ಪ್ರೇಕ್ಷಕರ ಬಗ್ಗೆ ಬೇಸರ ಹೊರಹಾಕಿದ ಕರಣ್ ಜೋಹರ್; ಕಾರಣ ಏನು?

Karan Johar: ಕರಣ್ ಜೋಹರ್ ಅವರು ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರ ಅವರಿಂದ ಹಿಡಿದು, ಅನನ್ಯಾ ಪಾಂಡೆ, ಸುಹಾನಾ ಖಾನ್ ಮೊದಲಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಕೆಲವರು ಸ್ಟಾರ್​ಗಿರಿ ಪಡೆದರೆ ಇನ್ನೂ ಕೆಲವರು ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಕರಣ್ ಅವರು ಹೊರಗಿನವರಿಗೆ ಅವಕಾಶ ನೀಡುವುದಿಲ್ಲ ಎಂಬ ಆರೋಪದ ಬಗ್ಗೆ ಅವರು ಮಾತನಾಡಿದ್ದಾರೆ.

ಪ್ರೇಕ್ಷಕರ ಬಗ್ಗೆ ಬೇಸರ ಹೊರಹಾಕಿದ ಕರಣ್ ಜೋಹರ್; ಕಾರಣ ಏನು?
Karan Johar
Updated By: ಮಂಜುನಾಥ ಸಿ.

Updated on: Sep 21, 2025 | 10:18 PM

ಕರಣ್ ಜೋಹರ್ ಅವರು ಹಲವು ಸ್ಟಾರ್ ಕಿಡ್​ಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಈ ಕಾರಣದಿಂದಲೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತಿದೆ. ತಮ್ಮ ಧರ್ಮ ಪ್ರೊಡಕ್ಷನ್ ಮೂಲಕ ಅವರು ಈ ಕೆಲಸ ಮಾಡಿದ್ದಾರೆ. ಅದೇ ರೀತಿ ಕೆಲವರು ಹೊಸಬರನ್ನು ಕೂಡ ಲಾಂಚ್ ಮಾಡಿದ್ದಾರೆ. ಆದರೆ, ಇದನ್ನು ಅನೇಕರು ಗಮನಿಸಿಲ್ಲ ಎಂಬ ಬೇಸರ ಅವರಿಗೆ ಇದೆ ಎನ್ನಬಹುದು. ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದಾರೆ.

ಕರಣ್ ಜೋಹರ್ ಅವರು ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರ ಅವರಿಂದ ಹಿಡಿದು, ಅನನ್ಯಾ ಪಾಂಡೆ, ಸುಹಾನಾ ಖಾನ್ ಮೊದಲಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಕೆಲವರು ಸ್ಟಾರ್​ಗಿರಿ ಪಡೆದರೆ ಇನ್ನೂ ಕೆಲವರು ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಕರಣ್ ಅವರು ಹೊರಗಿನವರಿಗೆ ಅವಕಾಶ ನೀಡುವುದಿಲ್ಲ ಎಂಬ ಆರೋಪದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ರಾಘವ್ ಜುರೆಲ್ ಅವರು ಸ್ಟೇಜ್ ಮೇಲೆ ಕಿಲ್ ನನಗೆ ಬ್ರೇಕ್ ನೀಡಿದೆ ಎಂದು ಒಪ್ಪಿಕೊಂಡಿದ್ದಾರೆ. ರಾಘವ್ ಕೂಡ ಹೊರಗಡೆಯವರು. ಆ ಕ್ರೆಡಿಟ್ ನನಗೇಕೆ ಕೊಡಲ್ಲ. ಕಿಲ್ ಮೂಲಕ ಲಕ್ಷ್ಯ್ ಲಾಲ್ವಾಣಿ ಲಾಂಚ್ ಮಾಡಿದೆ. 52 ಕೋಟಿ ರೂಪಾಯಿ ಅವರ ಮೇಲೆ ಹಾಕಿದ್ದೇನೆ. ನಾನು ಸ್ಟಾರ್ ಮಕ್ಕಳನ್ನು ಲಾಂಚ್ ಮಾಡಿದ್ದೇನೆ ಎನ್ನುವ ಕಾರಣಕ್ಕೆ ಈ ಕ್ರೆಡಿಟ್​ನ ಕದಿಯೋದು ಸರಿ ಅಲ್ಲ’ ಎಂದು ಕರಣ್ ಜೋಹರ್ ಹೇಳಿದ್ದಾರೆ.

ಇದನ್ನೂ ಓದಿ:ಜಾತಿ ಮತ್ತು ಪ್ರೀತಿ: ಸಿನಿಮಾ ಸರಣಿ ನಿರ್ಮಿಸಲು ಮುಂದಾದ ಕರಣ್ ಜೋಹರ್

ರಾಘವ್ ಅವರು ಬಾಲಿವುಡ್ ಹಿನ್ನೆಲೆ ಹೊಂದಿರುವವರು ಅಲ್ಲ. ಲಕ್ಷ್ಯ್ ಕೂಡ ಬಾಲಿವುಡ್​ ರಂಗದವರಲ್ಲ. ಈಗ ಇವರಿಬ್ಬರೂ ಅದ್ಭುತವಾಗಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ‘ಬ್ಯಾಡ್ಸ್ ಆಫ್ ಬಾಲಿವುಡ್’ ಸರಣಿಯಲ್ಲಿ ಇವರು ನಟಿಸಿದ್ದಾರೆ.

ಈ ಸರಣಿಯನ್ನು ಶಾರುಖ್ ಖಾನ್ ನಿರ್ಮಾಣ ಮಾಡಿದ್ದು ಅವರ ಮಗ ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ಸರಣಿಯಲ್ಲಿ ಕರಣ್ ಜೋಹರ್ ನಟಿಸಿದ್ದಾರೆ. ಇದರಲ್ಲಿ ಅವರು ನಿರ್ಮಾಪಕರಾಗಿಯೇ ಕಾಣಿಸಿಕೊಂಡಿದ್ದಾರೆ. ಅವರನ್ನು ಕರಣ್ ಆಗಿಯೇ ತೋರಿಸಲಾಗಿದೆ. ಕರಣ್ ಜೋಹರ್ ಗೇ ಎಂಬ ಆರೋಪವೂ ಇದೆ. ಶಾರುಖ್ ಹಾಗೂ ಕರಣ್ ಮಧ್ಯೆ ಸಂಬಂಧವನ್ನು ಕಲ್ಪಿಸಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ