ಕರಣ್ ಜೋಹರ್ ಬಾಲಿವುಡ್ನ ಹಲವು ಗಾಡ್ಫಾದರ್. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸೆಲೆಬ್ರಿಟಿ ಮಕ್ಕಳಿಗಾಗಿ ಅವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರಾ, ಅನನ್ಯಾ ಪಾಂಡೆ ಸೇರಿದಂತೆ ಅನೇಕರನ್ನು ಅವರು ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ. ಎಲ್ಲರೂ ಈಗ ಹೆಸರು ಮಾಡುತ್ತಿದ್ದಾರೆ. ಕರಣ್ ಜೋಹರ್ ಅವರು ಯಶ್-ರೂಹಿ ಜನಿಸುವುದಕ್ಕಿಂತ ಮೊದಲು ಒಬ್ಬರನ್ನು ಮಗಳು ಎಂದು ಸ್ವೀಕರಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ ಸೀಸನ್ 2’ನ ಭಾಗವಾಗಿದ್ದಾರೆ ಕರಣ್ ಜೋಹರ್. ಅಲ್ಲಿ ಆಲಿಯಾ ಭಟ್ ಕೂಡ ಇದ್ದರು. ಏಕೆಂದರೆ ಆಲಿಯಾ ಭಟ್ ಅವರ ನಟನೆಯ ‘ಜಿಗ್ರಾ’ ಸಿನಿಮಾ ರಿಲೀಸ್ಗೆ ರೆಡಿ ಇದ್ದು ಇದನ್ನು ಆಲಿಯಾ ಹಾಗೂ ಕರಣ್ ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಈ ಶೋಗೆ ಬಂದಿದ್ದರು. ಈ ವೇಳೆ ಅವರು ಆಲಿಯಾ ಭಟ್ ಅವರನ್ನು ತಮ್ಮ ಮಗಳು ಎಂದಿದ್ದಾರೆ.
‘ನನಗೆ ಮೊದಲು ಮಗಳ ಫೀಲ್ ಬಂದಿದ್ದು ಆಲಿಯಾಳಿಂದ. ಫೋಟೋಶೂಟ್ ನಡೆಯುತ್ತಿತ್ತು. ಅವಳು ಫಿಟ್ ಆಗಿ ಇಟ್ಟುಕೊಳ್ಳಲು ಕಳೆದ ಮೂರು ತಿಂಗಳಿಂದ ಸರಿಯಾದ ಊಟವನ್ನೇ ಮಾಡಿರಲಿಲ್ಲ. ಅಂದು ಅವಳು ವ್ಯಾನಿಟಿ ವ್ಯಾನ್ ಒಳಗೆ ಬಂದಳು. ಅವಳಿಗೆ ಕಪ್ ಕೇಕ್ ನೀಡಲಾಯಿತು. ನಾನು ಇದನ್ನು ತಿನ್ನಲಾ ಎಂದು ಕೇಳಿದಳು. ಆಗ ನನ್ನಲ್ಲಿರುವ ತಂದೆ ಜಾಗೃತ ಆದ ಎಂದಿದ್ದಾರೆ’ ಕರಣ್ ಜೋಹರ್.
ಇದನ್ನೂ ಓದಿ: ‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ
ಕರಣ್ ಜೋಹರ್ ಅವರನ್ನು ಕಂಡರೆ ಆಲಿಯಾಗೂ ಸಖತ್ ಪ್ರೀತಿ. ‘ಕರಣ್ ನನಗೆ ಮೆಂಟರ್, ಫ್ರೆಂಡ್, ತಂದೆ ಸಮಾನ, ಈ ಚಿತ್ರಕ್ಕೆ ಅವರು ನಿರ್ಮಾಪಕರು ಕೂಡ ಹೌದು’ ಎಂದರು ಕರಣ್. ಕರಣ್ ಜೋಹರ್ ಅವರಿಗೆ ಆಲಿಯಾ ಹಾಗೂ ರಣಬೀರ್ ಪರ್ಫೆಕ್ಟ್ ಕಪಲ್ ಎನಿಸಿತ್ತಂತೆ. ನಂತರ ಹಾಗೆಯೇ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.