AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?

ನಟಿ ಕಂಗನಾ ರನೌತ್ ಅವರ ಒಟ್ಟು ಆಸ್ತಿ ಮೌಲ್ಯ ಬಹಿರಂಗವಾಗಿದೆ. ಕಂಗನಾ ರನೌತ್ ಬಳಿ ಭಾರಿ ಮೌಲ್ಯದ ಚಿನ್ನಾಭರಣವಿದೆ. ನಟಿಯ ಬಳಿ ಇರುವ ಕಾರುಗಳ ಮೌಲ್ಯವೇ 5.48 ಕೋಟಿ ರೂಪಾಯಿಗಳು. ನಟಿಯ ಒಟ್ಟು ಆಸ್ತಿ ಮೌಲ್ಯದ ಇಲ್ಲಿದೆ.

ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?
ಮಂಜುನಾಥ ಸಿ.
|

Updated on: May 14, 2024 | 5:44 PM

Share

ಬಾಲಿವುಡ್ ನಟಿ, ನಿರ್ಮಾಪಕಿ, ನಿರ್ದೇಶಕಿ ಕಂಗನಾ ರನೌತ್ (Kangana Ranaut) ಈ ಬಾರಿ ಬಿಜೆಪಿ ಪರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಕಂಗನಾ ರನೌತ್ ಕಳೆದ ಕೆಲ ವರ್ಷಗಳಿಂದಲೂ ಬಿಜೆಪಿ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸತತವಾಗಿ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ನರೇಂದ್ರ ಮೋದಿಯವರ ಭಕ್ತೆ ಎಂದು ಸಹ ಕಂಗನಾ ರನೌತ್ ತಮ್ಮನ್ನು ತಾವು ಕರೆದುಕೊಂಡಿದ್ದರು. ಅದರಂತೆ ಕಂಗನಾರಿಗೆ ಬಿಜೆಪಿಯ ಲೋಕಸಭೆ ಚುನಾವಣೆಗೆ ಟಿಕೆಟ್ ದೊರೆತಿದ್ದು, ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಇಂದು (ಮೇ 14) ಕಂಗನಾ ರನೌತ್ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ಸಹ ಘೋಷಣೆ ಮಾಡಿಕೊಂಡಿದ್ದಾರೆ.

ಇಂದಿರಾ ಗಾಂಧಿ ಕುರಿತು ಸಿನಿಮಾ ನಿರ್ಮಾಣ ಮಾಡುತ್ತಿರುವ ಕಂಗನಾ ರನೌತ್ ಕೆಲವು ತಿಂಗಳ ಹಿಂದೆಯಷ್ಟೆ ತಾವು ತಮ್ಮ ಆಸ್ತಿಯನ್ನೆಲ್ಲ ಮಾರಿ ಈ ಸಿನಿಮಾ ಮಾಡುತ್ತಿದ್ದೇನೆ ಎಂದಿದ್ದರು. ಆದರೆ ಇಂದು ಅವರು ಸಲ್ಲಿಸಿರುವ ಅಧಿಕೃತ ಆಸ್ತಿ ವಿವರದಲ್ಲಿ ಅವರ ಸಾಲಕ್ಕಿಂತಲೂ 10 ಪಟ್ಟು ಹೆಚ್ಚು ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದು ಗೊತ್ತಾಗುತ್ತಿದೆ. ಕಂಗನಾ 2022-23 ರಲ್ಲಿ 4.12 ಕೋಟಿ ಆದಾಯವನ್ನು ಗಳಿಸಿದ್ದಾರೆ. 2021-22 ರಲ್ಲಿ 12 ಕೋಟಿ ಆದಾಯವನ್ನು ಗಳಿಸಿದ್ದರು. ಕಂಗನಾರ ಮೇಲೆ ಬರೋಬ್ಬರಿ ಎಂಟು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮಾನನಷ್ಟ ಮೊಕದ್ದಮ್ಮೆ, ಧರ್ಮಗಳ ನಡುವೆ ವೈರತ್ವ ಹೆಚ್ಚಿಸುವ ಪ್ರಯತ್ನ, ಧಾರ್ಮಿಕ ಭಾವನೆಗೆ ಧಕ್ಕೆ, ವಂಚನೆ ಪ್ರಕರಣಗಳು ಸಹ ಇವೆ.

ಕಂಗನಾರ ಬಳಿ 2 ಲಕ್ಷ ರೂಪಾಯಿ ನಗದು ಹಣವಿದೆ. ಬ್ಯಾಂಕ್​ಗಳಲ್ಲಿ ಎರಡು ಕೋಟಿ ರೂಪಾಯಿ ಹಣವಿದೆ. ವಿಶೇಷವೆಂದರೆ ಕಂಗನಾ ಬರೋಬ್ಬರಿ 50 ಎಲ್​ಐಸಿ ಪಾಲಿಸಿಗಳನ್ನು ಮಾಡಿಸಿದ್ದಾರೆ. ಈ 50 ಎಲ್​ಐಸಿ ಪಾಲಿಸಿಗಳ ಮೆಚ್ಯೂರಿಟಿ ಮೊತ್ತ ಬರೋಬ್ಬರಿ 5 ಕೋಟಿ ರೂಪಾಯಿಗಳು. ಇನ್ನು ತಮ್ಮ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲಂ ಪ್ರೈವೇಟ್ ಲಿಮಿಟೆಡ್ ಮೇಲೆ 1.21 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಕಂಗನಾ ಇತರರಿಗೆ ದೊಡ್ಡ ಮೊತ್ತವನ್ನು ಸಾಲವಾಗಿ ನೀಡಿದ್ದಾರೆ. ಸಹೋದರ, ಅಕ್ಕ ರಂಗೋಲಿ, ಅಪ್ಪ ಸೇರಿದಂತೆ ಇತರರಿಗೆ ಸುಮಾರು 9.50 ಕೋಟಿ ರೂಪಾಯಿ ಹಣವನ್ನು ಸಾಲವನ್ನಾಗಿ ನೀಡಿದ್ದಾರೆ.

ಇದನ್ನೂ ಓದಿ:ಊರ್ಮಿಳಾಗೆ ಟಿಕೆಟ್ ದೊರೆತಾಗ ಏನು ಹೇಳಿದ್ದರು ಕಂಗನಾ: ವೈರಲ್ ಆಗುತ್ತಿದೆ ಹಳೆ ವಿಡಿಯೋ

ಕಂಗನಾ ರನೌತ್ ಹೆಸರಿನಲ್ಲಿ ನಾಲ್ಕು ವಾಹನಗಳಿವೆ ಅದರಲ್ಲಿ ಒಂದು ವೆಸ್ಪಾ ಸ್ಕೂಟರ್. ಇನ್ನು ಮೂರು ವಾಹನಗಳ ಒಟ್ಟು ಮೌಲ್ಯ 5.48 ಕೋಟಿ ರೂಪಾಯಿಗಳು. ಅತ್ಯಂತ ದುಬಾರಿ ಮತ್ತು ಐಶಾರಾಮಿಗಳನ್ನು ಕಂಗನಾ ಹೊಂದಿದ್ದಾರೆ. ಕಂಗನಾ ಬಳಿ 6.70 ಕೆಜಿ ಚಿನ್ನಾಭರಣಗಳಿವೆ. ಇವುಗಳ ಒಟ್ಟು ಮೌಲ್ಯ 5 ಕೋಟಿ ರೂಪಾಯಿ. 3 ಕೋಟಿ ಮೌಲ್ಯದ ವಜ್ರದ ಆಭರಣಗಳಿವೆ. 60 ಕೆಜಿ ಬೆಳ್ಳಿಯ ಸಾಮಗ್ರಿಗಳಿವೆ. ಅವುಗಳ ಮೌಲ್ಯ 50 ಲಕ್ಷ ರೂಪಾಯಿ. ಒಟ್ಟು 28.73 ಕೋಟಿ ಚರಾಸ್ತಿಯನ್ನು ಕಂಗನಾ ರನೌತ್ ಹೊಂದಿದ್ದಾರೆ.

ಕಂಗನಾ ಬಳಿ ಯಾವುದೇ ಕೃಷಿ ಜಮೀನು ಇಲ್ಲ. ಮುಂಬೈ, ಮನಾಲಿ, ಚಂಡಿಘಡಗಳಲ್ಲಿ ಆರು ವಾಣಿಜ್ಯ ಕಟ್ಟಡಗಳಿವೆ. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 31.41 ಕೋಟಿ ರೂಪಾಯಿಗಳು. ಮುಂಬೈನಲ್ಲಿ ಒಂದು ಹಾಗೂ ಹಿಮಾಚಲ ಪ್ರದೇಶದಲ್ಲಿ ಎರಡು ವಾಸದ ಮನೆಗಳಿವೆ. ಇವುಗಳ ಈಗಿನ ಒಟ್ಟು ಮೌಲ್ಯ 31.42 ಕೋಟಿ ರೂಪಾಯಿಗಳು. ಕಮರ್ಷಿಯಲ್ ಹಾಗೂ ರೆಸಿಡೆನ್ಸ್ ಎರಡೂ ಆಸ್ತಿಯ ಒಟ್ಟು ಮೌಲ್ಯ 62.98 ಕೋಟಿ ರೂಪಾಯಿಗಳು. ಕಂಗನಾ ರನೌತ್​ ಕೆಲವು ಸಾಲಗಳನ್ನು ಸಹ ಮಾಡಿದ್ದಾರೆ. ಕಂಗನಾರ 15.58 ಕೋಟಿ ರೂಪಾಯಿಗಳು. 1.80 ಕೋಟಿ ರೂಪಾಯಿ ಹಣವನ್ನು ನಿರ್ಮಾಣ ಸಂಸ್ಥೆಯ ಬಾಡಿಗೆ (ಲೀಜ್​)ಗೆ ನೀಡಿದ್ದಾರೆ. ಒಟ್ಟಿನಲ್ಲಿ ಕಂಗನಾರ ಒಟ್ಟು ಆಸ್ತಿ ಮೌಲ್ಯ 154.57 ಕೋಟಿ ರೂಪಾಯಿಗಳು. ಕಂಗನಾರ ಸಾಲ 17.38 ಕೋಟಿ ರೂಪಾಯಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ