ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮಧ್ಯೆ ಯಾರು ಹೆಚ್ಚು ಶ್ರೀಮಂತ?
ವಿಕ್ಕಿ ಕೌಶಲ್ ಅವರ ಆಸ್ತಿ 41 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕತ್ರಿನಾ ಕೈಫ್ ಅವರ ನೆಟ್ವರ್ತ್ 224 ಕೋಟಿ ರೂಪಾಯಿ. ವಿಕ್ಕಿಗೆ ಹೋಲಿಕೆ ಮಾಡಿದರೆ ಕತ್ರಿನಾ ಖ್ಯಾತಿ ಬಾಲಿವುಡ್ನಲ್ಲಿ ಹೆಚ್ಚಿದೆ. ಮೊದಲಿನಿಂದಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರ ಆಸ್ತಿ ಸೇರಿದರೆ 265 ಕೋಟಿ ರೂಪಾಯಿ ಆಗಲಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ಗೆ (Katrina Kaif) ಕಳೆದ ವರ್ಷ ವಿಶೇಷ ಎನಿಸಿಕೊಂಡಿದೆ. ‘ಸ್ಯಾಮ್ ಬಹದ್ದೂರ್’ ಹಾಗೂ ‘ಡಂಕಿ’ ಸಿನಿಮಾದ ನಟನೆಗೆ ವಿಕ್ಕಿ ಅವರು ಮೆಚ್ಚುಗೆ ಪಡೆದರು. ಕತ್ರಿನಾ ಕೈಫ್ ಅವರು ‘ಟೈಗರ್ 3’ ಹಾಗೂ ಇತ್ತೀಚೆಗೆ ರಿಲೀಸ್ ಆದ ‘ಮೇರಿ ಕ್ರಿಸ್ಮಸ್’ ಮೂಲಕ ಭೇಷ್ ಎನಿಸಿಕೊಂಡರು. ಬಾಲಿವುಡ್ನ ಸ್ಟಾರ್ ದಂಪತಿ ಎನ್ನುವ ಖ್ಯಾತಿ ಇವರಿಗೆ ಸಿಕ್ಕಿದೆ. ಇವರ ಆಸ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವಿಕ್ಕಿ ಕೌಶಲ್ಗೆ ಇಂದು (ಮೇ 16) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
ವಿಕ್ಕಿ ಕೌಶಲ್ ಅವರ ಆಸ್ತಿ 41 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕತ್ರಿನಾ ಕೈಫ್ ಅವರ ನೆಟ್ವರ್ತ್ 224 ಕೋಟಿ ರೂಪಾಯಿ. ವಿಕ್ಕಿಗೆ ಹೋಲಿಕೆ ಮಾಡಿದರೆ ಕತ್ರಿನಾ ಖ್ಯಾತಿ ಬಾಲಿವುಡ್ನಲ್ಲಿ ಹೆಚ್ಚಿದೆ. ಮೊದಲಿನಿಂದಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರ ಆಸ್ತಿ ಸೇರಿದರೆ 265 ಕೋಟಿ ರೂಪಾಯಿ ಆಗಲಿದೆ. ಶ್ರೀಮಂತಿಕೆ ಇವರ ಪ್ರೀತಿ ಅಡ್ಡ ಬಂದಿಲ್ಲ. ಆರ್ಥಿಕತೆಗೆ ಕತ್ರಿನಾ ಅಷ್ಟು ಪ್ರಾಮುಖ್ಯತೆ ಕೊಟ್ಟಿಲ್ಲ.
ವಿಕ್ಕಿ ಕೌಶಲ್ ಅವರು ಪ್ರತಿ ಚಿತ್ರಕ್ಕೆ 10-15 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ‘ಡಂಕಿ’ ಚಿತ್ರಕ್ಕಾಗಿ 12 ಕೋಟಿ ರೂಪಾಯಿ ಹಾಗೂ ‘ಸ್ಯಾಮ್ ಬಹದ್ದೂರ್’ ಚಿತ್ರಕ್ಕಾಗಿ 10 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ವಿಕ್ಕಿಗಿಂತ ಕತ್ರಿನಾ ಅವರು ಹೆಚ್ಚಿನ ಸಂಭಾವನೆ ಪಡೆದುಕೊಳ್ಳುತ್ತಾರೆ. ‘ಟೈಗರ್ 3’ ಚಿತ್ರದ ನಟನೆಗೆ ಅವರು 15 ಕೋಟಿ ರೂಪಾಯಿ ಪಡೆದುಕೊಂಡರು. ಕತ್ರಿನಾ ಕೈಫ್ ಅವರು ತಮ್ಮದೇ ಬ್ರ್ಯಾಂಡ್ ಹೊಂದಿದ್ದಾರೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ 2021ರ ಡಿಸೆಂಬರ್ 9ರಂದು ಮದುವೆ ಆದರು. ರಾಜಸ್ಥಾನದಲ್ಲಿ ಇವರ ಮದುವೆ ನಡೆಯಿತು. ಮದುವೆ ಬಳಿಕ ಮುಂಬೈನ ಜುಹು ಅಪಾರ್ಟ್ಮೆಂಟ್ಗೆ ತೆರಳಿದರು. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ನೆರೆ ಮನೆಯವರಾದರು. ಈ ಮನೆಗೆ ದಂಪತಿ 8-9 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಾರೆ. 1.75 ಕೋಟಿ ರೂಪಾಯಿ ಡಿಪೊಸಿಟ್ ಇಟ್ಟಿದ್ದಾರೆ.
ಮುಂಬೈನಲ್ಲಿ ಮಲ್ಟಿಕ್ರೋರ್ ಪ್ರಾಪರ್ಟಿ ಹೊಂದಿದ್ದಾರೆ ಕತ್ರಿನಾ ಕೈಫ್. ಬಾಂದ್ರಾದಲ್ಲಿ 3ಬಿಎಚ್ಕೆ ಮನೆ ಹೊಂದಿದ್ದು ಇದರ ಬೆಲೆ 8.20 ಕೋಟಿ ರೂಪಾಯಿ ಇದೆ. ಲೋಖಂಡ್ವಾಲಾದಲ್ಲಿ 17 ಕೋಟಿ ರೂಪಾಯಿ, ಲಂಡನ್ನಲ್ಲಿ 7 ಕೋಟಿ ರೂಪಾಯಿ ಬಂಗಲೆ ಇದೆ. ಈ ದಂಪತಿ ಬಳಿ ದುಬಾರಿ ಕಾರುಗಳು ಇವೆ. ರೇಂಜ್ ರೋವರ್ ಆಟೋಬಯೋಗ್ರಫಿ 3.28 ಕೋಟಿ ರೂಪಾಯಿ, ರೇಂಜ್ ರೋವರ್ ವೋಗ್ 2.32 ಕೋಟಿ ರೂಪಾಯಿ ಬೆಲೆಯ ಕಾರುಗಲು ಇವೆ. ಮರ್ಸೀಡಿಸ್ ಬೆಂಜ್ ಜಿಎಲ್ಇ 1.15 ಕೋಟಿ ರೂಪಾಯಿ, ಆಡಿ ಕ್ಯೂ7 89 ಲಕ್ಷ ರೂಪಾಯಿ, ಬಿಎಂಡಬ್ಲ್ಯೂ 5ಜಿಟಿ 88.27 ಲಕ್ಷ ರೂಪಾಯಿ ಇದೆ.
ಇದನ್ನೂ ಓದಿ: ‘ಸ್ಯಾಮ್ ಬಹದ್ದೂರ್’, ‘ಡಂಕಿ’ ಚಿತ್ರಗಳಿಂದ ಹೆಚ್ಚಾಯಿತು ವಿಕ್ಕಿ ಕೌಶಲ್ ಜನಪ್ರಿಯತೆ
2024ರಲ್ಲಿ ರಿಲೀಸ್ ಆದ ‘ಮೇರಿ ಕ್ರಿಸ್ಮಸ್’ ಚಿತ್ರವೇ ಕೊನೆ. ಇದಾದ ಬಳಿಕ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ಪ್ರೆಗ್ನೆಂಟ್ ಇರಬಹುದೇ ಎಂದು ಕೆಲವರು ಊಹಿಸಿದ್ದಾರೆ. ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.