ಇಂದಿರಾ ಗಾಂಧಿ ಕುರಿತ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಿಸಿದ ಬಿಜೆಪಿ ಸಂಸದೆ ಕಂಗನಾ

|

Updated on: Jun 25, 2024 | 1:45 PM

ಬಿಜೆಪಿ ಸಂಸದೆ ಕಂಗನಾ ರನೌತ್, ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಸಿನಿಮಾದಲ್ಲಿ ಸ್ವತಃ ಕಂಗನಾ, ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.

ಇಂದಿರಾ ಗಾಂಧಿ ಕುರಿತ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಿಸಿದ ಬಿಜೆಪಿ ಸಂಸದೆ ಕಂಗನಾ
Follow us on

ನಟಿ, ನಿರ್ದೇಶಕಿ ಕಂಗನಾ ರನೌತ್ (Kangana Ranaut) ಈಗ ಬಿಜೆಪಿ ಸಂಸದೆಯಾಗಿದ್ದಾರೆ. ಇದೇ ತಿಂಗಳು ಹೊರಬಿದ್ದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಭಾರಿ ಅಂತರದ ಜಯ ಪಡೆದಿದ್ದಾರೆ. ಇಷ್ಟು ವರ್ಷ ಸಿನಿಮಾ ನಟಿಯಾಗಿ, ನಿರ್ದೇಶಕಿಯಾಗಿ ಗಮನ ಸೆಳೆದಿದ್ದ ಕಂಗನಾ ಇನ್ನು ಮುಂದೆ ಸಂಸದೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಂಗನಾ ಚುನಾವಣೆಗೆ ಸ್ಪರ್ಧಿಸುವ ಮುಂಚೆ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸಿದ್ದರು. ಚುನಾವಣೆ ಕಾರಣಕ್ಕೆ ಈ ಸಿನಿಮಾದ ಬಿಡುಗಡೆ ಮುಂದೂಡಲಾಗಿತ್ತು, ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

‘ಎಮರ್ಜೆನ್ಸಿ’ ಸಿನಿಮಾವನ್ನು ಕಂಗನಾ ಸೆಪ್ಟೆಂಬರ್ 6 ರಂದು ತೆರೆಗೆ ತರಲಿದ್ದಾರೆ. ಕಂಗನಾ ಸಂಸದೆಯಾಗಿ ಆಯ್ಕೆ ಆದ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತದೆಯೇ ಇಲ್ಲವೇ ಎಂಬ ಅನುಮಾನ ಮೂಡಿತ್ತು. ಆದರೆ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕವನ್ನು ಕಂಗನಾ ಘೋಷಣೆ ಮಾಡಿದ್ದಾರೆ. ಸಿನಿಮಾದಲ್ಲಿ ಕಂಗನಾ, ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಇಂದಿರಾ ಗಾಂಧಿಯ ಗಟ್ಟಿ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?

ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿ ಟ್ವೀಟ್ ಮಾಡಿರುವ ಕಂಗನಾ ರನೌತ್, ‘ಭಾರತ ಪ್ರಭಾಪ್ರಭುತ್ವದ ಕರಾಳ ಅಧ್ಯಾಯಕ್ಕೆ ಐವತ್ತು ವರ್ಷವಾದ ಹಿನ್ನೆಲೆಯಲ್ಲಿ ‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆ ಘೋಷಿಸುತ್ತಿದ್ದೇನೆ. ಸ್ವಾತಂತ್ರ್ಯ ಭಾರತದ ಅತ್ಯಂತ ವಿವಾದಾತ್ಮಕ ನಿರ್ಣಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ’ ಎಂದು ಕಂಗನಾ ರನೌತ್ ಬರೆದುಕೊಂಡಿದ್ದಾರೆ. ಈ ಸಿನಿಮಾದ ನಿರ್ದೇಶನವನ್ನು ಕಂಗನಾ ರನೌತ್ ಮಾಡಿದ್ದು, ನಿರ್ಮಾಣವನ್ನೂ ಮಾಡಿದ್ದಾರೆ.

ಕಂಗನಾ ರನೌತ್​ರ ಕಳೆದ ಕೆಲವು ಸಿನಿಮಾಗಳು ಒಂದರ ಹಿಂದೊಂದು ಸೋಲು ಕಂಡಿವೆ. ಈ ಸಿನಿಮಾ ಮೂಲಕ ಮತ್ತೆ ಗೆಲುವಿನ ಹಾದಿಗೆ ಕಂಗನಾ ಮರಳಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಬಿಜೆಪಿ ಸಂಸದೆಯಾಗಿ, ಇಂದಿರಾ ಗಾಂಧಿಯನ್ನು ಹಾಗೂ ಎಮರ್ಜೆನ್ಸಿಯನ್ನು ಕಂಗನಾ ಹೇಗೆ ತೆರೆ ಮೇಲೆ ತೋರಿಸಿದ್ದಾರೆ ಎಂಬ ಕುತೂಹಲ ಸಹ ವೀಕ್ಷಕರಲ್ಲಿದೆ. ಬಹಳ ತಿಂಗಳ ಹಿಂದೆ ಸಿನಿಮಾದ ಸಣ್ಣ ಟೀಸರ್ ಬಿಡುಗಡೆ ಆಗಿತ್ತು, ಟೀಸರ್​ನಲ್ಲಿ ಕಂಗನಾ ರನೌತ್​ರ ಅಭಿನಯ ಅದ್ಭುತವಾಗಿತ್ತು. ಆ ಒಂದು ಸಣ್ಣ ಟೀಸರ್​ನಿಂದಲೇ ಸಿನಿಮಾ ಬಗ್ಗೆ ಕುತೂಹಲ ನಿರ್ಮಾಣವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ