AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪ್ರಿಯಕರನಿಗೆ ಹಗ್ ಕೊಟ್ಟ ಕರೀನಾ ಕಪೂರ್; ವಿಡಿಯೋ ವೈರಲ್

ಬಾಲಿವುಡ್ ಸ್ಟಾರ್ ನಟರಾದ ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ಮುಂಬೈನಲ್ಲಿ ನಡೆದ ಐಫಾ ಕಾರ್ಯಕ್ರಮದಲ್ಲಿ ಪರಸ್ಪರ ತಬ್ಬಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಇವರಿಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಬ್ ವಿ ಮೆಟ್ ಚಿತ್ರದ ನೆನಪುಗಳನ್ನು ಮರುಕಳಿಸಿದೆ.

ಮಾಜಿ ಪ್ರಿಯಕರನಿಗೆ ಹಗ್ ಕೊಟ್ಟ ಕರೀನಾ ಕಪೂರ್; ವಿಡಿಯೋ ವೈರಲ್
ಕರೀನಾ-ಶಾಹಿದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 23, 2026 | 8:06 AM

Share

ಬಾಲಿವುಡ್‌ನ ಜನಪ್ರಿಯ ಮಾಜಿ ಜೋಡಿ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡು ಸದ್ದು ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಐಫಾ 2027ರ ಪತ್ರಿಕಾಗೋಷ್ಠಿಯಲ್ಲಿ ಇಬ್ಬರೂ ಸೌಹಾರ್ದಯುತವಾಗಿ ಪರಸ್ಪರ ತಬ್ಬಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳ ಮನಸ್ಸಿನಲ್ಲಿ ಹಳೆಯ ಮಧುರ ನೆನಪುಗಳನ್ನು ಮರುಕಳಿಸಿದೆ. ಇವರಿಬ್ಬರೂ ಈ ಮೊದಲು ಸಾಕಷ್ಟು ವರ್ಷ ಡೇಟ್ ಮಾಡಿದ್ದರು. ಆದರೆ, ವಿವಾಹ ಆಗಲಿಲ್ಲ.

ಕರೀನಾ ಕಪೂರ್ ಕಪ್ಪು ಬಣ್ಣದ ಲೆದರ್ ಟಾಪ್ ಮತ್ತು ಸ್ಕರ್ಟ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾಹಿದ್ ಕಪೂರ್ ಆಕರ್ಷಕ ಬಿಳಿ ಬಣ್ಣದ ಸೂಟ್‌ನಲ್ಲಿ ಮಿಂಚಿದರು. ಇಬ್ಬರೂ ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವ ದೃಶ್ಯವನ್ನು ನೋಡಿ ಫ್ಯಾನ್ಸ್ ಭಾವಜೀವಿಗಳಾಗಿದ್ದಾರೆ. ‘ಜಬ್ ವಿ ಮೆಟ್’ ಚಿತ್ರದ ಗೀತ್ ಮತ್ತು ಆದಿತ್ಯ ಪಾತ್ರಗಳು ಮತ್ತೆ ಕಣ್ಣಮುಂದೆ ಬಂದಂತೆ ಭಾಸವಾಗುತ್ತಿದೆ ಎಂದು ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2007ರಲ್ಲಿ ತೆರೆಕಂಡ ಈ ಸೂಪರ್ ಹಿಟ್ ಚಿತ್ರದ ಬಳಿಕ ಇಬ್ಬರೂ ಬೇರೆ ಹಾದಿ ಹಿಡಿದರು. ಪ್ರಸ್ತುತ ಕರೀನಾ ಸೈಫ್ ಅಲಿ ಖಾನ್ ಜೊತೆ ಸಂಸಾರ ನಡೆಸುತ್ತಿದ್ದರೆ, ಶಾಹಿದ್ ಕಪೂರ್ ಮೀರಾ ರಾವ್‌ಪುತ್ ಅವರನ್ನು ವರಿಸಿದ್ದಾರೆ. ಆದರೂ ಸಾರ್ವಜನಿಕ ವೇದಿಕೆಗಳಲ್ಲಿ ಇವರ ಸ್ನೇಹಪೂರ್ವಕ ಭೇಟಿಗಳು ಎಲ್ಲರ ಗಮನ ಸೆಳೆಯುತ್ತಲೇ ಇರುತ್ತವೆ.

ಕೆಲವು ದಿನಗಳ ಹಿಂದೆ ಕರೀನಾ ಅವರ ಟಾಕ್ ಶೋನಲ್ಲಿ ಶಾಹಿದ್ ಪತ್ನಿ ಮೀರಾ ರಾವ್‌ಪುತ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಇಬ್ಬರೂ ತಾರೆಯರ ನಡುವಿನ ಸೌಹಾರ್ದಯುತ ಬಾಂಧವ್ಯ ಕೂಡ ಸಿನಿಮಾ ವಲಯದಲ್ಲಿ ಹಾಟ್‌ ಟಾಪಿಕ್ ಆಗಿತ್ತು. ಶೋನ ಚಿತ್ರೀಕರಣದ ಸುಂದರ ಕ್ಷಣಗಳನ್ನು ಮೀರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕರೀನಾ ಕೂಡ ಇದಕ್ಕೆ ಅತ್ಯಂತ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಮಲಗುವ ಮುನ್ನ ವಿಚಿತ್ರ ಹವ್ಯಾಸ ಫಾಲೋ ಮಾಡ್ತಾರೆ ಕರೀನಾ ಕಪೂರ್

ಸದ್ಯ ಐಫಾ ವೇದಿಕೆಯಲ್ಲಿ ಕರೀನಾ ಮತ್ತು ಶಾಹಿದ್ ಮುಖಾಮುಖಿಯಾಗಿರುವ ವಿಡಿಯೋಗೆ ನೆಟ್ಟಿಗರಿಂದ ಭರ್ಜರಿ ಲೈಕ್ಸ್ ಹಾಗೂ ಕಾಮೆಂಟ್‌ಗಳು ಹರಿದುಬರುತ್ತಿವೆ. ತೆರೆಯ ಮೇಲೆ ಗೀತ್ ಮತ್ತು ಆದಿತ್ಯ ಜೋಡಿಯನ್ನು ಮತ್ತೆ ಒಂದೇ ಸಿನಿಮಾದಲ್ಲಿ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಈ ಮಾಜಿ ಜೋಡಿಯ ಅನಿರೀಕ್ಷಿತ ಭೇಟಿ ಬಾಲಿವುಡ್‌ನಲ್ಲಿ ಈಗ ಹೊಸ ಸಂಚಲನ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?