Karthik Aaryan: ವೇದಿಕೆ ಮೇಲೆ ಚಪ್ಪಲಿ ಹಾಕಿಕೊಳ್ಳಲು ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​; ವಿಡಿಯೋ ವೈರಲ್​

Satyaprem Ki Katha: ಬೇರೆಯವರ ಚಪ್ಪಲಿ ಮುಟ್ಟಿದರೆ ತಮ್ಮ ಅಭಿಮಾನಿಗಳಿಗೆ ಬೇಸರ ಆಗಬಹುದು ಎಂದು ಸ್ಟಾರ್​ ನಟ-ನಟಿಯರು ಆಲೋಚಿಸಬಹುದು. ಆದರೆ ಕಾರ್ತಿಕ್​ ಆರ್ಯನ್​ ಅವರು ಆ ರೀತಿ ಅಲ್ಲ.

Karthik Aaryan: ವೇದಿಕೆ ಮೇಲೆ ಚಪ್ಪಲಿ ಹಾಕಿಕೊಳ್ಳಲು ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​; ವಿಡಿಯೋ ವೈರಲ್​
ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​

Updated on: Jun 22, 2023 | 3:03 PM

ನಟ ಕಾರ್ತಿಕ್​ ಆರ್ಯನ್​ (Karthik Aaryan) ಅವರು ಬಾಲಿವುಡ್​ನಲ್ಲಿ ಸ್ಟಾರ್​ ಹೀರೋ ಆಗಿ ಬೆಳೆದಿದ್ದಾರೆ. ‘ಭೂಲ್​ ಭುಲಯ್ಯ 2’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್​ ಮಾಫಿಯಾದ ನಡುವೆಯೂ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಕಾರ್ತಿಕ್​ ಆರ್ಯನ್ ಜೊತೆ ಕಿಯಾರಾ ಅಡ್ವಾಣಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡು ಬಿಡುಗಡೆ ಮಾಡಲಾಯಿತು. ಈ ಪ್ರಯುಕ್ತ ಮುಂಬೈನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ವೇದಿಕೆಯಲ್ಲಿ ಕಿಯಾರಾ ಅಡ್ವಾಣಿ (Kiara Advani) ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಸಾಮಾನ್ಯವಾಗಿ ಸ್ಟಾರ್​ ನಟರಿಗೆ ತಮ್ಮ ಪ್ರತಿಷ್ಠೆಯ ಬಗ್ಗೆ ಕಾಳಜಿ ಇರುತ್ತದೆ. ತಾವು ಬೇರೆಯವರ ಚಪ್ಪಲಿ ಮುಟ್ಟಿದರೆ ತಮ್ಮ ಅಭಿಮಾನಿಗಳಿಗೆ ಬೇಸರ ಆಗಬಹುದು ಎಂದು ಸ್ಟಾರ್​ ನಟ-ನಟಿಯರು ಆಲೋಚಿಸಬಹುದು. ಆದರೆ ಕಾರ್ತಿಕ್​ ಆರ್ಯನ್​ ಅವರು ಆ ರೀತಿ ಅಲ್ಲ. ಯಾವ ಅಂಜಿಕೆಯೂ ಇಲ್ಲದೇ ಅವರು ಕಿಯಾಯಾ ಅಡ್ವಾಣಿಯ ಚಪ್ಪಲಿ ಮುಟ್ಟಿದ್ದಾರೆ. ಅವರ ಈ ಗುಣವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಕಿಯಾರಾ ಅಡ್ವಾಣಿ ಅವರು ಹೈ ಹೀಲ್ಸ್​ ಧರಿಸಿ ಬಂದಿದ್ದರು. ವೇದಿಕೆಯಲ್ಲಿ ಡ್ಯಾನ್ಸ್​ ಮಾಡುವ ಸಲುವಾಗಿ ಅವರು ಹೀಲ್ಸ್​ ತೆಗೆದಿಟ್ಟರು. ಡ್ಯಾನ್ಸ್​ ಮಾಡಿದ ಬಳಿಕ ಮತ್ತೆ ಅವುಗಳನ್ನು ಹಾಕಿಕೊಳ್ಳಲು ಮುಂದಾದಾಗ ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದರು. ನಟಿಯ ಚಪ್ಪಲಿಯನ್ನು ತಾವೇ ಕೈಯಾರೆ ತಂದು ಕೊಟ್ಟರು. ಅಲ್ಲದೇ ಕಿಯಾರಾ ಚಪ್ಪಲಿ ಹಾಕಿಕೊಳ್ಳುವವರೆಗೂ ಅವರಿಗೆ ಆಧಾರವಾಗಿ ಕಾರ್ತಿಕ್​ ಆರ್ಯನ್​ ನಿಂತಿದ್ದರು.

ಇದನ್ನೂ ಓದಿ: Satyaprem Ki Katha: 4 ಭಿನ್ನ ರೀತಿಯಲ್ಲಿ ಮದುವೆ; ಇದಕ್ಕೆ ಖರ್ಚಾಗಿದ್ದು 7 ಕೋಟಿ ರೂಪಾಯಿ: ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಅಚ್ಚರಿಯ ಸುದ್ದಿ

ಕಾರ್ತಿಕ್​ ಆರ್ಯನ್​ ಅವರು ತುಂಬ ಸರಳ ಸ್ವಭಾವದ ಹೀರೋ. ಜನಸಾಮಾನ್ಯರ ಜೊತೆ ಅವರು ಚೆನ್ನಾಗಿ ಬೆರೆಯುತ್ತಾರೆ. ಈ ಹಿಂದೆ ಅವರು ರಸ್ತೆಬದಿಯಲ್ಲಿ ಆಹಾರ ಸೇವಿಸಿದ ವಿಡಿಯೋ ವೈರಲ್​ ಆಗಿತ್ತು. ಈಗ ಕಿಯಾರಾಗೆ ಚಪ್ಪಲಿ ಧರಿಸಲು ಸಹಾಯ ಮಾಡಿದ ವಿಡಿಯೋ ಕೂಡ ವೈರಲ್​ ಆಗಿದೆ. ಇದನ್ನು ನೋಡಿದ ಅನೇಕರಿಗೆ ಸುಶಾಂತ್​ ಸಿಂಗ್ ರಜಪೂತ್​ ಅವರ ನೆನಪಾಗಿದೆ. ಇನ್ನೂ ಕೆಲವರು ಕಾರ್ತಿಕ್​ ಆರ್ಯನ್​ ಅವರನ್ನು ಶಾರುಖ್​ ಖಾನ್​ಗೆ ಹೋಲಿಸಿದ್ದಾರೆ. ‘ಇವರು ನಿಜವಾದ ಜಂಟಲ್​ಮ್ಯಾನ್​’ ಎಂದು ಅಭಿಮಾನಿಗಳು ಹೊಗಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us