Katrina Kaif: ನಟಿ ಕತ್ರಿನಾ ಕೈಫ್​ ಜೊತೆ 20 ವರ್ಷಗಳಿಂದ ಅತಿ ಹೆಚ್ಚು ಸಮಯ ಕಳೆದ ವ್ಯಕ್ತಿ ಇವರೇ

|

Updated on: Jul 11, 2023 | 6:23 PM

Katrina Kaif Personal Assistant: ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸುವುದು ಎಂದರೆ ಸಣ್ಣ ಮಾತಲ್ಲ. ಆ ಸುದೀರ್ಘ ಪಯಣದಲ್ಲಿ ಕತ್ರಿನಾ ಕೈಫ್ ಅವರಿಗೆ ಅಶೋಕ್​ ಶರ್ಮಾ ಜೊತೆಯಾಗಿದ್ದಾರೆ.

Katrina Kaif: ನಟಿ ಕತ್ರಿನಾ ಕೈಫ್​ ಜೊತೆ 20 ವರ್ಷಗಳಿಂದ ಅತಿ ಹೆಚ್ಚು ಸಮಯ ಕಳೆದ ವ್ಯಕ್ತಿ ಇವರೇ
ಕತ್ರಿನಾ ಕೈಫ್​, ಅಶೋಕ್​ ಶರ್ಮಾ
Follow us on

ಬಾಲಿವುಡ್​ನ ಖ್ಯಾತ ನಟಿ ಕತ್ರಿನಾ ಕೈಫ್​ ಅವರು ವಿಕ್ಕಿ ಕೌಶಲ್​ (Vicky Kaushal) ಜೊತೆ ಮದುವೆಯಾಗಿ ಖುಷಿಯಾಗಿದ್ದಾರೆ. ಖಾಸಗಿ ಜೀವನ ಮತ್ತು ವೃತ್ತಿ ಬದುಕನ್ನು ಅವರು ಬ್ಯಾಲೆನ್ಸ್​ ಮಾಡಿಕೊಂಡು ಸಾಗುತ್ತಿದ್ದಾರೆ. ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ಅವರು ಅವಸರ ತೋರುತ್ತಿಲ್ಲ. 2003ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 20 ವರ್ಷ ಕಳೆದಿದೆ. ಈ 20 ವರ್ಷಗಳಲ್ಲಿ ತಮ್ಮ ಜೊತೆ ಅತಿ ಹೆಚ್ಚು ಸಮಯ ಕಳೆದ ವ್ಯಕ್ತಿ ಯಾರು ಎಂಬುದನ್ನು ಕತ್ರಿನಾ ಕೈಫ್​ (Katrina Kaif) ಅವರು ಬಹಿರಂಗಪಡಿಸಿದ್ದಾರೆ. ಆ ಸ್ಪೆಷಲ್​ ವ್ಯಕ್ತಿಯ ಜೊತೆಗಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅಂದಹಾಗೆ ಅವರ ಹೆಸರು ಅಶೋಕ್​ ಶರ್ಮಾ. ಅವರ ಬಗ್ಗೆ ಇಲ್ಲಿದೆ ಮಾಹಿತಿ..

ಸೆಲೆಬ್ರಿಟಿಗಳಿಗೆ ಆಪ್ತ ಸಹಾಯಕರು ಇರುತ್ತಾರೆ. ಅಗ್ರಿಮೆಂಟ್​ ಪರಿಶೀಲಿಸುವುದು, ಸಂಭಾವನೆಯ ಲೆಕ್ಕ ನೋಡಿಕೊಳ್ಳುವುದು, ಡೇಟ್ಸ್​ ಹೊಂದಾಣಿಕೆ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಆಪ್ತ ಸಹಾಯಕರು ಮಾಡುತ್ತಾರೆ. ಅದರು ತುಂಬ ನಂಬಿಕಸ್ಥ ವ್ಯಕ್ತಿ ಆಗಿರಬೇಕು. ಯಾಕೆಂದರೆ ಸೆಲೆಬ್ರಿಟಿಗಳ ಬಹುತೇಕ ಎಲ್ಲ ಖಾಸಗಿ ವಿಷಯಗಳು ಅವರಿಗೆ ತಿಳಿದಿರುತ್ತವೆ. ಅಂಥ ಮಾಹಿತಿ ಹೊರಗಡೆ ಲೀಕ್​ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರಿಗೆ ಇರಬೇಕಾಗುತ್ತದೆ. ಕತ್ರಿನಾ ಕೈಫ್​ ಅವರ ವೃತ್ತಿಬದುಕಿನಲ್ಲಿ ಕಳೆದ 20 ವರ್ಷಗಳಿಂದ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವುದು ಇದೇ ಅಶೋಕ್​ ಶರ್ಮಾ.

ಇದನ್ನೂ ಓದಿ: ಫ್ಯಾನ್ಸ್​ ಆಸೆಗೆ ತಣ್ಣೀರು ಎರೆಚಿದ ಪ್ರಿಯಾಂಕಾ ಚೋಪ್ರಾ; ಕತ್ರಿನಾ ಕೈಫ್​ಗೂ ಇದರಿಂದ ತೊಂದರೆ

ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸುವುದು ಎಂದರೆ ಸಣ್ಣ ಮಾತಲ್ಲ. ಆ ಸುದೀರ್ಘ ಪಯಣದಲ್ಲಿ ಕತ್ರಿನಾ ಕೈಫ್ ಅವರಿಗೆ ಅಶೋಕ್​ ಶರ್ಮಾ ಜೊತೆಯಾಗಿದ್ದಾರೆ. ಕತ್ರಿನಾ ಕೈಫ್​ ಅವರ ಎಲ್ಲ ಏಳು-ಬೀಳು, ನೋವು-ನಲಿವು, ಸೋಲು-ಗೆಲುವುಗಳಿಗೆ ಅಶೋಕ್​ ಶರ್ಮಾ ಸಾಕ್ಷಿ ಆಗಿದ್ದಾರೆ. ಅವರ ಬಗ್ಗೆ ಕತ್ರಿನಾ ಕೈಫ್​ಗೆ ವಿಶೇಷವಾದ ಗೌರವ ಇದೆ. ಎರಡು ದಶಕಗಳ ಕಾಲ ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ ಕತ್ರಿನಾ ಕೈಫ್​.

ಇದನ್ನೂ ಓದಿ: Vicky Kaushal: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ವಿಚ್ಛೇದನದ ಬಗ್ಗೆ ನೇರ ಪ್ರಶ್ನೆ; ಎಲ್ಲರ ಎದುರು ನಟ ನೀಡಿದ ಉತ್ತರ ಏನು?

ಇನ್ನೂ 20 ವರ್ಷಗಳ ಕಾಲ ಅಶೋಕ್​ ಶರ್ಮಾ ಅವರೇ ತಮ್ಮ ಆಪ್ತ ಸಹಾಯಕರಾಗಿ ಇರಲಿ ಎಂದು ಕತ್ರಿನಾ ಕೈಫ್​ ಬಯಸಿದ್ದಾರೆ. ಅವರ ಬಗ್ಗೆ ಇಷ್ಟು ಪ್ರೀತಿಯಿಂದ ಪೋಸ್ಟ್​ ಮಾಡಿದ್ದಕ್ಕೆ ನೆಟ್ಟಿಗರು ಶಹಭಾಷ್​ ಎಂದಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಸಹಾಯಕರನ್ನು ಜಗತ್ತಿಗೆ ಪರಿಚಯಿಸುವುದಿಲ್ಲ. ಆದರೆ ಕತ್ರಿನಾ ಅವರು ಈ ವಿಚಾರದಲ್ಲಿ ಭಿನ್ನ. ಚಿತ್ರರಂದಲ್ಲಿ 2 ದಶಕ ಪೂರೈಸಿದ್ದಕ್ಕೆ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.