‘ಹನುಮ್ಯಾನ್’ ನಿರ್ದೇಶಕನ ‘ರಾಕ್ಷಸ್’ ಸಿನಿಮಾದಿಂದ ಹೊರಬಂದ ರಣ್ವೀರ್ ಸಿಂಗ್

ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಹನುಮ್ಯಾನ್’ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶಸಲಿದ್ದ ‘ರಾಕ್ಷಸ್’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಟಿಸಬೇಕಿತ್ತು. ಆದರೆ ಪ್ರಶಾಂತ್ ಹಾಗೂ ರಣ್ವೀರ್ ನಡುವೆ ಭಿನ್ನಾಭಿಪ್ರಾಯ ಬಂದ ಕಾರಣ ರಣ್ವೀರ್ ‘ರಾಕ್ಷಸ್’ ಸಿನಿಮಾದಿಂದ ಹೊರನಡೆದಿದ್ದಾರೆ.

‘ಹನುಮ್ಯಾನ್’ ನಿರ್ದೇಶಕನ ‘ರಾಕ್ಷಸ್’ ಸಿನಿಮಾದಿಂದ ಹೊರಬಂದ ರಣ್ವೀರ್ ಸಿಂಗ್
ಪ್ರಶಾಂತ್-ರಣ್ವೀರ್
Follow us
ಮಂಜುನಾಥ ಸಿ.
|

Updated on: May 21, 2024 | 6:07 PM

ತೆಲುಗಿನ ‘ಹನುಮ್ಯಾನ್’ (Hanuman) ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ದೊಡ್ಡ ಹಿಟ್ ಎನಿಸಿಕೊಂಡಿತು. ಸಂಕ್ರಾಂತಿಗೆ ಬಿಡುಗಡೆ ಆದ ಈ ಸಿನಿಮಾ, ಮಹೇಶ್ ಬಾಬು, ವೆಂಕಟೇಶ್ ಅಂಥಹಾ ಸ್ಟಾರ್ ನಟರ ಸಿನಿಮಾಗಳೊಟ್ಟಿಗೆ ಬಡಿದಾಡಿ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತು. ನಿರ್ದೇಶಕ ಪ್ರಶಾಂತ್ ವರ್ಮಾಗೆ ಇದು ಮೊದಲ ಸಿನಿಮಾ ಆಗಿತ್ತು. ಮೊದಲ ಸಿನಿಮಾ ಹಿಟ್ ಆದ ಬೆನ್ನಲ್ಲೆ ಬಾಲಿವುಡ್​ಗೆ ಹಾರಿದ್ದ ಪ್ರಶಾಂತ್ ವರ್ಮಾ, ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಜೊತೆಗೆ ‘ರಾಕ್ಷಸ್’ ಸಿನಿಮಾ ಘೋಷಣೆ ಮಾಡಿದ್ದರು. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳು ಸಹ ಆರಂಭವಾಗಿದ್ದವು, ಅಷ್ಟರಲ್ಲಾಗಲೆ ರಣ್ವೀರ್ ಸಿಂಗ್ ‘ರಾಕ್ಷಸ್’ ಸಿನಿಮಾದಿಂದ ಹೊರನಡೆದಿದ್ದಾರೆ.

ಪ್ರಶಾಂತ್ ವರ್ಮಾ ಹಾಗೂ ರಣ್ವೀರ್ ಸಿಂಗ್ ನಡುವೆ ಕತೆ ಹಾಗೂ ಮೇಕಿಂಗ್ ವಿಷಯವಾಗಿ ಭಿನ್ನಾಭಿಪ್ರಾಯಗಳು ಮೂಡಿದ ಕಾರಣದಿಂದ ರಣ್ವೀರ್ ಸಿಂಗ್ ಈ ಸಿನಿಮಾದಿಂದ ಹೊರಬಂದಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಣ್ವೀರ್ ಸಿಂಗ್ ಹೈದರಾಬಾದ್​ಗೆ ಹೋಗಿ ಸಿನಿಮಾದ ಫೋಟೊಶೂಟ್​ನಲ್ಲಿ ಸಹ ಭಾಗಿಯಾಗಿದ್ದರು. ಆದರೆ ಅದಾದ ಬಳಿಕ ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ರಣ್ವೀರ್ ಸಿಂಗ್ ಸಿನಿಮಾದಿಂದ ಹೊರಬಂದಿದ್ದಾರೆ. ಸಿನಿಮಾದ ನಿರ್ಮಾಪಕರಿಗೆ ಮತ್ತೊಮ್ಮೆ ಸಿನಿಮಾ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ತಮ್ಮ ಬಗ್ಗೆ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಿಚ್ಚಿಟ್ಟ ಐದು ವಿಷಯಗಳು

ರಣ್ವೀರ್ ಸಿಂಗ್ ನಟಿಸಬೇಕಿದ್ದ ‘ರಾಕ್ಷಸ್’ ಸಿನಿಮಾ, ‘ಹನುಮ್ಯಾನ್’ ಸಿನಿಮಾದ ಸ್ಪಿನ್ ಆಫ್ ಆಗಿತ್ತು. ಸಿನಿಮಾದ ಕತೆಯನ್ನು ಪ್ರಶಾಂತ್ ವರ್ಮಾ ತಯಾರಿಸಿಕೊಂಡಿದ್ದರು. ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಾಣ ಮಾಡುವುದು ಸಹ ಅಂತಿಮವಾಗಿತ್ತು. ಆದರೆ ಎಲ್ಲವೂ ನಿರ್ಧಾರವಾದ ಬಳಿಕ ರಣ್ವೀರ್-ಪ್ರಶಾಂತ್ ವರ್ಮಾ ಬೇರೆ-ಬೇರೆಯಾಗಿದ್ದಾರೆ. ಈಗ ಪ್ರಶಾಂತ್ ವರ್ಮಾ, ತಮ್ಮ ಸಿನಿಮಾಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದಾರೆ.

ರಣ್ವೀರ್ ಸಿಂಗ್ ಪ್ರಸ್ತುತ ‘ಸಿಂಘಂ ಅಗೇನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕಿಯಾರಾ, ದೀಪಿಕಾ ಪಡುಕೋಣೆ ಸಹ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ರಣ್ವೀರ್ ಸಿಂಗ್, ತಮಿಳಿನ ಶಂಕರ್ ನಿರ್ದೇಶನದ ‘ಅನ್ನಿಯನ್’ ಸಿನಿಮಾ ರೀಮೇಕ್​ನಲ್ಲಿ ನಟಿಸಲಿದ್ದಾರೆ. ಶಂಕರ್ ಪ್ರಸ್ತುತ ‘ಗೇಮ್ ಚೇಂಜರ್’ ಹಾಗೂ ‘ಇಂಡಿಯನ್ 2’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ ‘ಅನ್ನಿಯನ್’ ಸಿನಿಮಾಕ್ಕೆ ತೆಲುಗಿನ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ. ‘ಹನುಮ್ಯಾನ್’ ಚಿತ್ರತಂಡ ಹಾಗೂ ದಿಲ್ ರಾಜು ನಡುವೆ ಭಿನ್ನಾಭಿಪ್ರಾಯವುಂಟಾಗಿತ್ತು. ಆಗ ಪ್ರಶಾಂತ್ ವರ್ಮಾ ವೇದಿಕೆಯೊಂದರಲ್ಲಿ ಪರೋಕ್ಷವಾಗಿ ದಿಲ್ ರಾಜು ವಿರುದ್ಧ ಮಾತನಾಡಿದ್ದರು. ಈಗ ಅದೇ ಕಾರಣಕ್ಕೆ ರಣ್ವೀರ್ ಸಿಂಗ್, ಪ್ರಶಾಂತ್ ವರ್ಮಾ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ