‘ಮೂವೀ ಮಾಫಿಯಾ ವಿಚಾರ ಬಂದ್ರೆ ನೀವೆಲ್ಲ ಸೈಲೆಂಟ್ ಆಗ್ತೀರಿ’; ಮತ್ತೆ ಸಿಟ್ಟಾದ ಕಂಗನಾ ರಣಾವತ್

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನದಲ್ಲಿ ಮಾತನಾಡುತ್ತಾ ಬಾಲಿವುಡ್ ತೊರೆದ ನಿರ್ಧಾರದ ಬಗ್ಗೆ ಮಾತನಾಡಿದ್ದರು. ನನ್ನನ್ನು ಮೂಲೆಗುಂಪು ಮಾಡಲಾಯಿತು ಎಂದು ಅವರು ಹೇಳಿಕೊಂಡಿದ್ದರು.

‘ಮೂವೀ ಮಾಫಿಯಾ ವಿಚಾರ ಬಂದ್ರೆ ನೀವೆಲ್ಲ ಸೈಲೆಂಟ್ ಆಗ್ತೀರಿ’; ಮತ್ತೆ ಸಿಟ್ಟಾದ ಕಂಗನಾ ರಣಾವತ್
ಕಂಗನಾ

Updated on: Mar 30, 2023 | 6:30 AM

ನಟಿ ಕಂಗನಾ ರಣಾವತ್ (Kangana Ranut) ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ಯಾವುದೇ ವಿವಾದ ಇಲ್ಲದೆ ಇದ್ದರೆ ಯಾವುದಾದರೂ ಒಂದು ವಿಚಾರದಲ್ಲಿ ಕೊಂಕು ತೆಗೆದು ಟೀಕೆ ಮಾಡುತ್ತಾರೆ. ಒಟ್ಟಿನಲ್ಲಿ ಅವರು ಸದಾ ಪ್ರಚಾರದಲ್ಲಿರಲು ಬಯಸುತ್ತಾರೆ. ಬಾಲಿವುಡ್​ನಲ್ಲಿ ಮಾಫಿಯಾ ಇದೆ ಎಂಬ ಮಾತನ್ನು ಅವರು ಆಗಾಗ ಹೇಳುತ್ತಲೇ ಇರುತ್ತಾರೆ. ಈಗ ಇದೇ ವಿಚಾರಕ್ಕೆ ಪಾಪರಾಜಿಗಳನ್ನು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ, ‘ಬಾಲಿವುಡ್ ಮಾಫಿಯಾ (Bollywood Mafia) ವಿಚಾರ ಬಂದಾಗ ಸೈಲೆಂಟ್ ಆಗ್ತೀರಿ. ನನ್ನ ಬಗ್ಗೆ ವಿವಾದ ಆದರೆ ಓಡೋಡಿ ಬರ್ತೀರಾ’ ಎಂದು ಕಂಗನಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನದಲ್ಲಿ ಮಾತನಾಡುತ್ತಾ ಬಾಲಿವುಡ್ ತೊರೆದ ನಿರ್ಧಾರದ ಬಗ್ಗೆ ಮಾತನಾಡಿದ್ದರು. ನನ್ನನ್ನು ಮೂಲೆಗುಂಪು ಮಾಡಲಾಯಿತು ಎಂದು ಅವರು ಹೇಳಿಕೊಂಡಿದ್ದರು. ಈ ವಿಚಾರದ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಯಾರೂ ಪ್ರಶ್ನೆ ಎತ್ತುವುದಿಲ್ಲ ಎಂಬುದು ಕಂಗನಾ ಆರೋಪ.

ಕಂಗನಾ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಪಾಪರಾಜಿಗಳು ಅವರನ್ನು ಮುತ್ತಿಕೊಂಡರು. ಕ್ಯಾಮೆರಾಗೆ ಪೋಸ್ ನೀಡುವಂತೆ ಕೋರಿದರು. ಆಗ ಕಂಗನಾ, ‘ನೀವು ತುಂಬಾನೇ ಬುದ್ಧಿವಂತರು. ಮೂವೀ ಮಾಫಿಯಾ ಬಗ್ಗೆ ಯಾವುದಾದರೂ ವಿವಾದ ಆದರೆ ಸುಮ್ಮನಿರುತ್ತೀರಾ. ಏನನ್ನೂ ಕೇಳುವುದಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್​ ಬಿಟ್ಟು ಹಾಲಿವುಡ್​ಗೆ ಹೋಗಿದ್ದು ಯಾಕೆ? ಕಡೆಗೂ ಬಾಯ್ಬಿಟ್ಟ ನಟಿ

ಇದಕ್ಕೆ ಉತ್ತರಿಸಿರೋ ಪಾಪರಾಜಿಗಳು., ‘ನಾವಿಲ್ಲಿ ಫೋಟೋ ಕ್ಲಿಕ್ ಮಾಡೋಕೆ ಮಾತ್ರ ಇರೋದು’ ಎಂದಿದ್ದಾರೆ. ಇದಕ್ಕೆ ಕಂಗನಾ ನಗುತ್ತಲೇ ಖಡಕ್ ಆಗಿ ಉತ್ತರ ನೀಡಿದ್ದಾರೆ. ‘ನನ್ನ ಬಗ್ಗೆ ಯಾವುದಾದರೂ ಕಾಂಟ್ರವರ್ಸಿ ಆದರೆ ನೀವು ಪ್ರಶ್ನೆ ಮಾಡ್ತೀರಿ. ಆದರೆ, ಈಗೇಕೆ ಪ್ರಶ್ನೆ ಮಾಡುತ್ತಿಲ್ಲ’ ಎಂದು ಕಂಗನಾ ಕೇಳಿದ್ದಾರೆ. ಅಲ್ಲಿಗೆ ಈ ವಿಚಾರ ಪೂರ್ಣಗೊಂಡಿದೆ.

ಇದನ್ನೂ ಓದಿ: Kangana Ranaut: ಎಲ್ಲರ ಬಳಿ ಕ್ಷಮೆ ಕೇಳಿದ ಕಂಗನಾ ರಣಾವತ್​; ಬರ್ತ್​ಡೇ ದಿನವೇ ಬದಲಾಯಿತು ಮನಸ್ಸು

ಪ್ರಿಯಾಂಕಾ ಹೇಳಿಕೆ ಬಗ್ಗೆ ಕಂಗನಾ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆಯೋಕೆ ಕರಣ್​ ಜೋಹರ್ ಕಾರಣ’ ಎಂದು ಅವರು ಹೇಳಿದ್ದರು. ಕಂಗನಾ ರಣಾವತ್ ಅವರಿಗೆ ಕರಣ್ ಅವರನ್ನು ಕಂಡರೆ ಆಗುವುದಿಲ್ಲ. ಅವರ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ