ಕರೀನಾ ಕಪೂರ್​ ಖಾನ್​ ಹಾಟ್​ ಅವತಾರ ನೋಡಿ ಸುಸ್ತಾದ ಪಡ್ಡೆ ಹುಡುಗರು

|

Updated on: May 29, 2024 | 10:38 PM

ಸಿನಿಮಾಗಳಲ್ಲಿ ಮಾತ್ರವಲ್ಲದೇ ರಿಯಲ್​ ಲೈಫ್​ನಲ್ಲಿಯೂ ಕರೀನಾ ಕಪೂರ್ ಖಾನ್​ ಅವರು ಕೆಲವೊಮ್ಮೆ ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಾರೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಕರೀನಾ ಕಪೂರ್​ ಅವರು ಬೋಲ್ಡ್​ ಆದಂತಹ ಕಾಸ್ಟ್ಯೂಮ್​ ಧರಿಸಿ ಬಂದಿದ್ದಾರೆ. ಈ ಫೋಟೋಗಳು ಸಖತ್​ ವೈರಲ್​ ಆಗಿವೆ.

ಕರೀನಾ ಕಪೂರ್​ ಖಾನ್​ ಹಾಟ್​ ಅವತಾರ ನೋಡಿ ಸುಸ್ತಾದ ಪಡ್ಡೆ ಹುಡುಗರು
ಕರೀನಾ ಕಪೂರ್​ ಖಾನ್​
Follow us on

ಹಿಂದಿ ಚಿತ್ರರಂಗದ (Bollywood) ಪ್ರಸಿದ್ಧ ನಟಿ ಕರೀನಾ ಕಪೂರ್​ ಖಾನ್​ ಅವರು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್​ ಎಲ್ಲರ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ಗ್ಲಾಮರಸ್​ ಅವತಾರದಲ್ಲಿ ಕರೀನಾ ಕಪೂರ್​ ಖಾನ್​ (Kareena Kapoor Khan) ಅವರು ಕಾಣಿಸಿಕೊಂಡಿದ್ದಾರೆ. ಅವರ ಹಾಟ್​ ಅವತಾರ ನೋಡಿ ಪಡ್ಡೆ ಹುಡುಗರು ಸುಸ್ತಾಗಿದ್ದಾರೆ. ಈ ಫೋಟೋಗಳನ್ನು ಕರೀನಾ ಕಪೂರ್​ ಖಾನ್​ ಅವರು ಸ್ವತಃ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಈ ಫೋಟೋಗಳನ್ನು (Kareena Kapoor Viral Photo) ಲೈಕ್​ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಕರೀನಾ ಕಪೂರ್​ ಖಾನ್​ ಅವರ ಈ ಫೋಟೋಗಳು ವೈರಲ್​ ಆಗಿವೆ. ನಟಿಯ ಬೋಲ್ಡ್​ ವೇಷ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಕೆಲವು ನಟಿಯರು ಮದುವೆ, ಮಕ್ಕಳು ಆದ ನಂತರ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಕರೀನಾ ಕಪೂರ್​ ಖಾನ್​ ಅವರು ಆ ರೀತಿ ಅಲ್ಲ. ಈಗ ಅವರು ಹಂಚಿಕೊಂಡಿರುವ ಈ ಫೋಟೋಗಳು ತುಂಬ ಹಾಟ್​ ಆಗಿವೆ.

ಇನ್​ಸ್ಟಾಗ್ರಾಮ್​ನಲ್ಲಿ ಕರೀನಾ ಕಪೂರ್​ ಖಾನ್​ ಅವರು ಈ ಫೋಟೋಗಳನ್ನು ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಕಮೆಂಟ್​ಗಳ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೆಲವರು ಟ್ರೋಲ್​ ಮಾಡಿದ್ದಾರೆ. ಆದರೆ ಅಪ್ಪಟ ಅಭಿಮಾನಿಗಳು ಕರೀನಾ ಕಪೂರ್​ ಪರವಾಗಿ ಕಮೆಂಟ್​ ಮಾಡಿದ್ದಾರೆ.

ಕರೀನಾ ಕಪೂರ್​ ಖಾನ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

ಕರೀನಾ ಕಪೂರ್​ ಖಾನ್​ ಅವರಿಗೆ ಈಗ 43 ವರ್ಷ ವಯಸ್ಸು. ಸೈಫ್​ ಅಲಿ ಖಾನ್​ ಜೊತೆ ಮದುವೆ ಆಗಿರುವ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇಂದಿಗೂ ಕರೀನಾ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿವೆ. ಆದರೆ ಅವರ ಬೇಡಿಕೆ ಕಡಿಮೆ ಆಗಿಲ್ಲ. ಈ ವರ್ಷ ಅವರು ನಟಿಸಿದ ‘ಕ್ರೂ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಯಶಸ್ಸು ಕಂಡಿತು.

ಇದನ್ನೂ ಓದಿ: ಕರೀನಾ ಕೇಳಿದಷ್ಟು ಹಣ ಕೊಡಲಿಲ್ಲವೇ ‘ಟಾಕ್ಸಿಕ್’ ತಂಡದವರು? ಹೊಸ ಚರ್ಚೆ ಶುರು

ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​ ಅವರು ನಟಿಸುತ್ತಾರೆ ಎಂದು ಕೆಲವು ದಿನಗಳ ಹಿಂದೆ ಗುಸುಗುಸು ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಕೂಡ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಕರೀನಾ ಅವರಾಗಲೀ, ‘ಟಾಕ್ಸಿಕ್​’ ಚಿತ್ರತಂಡದವರಾಗಲಿ ಬಾಯಿ ಬಿಟ್ಟಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.