ಹೊಸ ಸಿನಿಮಾ ಘೋಷಿಸಿದ ಕರಣ್ ಜೋಹರ್; ಮತ್ತೆ ಒಂದಾಗಲಿದ್ದಾರೆ ಶಾರುಖ್​-ಕಾಜೋಲ್?

| Updated By: ರಾಜೇಶ್ ದುಗ್ಗುಮನೆ

Updated on: May 27, 2024 | 8:04 AM

ಇತ್ತೀಚೆಗೆ ಕರಣ್ ಜೋಹರ್ ಅವರು ಬರ್ತ್​ಡೇ ಆಚರಿಸಿಕೊಂಡರು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ಈ ವೇಳೆ ಅವರು ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ವಿಶೇಷ ದಿನದಂದು ತಮ್ಮ ಮುಂದಿನ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೊಸ ಸಿನಿಮಾ ಘೋಷಿಸಿದ ಕರಣ್ ಜೋಹರ್; ಮತ್ತೆ ಒಂದಾಗಲಿದ್ದಾರೆ ಶಾರುಖ್​-ಕಾಜೋಲ್?
ಹೊಸ ಸಿನಿಮಾ ಘೋಷಿಸಿದ ಕರಣ್ ಜೋಹರ್; ಮತ್ತೆ ಒಂದಾಗಲಿದ್ದಾರೆ ಶಾರುಖ್​-ಕಾಜೋಲ್?
Follow us on

ಕರಣ್ ಜೋಹರ್ (Karan Johar) ಅವರು ನಿರ್ದೇಶನಕ್ಕೆ ಇಳಿದರು ಎಂದರೆ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ.  ಅದರಲ್ಲೂ ಅವರು ಕಟ್ಟಿಕೊಡೋ ಲವ್ ಸ್ಟೋರಿಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರು 1998ರಿಂದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. 2023ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಗೆಲುವಿನ ಬಳಿಕ ಅವರು ಮತ್ತೆ ನಿರ್ದೇಶನಕ್ಕೆ ಇಳಿಯೋಕೆ ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್ ನಟಿಸಲಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

ಇತ್ತೀಚೆಗೆ ಕರಣ್ ಜೋಹರ್ ಅವರು ಬರ್ತ್​ಡೇ ಆಚರಿಸಿಕೊಂಡರು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ಈ ವೇಳೆ ಅವರು ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ವಿಶೇಷ ದಿನದಂದು ತಮ್ಮ ಮುಂದಿನ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿನಿಮಾದ ಸ್ಕ್ರಿಪ್ಟ್​ ಬುಕ್​ನ ಹಿಡಿದು ಅವರು ಪೋಸ್​ ಕೊಟ್ಟಿದ್ದಾರೆ. ಅದರ ಮೇಲೆ ಕರಣ್ ಜೋಹರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಬಗ್ಗೆಯಷ್ಟೇ ಮಾಹಿತಿ ಇದೆ. ಸದ್ಯ ಅವರ ನಿರ್ದೇಶನದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

1998ರಲ್ಲಿ ಕರಣ್ ಜೋಹರ್ ಅವರು ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಕುಚ್ ಕುಚ್ ಹೋತಾ ಹೈ’ ಅವರ ನಿರ್ದೇಶನದ ಮೊದಲ ಸಿನಿಮಾ. ಶಾರುಖ್ ಹಾಗೂ ಕಾಜೋಲ್ ನಟನೆಯ ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ 8 ಫಿಲ್ಮ್​ಫೇರ್ ಅವಾರ್ಡ್ ಸಿಕ್ಕವು. ಆ ಬಳಿಕ ಮೂರು ವರ್ಷಗಳ ಬಳಿಕ ‘ಕಬಿ ಖುಷಿ ಕಬಿ ಗಮ್’ (2001) ಸಿನಿಮಾ ನಿರ್ದೇಶನ ಮಾಡಿದರು. ಇದು ಕೂಡ ಗೆಲುವು ಕಂಡಿತು. ನಂತರ ಅವರು ನಿರ್ಮಾಣದತ್ತ ಹೆಚ್ಚು ಗಮನ ಹರಿಸಿದರು. ಹೀಗಾಗಿ, ಕೆಲವೇ ಕೆಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು.

ಕಳೆದ ವರ್ಷ ಕರಣ್ ಜೋಹರ್ ನಿರ್ದೇಶನ ಮಾಡಿದ ‘ರಾಕಿ ಔರ್ ರಾಣಿ ಪ್ರೇಮ್ ಕಹಾನಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಸಿನಿಮಾ ದೊಡ್ಡ ಗೆಲುವು ಕಂಡಿತು. ಈ ಚಿತ್ರದ ಬಳಿಕ ಕರಣ್ ಮತ್ತೊಂದು ಸಿನಿಮಾ ಘೋಷಿಸಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ. ಈ ಚಿತ್ರಕ್ಕೆ ಕರಣ್ ಆಪ್ತರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ನಿಮ್ಮ ಅಣ್ಣನ ಜೊತೆ ಮಲಗುತ್ತೀರಾ?’; ಟಿವಿ ಆ್ಯಂಕರ್​ಗೆ ಮುಲಾಜಿಲ್ಲದೆ ಕೇಳಿದ್ದ ಕರಣ್ ಜೋಹರ್

ಕರಣ್ ಜೋಹರ್ ಅವರ ಪೋಸ್ಟ್​ಗೆ ಅನೇಕರು ಶಾರುಖ್ ಖಾನ್ ಹಾಗೂ ಕಾಜೋಲ್ ಅವರನ್ನು ಒಟ್ಟಿಗೆ ತೆರೆಮೇಲೆ ತರುವಂತೆ ಕೋರಿಕೊಳ್ಳುತ್ತಿದ್ದಾರೆ. ಕರಣ್ ಜೋಹರ್ ಅವರು ಮಾತ್ರ ಈ ಜೋಡಿಯನ್ನು ಮತ್ತೆ ತೆರೆಮೇಲೆ ಒಟ್ಟಿಗೆ ತರಬಹುದು ಎಂದು ಅನೇಕರು ಹೇಳಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.