕೋಪ ಮತ್ತು ಐಶ್ವರ್ಯಾ ರೈ ಅವರ ಮೇಲಿನ ಅಪಾರ ಪ್ರೀತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಅವರು ಚಿತ್ರೀಕರಣದ ಸಮಯದಲ್ಲಿ ತಮ್ಮ ಕೋಪವನ್ನು ತೋರಿಸಿದ್ದರು ಮತ್ತು ಐಶ್ವರ್ಯಾ ಅವರ ಮೇಲಿನ ಪ್ರೀತಿಯಿಂದಾಗಿ ಚಿತ್ರದಲ್ಲಿ ಬೇರೊಬ್ಬರನ್ನು ಹಗ್ ಮಾಡಲು ನಿರಾಕರಿಸಿದ್ದರು ಎಂದು ಶೀಬಾ ಹೇಳಿದ್ದಾರೆ.

ಸಲ್ಮಾನ್ ಖಾನ್ (Salaman Khan) ಅವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ತುಂಬಾನೇ ದುಡುಕು ಸ್ವಭಾವ ಹೊಂದಿದ್ದರು. ಅವರ ಈ ಸ್ವಭಾವದಿಂದ ಸಾಕಷ್ಟು ತೊಂದರೆಗಳು ಕೂಡ ಆದವು. ಈ ಬಗ್ಗೆ ಶೀಬಾ ಚಡ್ಡಾ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದಲ್ಲಿ ಶೀಬಾ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ಐಶ್ವರ್ಯಾ ಬಗ್ಗೆ ಸಲ್ಲು ಯಾವ ರೀತಿಯ ಪ್ರೀತಿ ಹೊಂದಿದ್ದರು ಕೂಡ ಎಂಬುದನ್ನು ಕೂಡ ವಿವರಿಸಿದ್ದರು.
‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅವರು ಒಟ್ಟಾಗಿ ನಟಿಸಿದ್ದರು. ಈ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಇತ್ತು. ಈ ಸಿನಿಮಾ ಹಿಟ್ ಆಯಿತು. ಈ ಚಿತ್ರದಲ್ಲಿ ಶೀಬಾ ಕೂಡ ನಟಿಸಿದ್ದರು. ಸಿನಿಮಾದ ಸೆಟ್ನಲ್ಲಿ ನಡೆದ ಒಂದು ಘಟನೆಯಿಂದ ಶೀಬಾ ಶಾಕ್ ಆಗಿದ್ದರು.
‘ಸಲ್ಮಾನ್ ಖಾನ್ ಎಡವಿ ಬಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಸಿಟ್ಟು ಬಂತು. ಅದೇ ಕೋಪದಲ್ಲಿ ಅವರು ಬಾಗಿಲ್ಲನ್ನು ಜೋರಾಗಿ ತೆಗೆದರು. ಹಿಂದೆ ನಿಂತಿದ್ದ ವಯಸ್ಸಾದ ಲೈಟ್ ಮ್ಯಾನ್ಗೆ ಬಾಗಿಲು ತಾಗಿ ಗಾಯ ಆಯಿತು. ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವಾಗ ಹೀಗೆಲ್ಲ ಆಗುತ್ತದೆಯೇ ಎಂದು ನನಗೆ ನಾನೇ ಕೇಳಿಕೊಂಡೆ’ ಎಂದು ಶೀಬಾ ಹೇಳಿದ್ದಾರೆ.
‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಶೂಟ್ ಸಂದರ್ಭದಲ್ಲಿ ಸಲ್ಮಾನ್ ಹಾಗೂ ಐಶ್ವರ್ಯಾ ರೈ ಆಳವಾದ ಪ್ರೀತಿಯಲ್ಲಿ ಇದ್ದರು. ಪ್ರೀತಿ ಅದೆಷ್ಟು ಗಾಢವಾಗಿತ್ತು ಎಂದರೆ ಸಲ್ಮಾನ್ ಖಾನ್ ಬೇರೆಯವರನ್ನು ಹಗ್ ಮಾಡಲು ಕೂಡ ರೆಡಿ ಇರಲಿಲ್ಲ.
ಇದನ್ನೂ ಓದಿ: ರಿಯಾಲಿಟಿ ಶೋ ಸಂಭಾವನೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಅಮಿತಾಭ್ ಬಚ್ಚನ್
‘ಸಲ್ಮಾನ್ ಖಾನ್ ನನ್ನ ಹಗ್ ಮಾಡುವ ದೃಶ್ಯ ಇತ್ತು. ಆದರೆ, ಇದಕ್ಕೆ ಅವರು ಒಪ್ಪಲಿಲ್ಲ. ಸ್ಕ್ರಿಪ್ಟ್ ಅದನ್ನು ಕೇಳುತ್ತಿದೆ ಎಂದರೂ ಅವರು ಮಾಡಲು ಒಪ್ಪಲಿಲ್ಲ. ಇದರಿಂದ ಶೂಟ್ ಕೂಡ ನಿಂತಿತ್ತು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬಂದು ಸಲ್ಮಾನ್ ಅವರ ಮನ ಒಲಿಸಬೇಕಾಯಿತು’ ಎಂದು ಹೇಳಿದ್ದಾರೆ ಶೀಬಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Thu, 7 August 25








