ಬಾಲಿವುಡ್​ಗೆ ಖುಷಿ ತಂದ ದೀಪಾವಳಿ; ‘ಕಾಂತಾರ’ ಎದುರು ‘ರಾಮ್ ಸೇತು’, ‘ಥ್ಯಾಂಕ್​ ಗಾಡ್’ ಕಲೆಕ್ಷನ್ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Oct 26, 2022 | 2:58 PM

ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಜಯ್​ ದೇವಗನ್ ಅಭಿನಯದ ‘ಥ್ಯಾಂಕ್​ ಗಾಡ್’ ಚಿತ್ರ ಅಕ್ಟೋಬರ್ 25ರಂದು ರಿಲೀಸ್ ಆಗಿವೆ. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿವೆ.

ಬಾಲಿವುಡ್​ಗೆ ಖುಷಿ ತಂದ ದೀಪಾವಳಿ; ‘ಕಾಂತಾರ’ ಎದುರು ‘ರಾಮ್ ಸೇತು’, ‘ಥ್ಯಾಂಕ್​ ಗಾಡ್’ ಕಲೆಕ್ಷನ್ ಎಷ್ಟು?
‘ಕಾಂತಾರ’ ಎದುರು ‘ರಾಮ್ ಸೇತು’, ‘ಥ್ಯಾಂಕ್​ ಗಾಡ್’ ಕಲೆಕ್ಷನ್ ಎಷ್ಟು?
Follow us on

‘ಕಾಂತಾರ’ (Kantara Movie)ಸಿನಿಮಾ ಬಾಲಿವುಡ್​ನಲ್ಲಿ ಅಬ್ಬರಿಸುತ್ತಿದೆ. ಹಬ್ಬದ ಸಂದರ್ಭದಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಬಾಲಿವುಡ್​ನಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿವೆ. ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಜಯ್​ ದೇವಗನ್ ಅಭಿನಯದ ‘ಥ್ಯಾಂಕ್​ ಗಾಡ್’ ಚಿತ್ರ ಅಕ್ಟೋಬರ್ 25ರಂದು ರಿಲೀಸ್ ಆಗಿವೆ. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿವೆ. ಇದು ಮುಂದಿನ ದಿನಗಳಲ್ಲಿ ‘ಕಾಂತಾರ’ ಚಿತ್ರದ ಕಲೆಕ್ಷನ್ ಮೇಲೆ ಪ್ರಭಾವ ಬೀರಬಹುದು.

25 ಕೋಟಿ ರೂ. ದಾಟಿದ ‘ಕಾಂತಾರ’

‘ಕಾಂತಾರ’ ಸಿನಿಮಾ ನಿತ್ಯ ಒಂದರಿಂದ ಎರಡು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಇದರಿಂದ ಬಾಲಿವುಡ್​ನಲ್ಲೂ ಚಿತ್ರ ಒಳ್ಳೆಯ ಲಾಭ ಕಾಣುತ್ತಿದೆ. ಈ ಸಿನಿಮಾ ಮಂಗಳವಾರ (ಅಕ್ಟೋಬರ್ 25) 2.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ (ಹಿಂದಿ ವರ್ಷನ್​) 26.50 ಕೋಟಿ ರೂಪಾಯಿ ದಾಟಿದೆ. ಇನ್ನೂ ಕೆಲವು ದಿನಗಳ ಕಾಲ ‘ಕಾಂತಾರ’ ಸಿನಿಮಾ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ.

‘ರಾಮ್ ಸೇತು’ ಭರ್ಜರಿ ಕಮಾಯಿ

ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಎಂದರೆ ತಕ್ಕ ಮಟ್ಟಿನ ಬಿಸ್ನೆಸ್ ಮಾಡುತ್ತವೆ ಎಂಬ ನಂಬಿಕೆ ಇತ್ತು. ಆದರೆ, ಇತ್ತೀಚೆಗೆ ಆ ನಂಬಿಕೆ ಸುಳ್ಳಾಗುವಂತಹ ಸಾಕಷ್ಟು ಘಟನೆಗಳು ನಡೆದವು. ಅಕ್ಷಯ್ ಅವರಿಂದ ಸಾಕಷ್ಟು ನಿರ್ಮಾಪಕರು ನಷ್ಟ ಅನುಭವಿಸಿದರು. ‘ರಾಮ್ ಸೇತು’ ಚಿತ್ರದಿಂದ ಅವರಿಗೆ ಗೆಲುವು ಬೇಕಾಗಿದೆ. ಈ ಗೆಲುವು ಮರಳಿ ಸಿಗುವ ಸೂಚನೆ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ 15.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವಾರ ಪೂರ್ತಿ ‘ರಾಮ್ ಸೇತು’ ಅಬ್ಬರಿಸಬಹುದು ಎಂದು ಬಾಕ್ಸ್​ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

‘ಥ್ಯಾಂಕ್ ಗಾಡ್’

‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇಬ್ಬರು ಸ್ಟಾರ್​ಗಳು ಇದ್ದಾರೆ ಎಂಬ ಕಾರಣಕ್ಕೆ ಸಿನಿಮಾ ಮೇಲೆ ನಿರೀಕ್ಷೆ ಇತ್ತು. ಈ ಚಿತ್ರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ಮೊದಲ ದಿನ ಈ ಚಿತ್ರ 8.10 ಕೋಟಿ ರೂಪಾಯಿ ಬಾಚಿಕೊಂಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಕಲೆಕ್ಷನ್ ಮಾಡಲಿದೆ ಅನ್ನೋದು ಮುಖ್ಯವಾಗಲಿದೆ.