‘ನಿಮ್ಮ ಅಣ್ಣನ ಜೊತೆ ಮಲಗುತ್ತೀರಾ?’; ಟಿವಿ ಆ್ಯಂಕರ್ಗೆ ಮುಲಾಜಿಲ್ಲದೆ ಕೇಳಿದ್ದ ಕರಣ್ ಜೋಹರ್
ಕರಣ್ ಜೋಹರ್ ‘ಗೇ’ ಅನ್ನೋದು ಕೆಲವರ ಅಭಿಪ್ರಾಯ. ಈ ವಿಚಾರದಲ್ಲಿ ಸಾಕಷ್ಟು ರೀತಿಯ ಚರ್ಚೆ ಕೂಡ ನಡೆದಿದೆ. ಅವರು ನಡೆದುಕೊಳ್ಳುವ ರೀತಿ ಕೂಡ ಇದಕ್ಕೆ ಪೂರಕ ಎನಿಸಿದೆ. ಕರಣ್ ಹಾಗೂ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು ಇದೆ. ಈ ಗೆಳೆತನವನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ.
ಬಾಲಿವುಡ್ನ ಪ್ರಭಾವಿ ನಿರ್ಮಾಪಕರಲ್ಲಿ ಕರಣ್ ಜೋಹರ್ (Karan Johar) ಕೂಡ ಒಬ್ಬರು. ಅವರಿಗೆ ಇಂದು (ಮೇ 25) ಜನ್ಮದಿನದ. ಸೆಲೆಬ್ರಿಟಿಗಳು, ಸೆಲೆಬ್ರಿಟಿ ಕಿಡ್ಗಳು, ಫ್ಯಾನ್ಸ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದು ಎಂದರೆ ಅವರಿಗೆ ಸಖತ್ ಪ್ರೀತಿ. ಸ್ಟಾರ್ ಕಿಡ್ಗಳಿಗೆ ಮಾತ್ರ ಅವರು ಬೆಂಬಲ ನೀಡುತ್ತಾರೆ ಎನ್ನುವ ಆರೋಪ ಯಾವಾಗಲೂ ಇದೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈ ಮಧ್ಯೆ ಅನೇಕರು ಅವರನ್ನು ಗೇ ಎಂದು ಕರೆದಿದ್ದಾರೆ. ಕರಣ್ ಹಾಗೂ ಶಾರುಖ್ ಸಂಬಂಧವನ್ನು ಬೇರೆ ರೀತಿಯಲ್ಲಿ ಕೆಲವರು ಹೇಳಿದ್ದು ಇದೆ. ಈ ವಿಚಾರದಲ್ಲಿ ಮಾತ್ರ ಕರಣ್ಗೆ ಸಾಕಷ್ಟು ಬೇಸರ ಇದೆ.
ಕರಣ್ ಜೋಹರ್ ‘ಗೇ’ ಅನ್ನೋದು ಕೆಲವರ ಅಭಿಪ್ರಾಯ. ಈ ವಿಚಾರದಲ್ಲಿ ಸಾಕಷ್ಟು ರೀತಿಯ ಚರ್ಚೆ ಕೂಡ ನಡೆದಿದೆ. ಅವರು ನಡೆದುಕೊಳ್ಳುವ ರೀತಿ ಕೂಡ ಇದಕ್ಕೆ ಪೂರಕ ಎನಿಸಿದೆ. ಕರಣ್ ಹಾಗೂ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು ಇದೆ. ಈ ಗೆಳೆತನವನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ಇದು ಕರಣ್ ಜೋಹರ್ ಬೇಸರಕ್ಕೆ ಕಾರಣ ಆಗಿತ್ತು. ಅವರು ಈ ವಿಚಾರದಲ್ಲಿ ಉತ್ತರಿಸಿದ ರೀತಿ ಅನೇಕರಿಗೆ ಶಾಕಿಂಗ್ ಎನಿಸಿತ್ತು.
ಕರಣ್ ಜೋಹರ್ ತಮ್ಮ ಆತ್ಮಕಥನ ಬರೆದುಕೊಂಡಿದ್ದಾರೆ. ಈ ಪುಸ್ತಕದಲ್ಲಿ ಒಂದಷ್ಟು ಸಾಲುಗಳನ್ನು ಅವರು ಈ ಬಗ್ಗೆಯೇ ಬರೆದಿದ್ದರು. ‘ಪ್ರಪಂಚದಲ್ಲಿರುವ ಎಲ್ಲ ರೀತಿಯ ಲೈಂಗಿಕತೆಯನ್ನು ಅನುಭವಿಸಲು ನನ್ನ ಬಳಿ ಮಾರ್ಗಗಳಿವೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ನಿಜಕ್ಕೂ ಹಾಗಿಲ್ಲ. ನನಗೆ ಸೆ*ಕ್ಸ್ ಎಂಬುದು ತುಂಬಾ ವೈಯಕ್ತಿಕ ಭಾವನ. ಇದು ಕ್ಯಾಶ್ಯುವಲ್ ಆಗಿ ಮಾಡುವ ವಿಚಾರ ಅಲ್ಲವೇ ಅಲ್ಲ. ನನ್ನ ಬಗ್ಗೆ ಕೇಳಿ ಬಂದ ವದಂತಿಗಳನ್ನು ನಾನು ಯಾವಾಗಲೂ ನಿಭಾಯಿಸಿದ್ದೇನೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಅಪಹಾಸ್ಯ; ಅಸಮಾಧಾನಗೊಂಡ ಕರಣ್ ಜೋಹರ್ ಏನು ಮಾಡಿದ್ರು ನೋಡಿ
‘ನನ್ನ ಲೈಂಗಿಕತೆಯ ಬಗ್ಗೆ ತುಂಬಾ ವದಂತಿಗಳು ಇವೆ. ಶಾರುಖ್ ಮತ್ತು ನನ್ನ ಬಗ್ಗೆಯೂ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿದ್ದು ಇದೆ. ನಾನು ಅದರಿಂದ ಆಘಾತಕ್ಕೆ ಒಳಗಾಗಿದ್ದಾರೆ. ವಾಹಿನಿಯೊಂದರ ಶೋನಲ್ಲಿ ಶಾರುಖ್ ಬಗ್ಗೆ ನನ್ನಲ್ಲಿ ಪ್ರಶ್ನೆ ಮಾಡಲಾಯಿತು. ‘ನಮ್ಮಿಬ್ಬರ ಸಂಬಂಧ ಹೇಗಿದೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ನನಗೆ ಕೋಪ ಬಂತು. ‘ನೀವು ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ ಎಂದು ನಾನು ನಿಮ್ಮನ್ನು ಕೇಳಿದರೆ ನಿಮಗೆ ಹೇಗೆ ಅನಿಸುತ್ತದೆ?’ ಎಂದು ಅವರನ್ನು ಪ್ರಶ್ನಿಸಿದ್ದೆ. ಶಾರುಖ್ ನನಗೆ ಓರ್ವ ತಂದೆ, ಓರ್ವ ಅಣ್ಣ ಇದ್ದ ಹಾಗೆ’ ಎಂದು ಬರೆದುಕೊಂಡಿದ್ದರು ಕರಣ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.