
ಬಾಲಿವುಡ್ನ ಖ್ಯಾತ ನಟಿ ಕರೀನಾ ಕಪೂರ್ಗೆ ಕೊರೊನಾ ಪಾಸಿಟಿವ್ ಆಗಿದೆ. ಅವರ ಜತೆ ಇದ್ದ ಗೆಳತಿ ಅಮೃತಾ ಅರೋರಾಗೂ ಕೊರೊನಾ ದೃಢಪಟ್ಟಿದೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕರೀನಾ ಮನೆಯನ್ನು ಸೀಲ್ಡೌನ್ ಮಾಡಿದೆ. ಅವರು ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಎಂಸಿ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ‘ನಟಿ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾಗೆ ಕೊವಿಡ್ ಪಾಸಿಟಿವ್ ಆಗಿದೆ. ಇಬ್ಬರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಸಂಪರ್ಕಕ್ಕೆ ಬಂದವರು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿ’ ಎಂದು ಬಿಎಂಸಿ ಸೂಚಿಸಿದೆ. ಕೊವಿಡ್ ಉಂಟಾದ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ.
ಟ್ರೋಲ್ ಆಗಿದ್ದ ಕರೀನಾ:
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಐಷಾರಾಮಿ ಹೋಟೆಲ್ನಲ್ಲಿ ನೆರವೇರಿದೆ. ಮದುವೆಯನ್ನು ಅದ್ದೂರಿಯಾಗಿ ನಡೆಸಲಾಗಿತ್ತು. ವಿವಾಹ ಗುಟ್ಟಾಗಿ ನಡೆದರೂ, ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಇಬ್ಬರೂ ಅಧಿಕೃತ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಸೆಲೆಬ್ರಿಟಿಗಳು ಈ ದಂಪತಿಗೆ ವಿಶ್ ಮಾಡುತ್ತಿದ್ದಾರೆ. ಅಂತೆಯೇ ಕರೀನಾ ಕೂಡ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ವೇಳೆ ಅವರು ಮಾಡಿಕೊಂಡ ಎಡವಟ್ಟೇನು? ಅವರನ್ನು ಟ್ರೋಲ್ ಮಾಡೋಕೆ ಕಾರಣವೇನು? ವಿಚಾರ ಸಿಂಪಲ್.
ಕತ್ರಿನಾ ಮತ್ತು ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಚಾರ ತಿಳಿದೇ ಇದೆ. ಆದರೆ, ಇವರ ಸಂಬಂಧ ಬಹಳ ಸಮಯವರೆಗೆ ಉಳಿದಿಲ್ಲ. ಇದು ರಣಬೀರ್ ಕಪೂರ್ ಸಹೋದರಿ ಕರೀನಾ ಮೇಲೂ ಎಫೆಕ್ಟ್ ಆಗಿತ್ತು. ಕತ್ರಿನಾ ಹಾಗೂ ರಣಬೀರ್ ಬ್ರೇಕಪ್ ನಂತರದಲ್ಲಿ ಕತ್ರಿನಾ ಮತ್ತು ಕರೀನಾ ದೂರವಾದರು. ಸೋಶಿಯಲ್ಮೀಡಿಯಾದಲ್ಲಿ ಕತ್ರಿನಾ ಅವರನ್ನು ಅನ್ಫಾಲೋ ಮಾಡಿದರು ಕರೀನಾ. ಇದಾದ ಹಲವು ವರ್ಷಗಳ ನಂತರದಲ್ಲಿ ಕತ್ರಿನಾಗೆ ಕರೀನಾ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಫಾಲೋ ಮಾಡೋಕು ಆರಂಭಿಸಿದ್ದಾರೆ. ಈ ವಿಚಾರ ಇಟ್ಟುಕೊಂಡೇ ಟ್ರೋಲ್ ಮಾಡಲಾಗಿದೆ. ‘ಕರೀನಾ ಅವರು ಕತ್ರಿನಾ ಅವರನ್ನು ಫಾಲೋ ಮಾಡೋಕೆ ವಿವಾಹವೇ ಏರ್ಪಡಬೇಕಾಯಿತು’ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಮನೆಯಲ್ಲಿ ದೀಪಾವಳಿ; ಕರೀನಾಗೆ ಪೋಸ್ ನೀಡಲು ಅಡ್ಡಿಪಡಿಸಿದ ಮಗ ಜೇಹ್
ಕತ್ರಿನಾ ಕೈಫ್ಗೆ ವಿಶ್ ಮಾಡಿ ಟ್ರೋಲ್ ಆದ ಕರೀನಾ ಕಪೂರ್; ಇದಕ್ಕಿದೆ ರಣಬೀರ್ ಲಿಂಕ್
Published On - 6:14 pm, Mon, 13 December 21