Katrina Kaif: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ; ಏನಿದು ಸಮಾಚಾರ? ವಿಡಿಯೋ ನೋಡಿ

| Updated By: shivaprasad.hs

Updated on: Jan 02, 2022 | 9:23 AM

Vicky Kaushal: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮುಂಬೈನ ನಿವಾಸದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಶನಿವಾರ ವಿಕ್ಕಿ ಚಿತ್ರೀಕರಣಕ್ಕೆ ತೆರಳಿದ್ದು, ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

Katrina Kaif: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ; ಏನಿದು ಸಮಾಚಾರ? ವಿಡಿಯೋ ನೋಡಿ
ವಿಮಾನ ನಿಲ್ದಾಣದಲ್ಲಿ ಕತ್ರಿನಾ- ವಿಕ್ಕಿ
Follow us on

ಪ್ರಸ್ತುತ ಬಾಲಿವುಡ್ ತಾರಾ ಜೋಡಿಗಳಲ್ಲಿ ಅಭಿಮಾನಿಗಳ ಕಣ್ಮಣಿ ಎಂದರೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಎಂದರೆ ತಪ್ಪಾಗಲಿಕ್ಕಿಲ್ಲ. ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ತಮ್ಮ ನಡೆ-ನುಡಿಗಳಿಂದ ಎಲ್ಲರ ಮನಗೆಲ್ಲುತ್ತಿದ್ದಾರೆ. ಹೊಸ ವರ್ಷಾಚರಣೆಯನ್ನು ಮುಂಬೈನಲ್ಲೇ ಆಚರಿಸಿದ ಬೆರಳೆಣಿಕೆಯಷ್ಟು ತಾರಾ ಜೋಡಿಗಳಲ್ಲೂ ಇವರೂ ಒಂದು. ಹೊಸ ವರ್ಷದ ದಿನ ಇಬ್ಬರೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಅದೂ ಅಲ್ಲದೇ ಈರ್ವರ ನಡುವಿನ ಪ್ರೀತಿಗೆ ಅಭಿಮಾನಿಗಳು ಮತ್ತೆ ಮಾರುಹೋಗಿದ್ದಾರೆ. ಹೌದು. ಹೊಸ ವರ್ಷದ ದಿನ ಶನಿವಾರ ರಾತ್ರಿ ವಿಕ್ಕಿ- ಕತ್ರಿನಾ ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಅವರನ್ನು ಡ್ರಾಪ್ ಮಾಡಲು ಸ್ವತಃ ಕತ್ರಿನಾ ಏರ್​ಪೋರ್ಟ್​ಗೆ ಆಗಮಿಸಿದ್ದಾರೆ.

ಪತ್ನಿಯೊಂದಿಗೆ ಹೊಸ ವರ್ಷಾಚರಣೆ ಆಚರಿಸಲೆಂದೇ ವಿಕ್ಕಿ ಕೌಶಲ್ ಮುಂಬೈಗೆ ಆಗಮಿಸಿದ್ದರು. 2022ನ್ನು ಸ್ವಾಗತಿಸಿದ ನಂತರ ಶನಿವಾರ ವಿಕ್ಕಿ ಮತ್ತೆ ಚಿತ್ರೀಕರಣಕ್ಕೆ ತೆರಳಿದ್ದಾರೆ. ಅವರನ್ನು ಬಿಡಲೆಂದು ಕತ್ರಿನಾ ಜತೆಯಲ್ಲೇ ಬಂದಿದ್ದರು. ಹೊರಡುವ ಮುನ್ನ ಈರ್ವರೂ ಆಲಂಗಿಸಿ, ತಾತ್ಕಾಲಿಕ ವಿದಾಯ ಹೇಳಿದರು. ಇದು ಅಭಿಮಾನಿಗಳ ಮನಗೆದ್ದಿದೆ.

ಕಾಮೆಂಟ್​ಗಳಲ್ಲಿ ವಿಕ್ಕಿ ಹಾಗೂ ಕತ್ರಿನಾ ಕುರಿತು ಅಭಿಮಾನಿಗಳು ಮೆಚ್ಚುಗೆಯ ಹೊಳೆಯನ್ನೇ ಹರಿಸಿದ್ದಾರೆ. ಇತ್ತೀಚೆಗೆ ಕ್ರಿಸ್​ಮಸ್ ಸಂದರ್ಭದಲ್ಲೂ ಜತೆಯಾಗಿರಲು ವಿಕ್ಕಿ ಆಗಮಿಸಿದ್ದರು. ಹೊಸ ವರ್ಷಕ್ಕೂ ಆಗಮಿಸಿದ್ದಾರೆ. ಯಾವುದೇ ಆಡಂಬರವಿಲ್ಲದ ನೈಜ ಪ್ರೀತಿ ಇದು ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಏರ್​ಪೋರ್ಟ್​​ನಲ್ಲಿ ವಿಕ್ಕಿ- ಕತ್ರಿನಾ; ವಿಡಿಯೋ ಇಲ್ಲಿದೆ: 

ಚಿತ್ರಗಳ ವಿಷಯಕ್ಕೆ ಬರುವುದಾದರೆ, ಕ್ರಿಸ್​ಮಸ್ ಸಂದರ್ಭದಲ್ಲಿ ಕತ್ರಿನಾ ತಮ್ಮ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ‘ಮೆರ್ರಿ ಕ್ರಿಸ್​ಮಸ್’ ಎಂದು ಹೆಸರಿಡಲಾಗಿದೆ. ಇದಲ್ಲದೇ ಕತ್ರಿನಾ ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಣ್ಣಹಚ್ಚುತ್ತಿದ್ದಾರೆ. ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಜತೆ ತೆರೆ ಹಂಚಿಕೊಳ್ಳುತ್ತಿರುವ ‘ಜೀ ಲೇ ಜರಾ’ ಚಿತ್ರವೂ ಸರದಿಯಲ್ಲಿದೆ.

ವಿಕ್ಕಿ ಕೌಶಲ್ ಬತ್ತಳಿಕೆಯಲ್ಲೂ ಹಲವು ಚಿತ್ರಗಳಿವೆ. ‘ಸ್ಯಾಮ್ ಬಹದ್ದೂರ್’, ‘ಗೋವಿಂದ ನಾಮ್ ಮೇರಾ’, ‘ಇಮ್ಮಾರ್ಟಲ್ ಅಶ್ವತ್ಥಾಮ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Katrina Kaif: 2021ರ ಕೊನೆಯ ದಿನವೂ ಜಿಮ್​ನಲ್ಲಿ ಬೆವರು ಹರಿಸಿದ ಕತ್ರಿನಾ; ಕೆಲಸದ ಕುರಿತ ನಟಿಯ ಬದ್ಧತೆಗೆ ಫ್ಯಾನ್ಸ್ ಫಿದಾ

Kajal Aggarwal: ತಾಯಿಯಾಗಲಿದ್ದಾರೆ ಕಾಜಲ್; ಹೊಸ ಉತ್ಸಾಹದೊಂದಿಗೆ 2022ನ್ನು ಬರಮಾಡಿಕೊಂಡ ನಟಿ