ದಕ್ಷಿಣದ ಈ ನಟನ ಜೊತೆ ನಟಿಸಲು ರೆಡಿ ಆದ ಕತ್ರಿನಾ ಕೈಫ್?

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ‘ಸ್ಪಿರಿಟ್’ ಸಿನಿಮಾಗೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಎಂಟ್ರಿ ಕೊಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಭಾರಿ ಸಂಭಾವನೆ ಹಾಗೂ ಕಠಿಣ ಷರತ್ತುಗಳ ಕಾರಣಕ್ಕೆ ದೀಪಿಕಾ ಪಡುಕೋಣೆ ಈ ಚಿತ್ರದಿಂದ ಹೊರಬಿದ್ದ ಬೆನ್ನಲ್ಲೇ ಕತ್ರಿನಾ ಅವರ ಅತಿಥಿ ಪಾತ್ರದ ಸುದ್ದಿ ಸಖತ್ ವೈರಲ್ ಆಗುತ್ತಿದೆ.

ದಕ್ಷಿಣದ ಈ ನಟನ ಜೊತೆ ನಟಿಸಲು ರೆಡಿ ಆದ ಕತ್ರಿನಾ ಕೈಫ್?
ಕತ್ರಿನಾ
Edited By:

Updated on: Jul 25, 2026 | 7:27 AM

ಮುಖ್ಯಾಂಶಗಳು

  • ಟಾಲಿವುಡ್‌ಗೆ ಕತ್ರಿನಾ ಕೈಫ್ ಗ್ರ್ಯಾಂಡ್ ಎಂಟ್ರಿ?
  • ಪ್ರಭಾಸ್ ಚಿತ್ರದಲ್ಲಿ ನಟಿಸಲಿರೋ ಪಾತ್ರ ಯಾವುದು?
  • ತೃಪ್ತಿ ಡಿಮ್ರಿ ನಾಯಕಿ, ಕತ್ರಿನಾ ಗೆಸ್ಟ್ ಅಪಿಯರೆನ್ಸ್

ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ‘ಸ್ಪಿರಿಟ್’ ಸಿನಿಮಾ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಈ ಚಿತ್ರದ ತಾರಾಗಣದ ಬಗ್ಗೆ ಈಗ ಹೊಸದೊಂದು ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಈ ಬಿಗ್ ಬಜೆಟ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ ಕತ್ರಿನಾ ಕೈಫ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಅವಧಿ ತುಂಬಾ ಕಡಿಮೆ ಇರಲಿದೆ. ಆದರೆ ಕಥೆಗೆ ಈ ಪಾತ್ರ ಅತ್ಯಂತ ಪ್ರಮುಖವಾಗಿರಲಿದೆ. ಸಿನಿಮಾದ ಪ್ರಮುಖ ತಿರುವಿಗೆ ಈ ಪಾತ್ರವೇ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡವಾಗಲಿ ಅಥವಾ ನಟಿಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಹಿಂದೆ ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಪ್ರಭಾಸ್ ಮತ್ತು ದೀಪಿಕಾ ಈಗಾಗಲೇ ‘ಕಲ್ಕಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ ದೀಪಿಕಾ ಈ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದಾರೆ. ಅವರ ಜಾಗಕ್ಕೆ ತೃಪ್ತಿ ಡಿಮ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಒಂದು ವೇಳೆ ಕತ್ರಿನಾ ಈ ಚಿತ್ರಕ್ಕೆ ಒಪ್ಪಿಕೊಂಡರೆ ಅವರು ಸುಮಾರು ಎರಡು ದಶಕಗಳ ಬಳಿಕ ತೆಲುಗು ಚಿತ್ರರಂಗಕ್ಕೆ ಮರಳಿದಂತಾಗುತ್ತದೆ. ಈ ಹಿಂದೆ ಅವರು ವೆಂಕಟೇಶ್ ಜೊತೆ ‘ಮಲ್ಲೀಶ್ವರಿ’ ಮತ್ತು ಬಾಲಕೃಷ್ಣ ಜೊತೆ ‘ಅಲ್ಲರಿ ಪಿಡುಗು’ ಸಿನಿಮಾಗಳಲ್ಲಿ ನಟಿಸಿದ್ದರು. ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಬಳಿಕ ಕತ್ರಿನಾ ಸಿನಿಮಾಗಳಿಂದ ಕೊಂಚ ಬ್ರೇಕ್ ತಗೆದುಕೊಂಡಿದ್ದರು.

ಇದನ್ನೂ ಓದಿ:  ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?

ಕತ್ರಿನಾ ಕೈಫ್ ಅವರು 2024ರ ‘ಹ್ಯಾಪಿ ನ್ಯೂಯರ್’ ಸಿನಿಮಾ ಬಳಿಕ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ವಿಕ್ಕಿ ಜೊತೆ ಮದುವೆ ಆಗಿರೋ ಅವರು ಇತ್ತೀಚೆಗೆ ತಾಯಿ ಆಗಿದ್ದಾರೆ. ಈ ಕಾರಣಕ್ಕೆ ಅವರು ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us