ಸೆಲೆಬ್ರಿಟಿಗಳು ಮದುವೆ ಆದ ಬಳಿಕ ಅವರ ಬಗ್ಗೆ ಒಂದಷ್ಟು ಗಾಸಿಪ್ ಹಬ್ಬುತ್ತದೆ. ಮದುವೆ ಆಗಿ ಕೆಲವು ವರ್ಷಗಳ ಕಾಲ ಅವರು ಪ್ರೆಗ್ನೆಂಟ್ ವಿಚಾರ ರಿವೀಲ್ ಮಾಡಿಲ್ಲ ಎಂದಿಟ್ಟುಕೊಳ್ಳಿ, ಆ ಬಗ್ಗೆ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಈಗ ಕತ್ರಿನಾ ಕೈಫ್ (Katrina Kaif) ಅವರಿಗೂ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಅವರು ಪ್ರೆಗ್ನೆಂಟ್ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ಬಗ್ಗೆ ಅವರಾಗಲೀ, ಅವರ ತಂಡದವರಾಗಲೀ ಸ್ಪಷ್ಟನೆ ನೀಡಿಲ್ಲ.
ಕತ್ರಿನಾ ಹಾಗೂ ವಿಕ್ಕಿ ಸದ್ಯ ಲಂಡನ್ನಲ್ಲಿ ಇದ್ದಾರೆ. ಅವರು ಲಂಡನ್ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲಿ ಹೆಚ್ಚಿನ ಮಂದಿಗೆ ಅವರ ಪರಿಚಯ ಇಲ್ಲದ ಕಾರಣ ಹಾಯಾಗಿ ಸುತ್ತಾಟ ನಡೆಸಿದ್ದಾರೆ. ಆದಾಗ್ಯೂ ಕೆಲವರು ಕತ್ರಿನಾ ಹಾಗೂ ವಿಕ್ಕಿ ಅವರು ಸುತ್ತಾಡುತ್ತಿರುವ ವಿಡಿಯೋನ ಮಾಡಿದ್ದಾರೆ.
The humble Bollywood power couple #KatrinaKaif & #VickyKaushal taking a stroll in Baker Street, London. Vicky is a gentleman clearly, as he holds his hand protectively by her side. This was post bumping into them at the bookstore yesterday. pic.twitter.com/7OUXCVaL9E
— HermanGomes_journo (@Herman_Gomes) May 20, 2024
ಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದಾರೆ. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿದೆ. ಇದರಿಂದ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಕತ್ರಿನಾ ಕೈಫ್ ಪ್ರೆಗ್ನೆಂಟ್’ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಘೋಣೆ ಆಗಿಲ್ಲ.
ಇದನ್ನೂ ಓದಿ: ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮಧ್ಯೆ ಯಾರು ಹೆಚ್ಚು ಶ್ರೀಮಂತ?
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮಗು ಪಡೆಯಲು ಸಿದ್ಧತೆ ನಡೆಸಿರಬಹುದು ಎಂಬ ಅನುಮಾನ ಮೂಡಲು ಮತ್ತೊಂದು ವಿಶೇಷ ಕಾರಣ ಇದೆ. ಕತ್ರಿನಾ ಕೈಫ್ ಅವರು ‘ಮೇರಿ ಕ್ರಿಸ್ಮಸ್’ ಬಳಿಕ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಇದು ಕೂಡ ಅನುಮಾನ ಹುಟ್ಟುಹಾಕಿದೆ. ಕತ್ರಿನಾ ಕಡೆಯಿಂದ ಗುಡ್ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Tue, 21 May 24