AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾಕ್ಕೆ ಕೇವಲ 101 ರೂಪಾಯಿ ಸಂಭಾವನೆ ಪಡೆದ ಜನಪ್ರಿಯ ನಟ, ಕಾರಣ?

ಬಾಲಿವುಡ್, ಮರಾಠಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಜನಪ್ರಿಯವಾಗಿರುವ ನಟ ಶರದ್ ಕೇಲ್ಕರ್ ಇತ್ತೀಚೆಗಷ್ಟೆ ‘ಶ್ರೀಕಾಂತ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾನಲ್ಲಿ ನಟಿಸಲು ಅವರು ಪಡೆದಿರುವುದು ಕೇವಲ 101 ರೂಪಾಯಿ ಮಾತ್ರ.

ಸಿನಿಮಾಕ್ಕೆ ಕೇವಲ 101 ರೂಪಾಯಿ ಸಂಭಾವನೆ ಪಡೆದ ಜನಪ್ರಿಯ ನಟ, ಕಾರಣ?
ಮಂಜುನಾಥ ಸಿ.
|

Updated on: May 16, 2024 | 11:46 AM

Share

ಸಿನಿಮಾ ನಟರು, ಅದರಲ್ಲೂ ಜನಪ್ರಿಯ ನಟರು ಭಾರಿ ದೊಡ್ಡ ಮೊತ್ತದ ಸಂಭಾವನೆಯನ್ನು (Remuneration) ಸಿನಿಮಾಗಳಿಗಾಗಿ ಪಡೆಯುತ್ತಿದ್ದಾರೆ. ಸ್ಟಾರ್ ನಟರ ಸಂಭಾವನೆಯಂತೂ ನೂರಾರು ಕೋಟಿಗಳನ್ನು ದಾಟಿಬಿಟ್ಟಿದೆ. ಸ್ಟಾರ್​ಗಳಲ್ಲದ ಆದರೆ ಜನಪ್ರಿಯವಾಗಿರುವ ನಟರು ಸುಮಾರು 10-20 ಕೋಟಿ ಸಂಭಾವನೆಗಳನ್ನು ಪಡೆಯುತ್ತಿದ್ದಾರೆ. ಅಂಥಹಾ ನಟರಲ್ಲಿ ಶರತ್ ಕೇಲ್ಕರ್ ಸಹ ಒಬ್ಬರು. ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರು ಶರತ್ ಕೇಲ್ಕರ್ ಬೇಡಿಕೆ ಇರುವ ನಟ. ಆದರೆ ಇತ್ತೀಚೆಗೆ ಬಿಡುಗಡೆ ಆದ ಸಿನಿಮಾ ಒಂದರಲ್ಲಿ ನಟಿಸಲು ಶರತ್ ಪಡೆದಿರುವುದು ಕೇವಲ ನೂರಾ ಒಂದು ರೂಪಾಯಿಗಳನ್ನು ಮಾತ್ರ.

ಶರತ್ ಕೇಲ್ಕರ್, ಹಿಂದಿ, ಮರಾಠಿ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಬೇಡಿಕೆ ಇರುವ ನಟ. 2004 ರಲ್ಲಿ ‘ಹಲ್ ಚಲ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಶರತ್ ಕೇಲ್ಕರ್ ಈ ವರೆಗೆ ಹೃತಿಕ್ ರೋಷನ್, ರಣ್ವೀರ್ ಸಿಂಗ್, ಪವನ್ ಕಲ್ಯಾಣ್ ಇನ್ನೂ ಹಲವು ಸ್ಟಾರ್ ನಟರೊಟ್ಟಿಗೆ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಪ್ರಧಾನ ಪೋಷಕ ಪಾತ್ರದಲ್ಲಿ, ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ತಾನಾಜಿ, ಎಲ್​ಎ ಕಾನ್ಫಿಡೆನ್ಷಿಯಲ್, ರಾಮ್ ಲೀಲಾ, ಲಕ್ಷ್ಮಿ, ಅಲಾಯನ್ ಇನ್ನೂ ಹಲವು ಸಿನಿಮಾಗಳಲ್ಲಿ ಶರತ್ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಶ್ರೀಕಾಂತ್ ಬೊಲ್ಲ ಅವರ ಆತ್ಮಕತೆ ಆಧರಿಸಿದ ‘ಶ್ರೀಕಾಂತ್’ ಸಿನಿಮಾನಲ್ಲಿಯೂ ಸಹ ಶರತ್ ಕೇಲ್ಕರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸಲು ಅವರು ಪಡೆದಿರುವುದು ಕೇವಲ 101 ರೂಪಾಯಿಗಳು ಮಾತ್ರ.

ಇದನ್ನೂ ಓದಿ:Madhuri Dixit: ಸಲ್ಮಾನ್ ಖಾನ್​ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಮಾಧುರಿ ದೀಕ್ಷಿತ್

‘ಶ್ರೀಕಾಂತ್’ ಸಿನಿಮಾವನ್ನು ತುಷಾರ್ ಹೀರಾನಂದಾನಿ ಅವರು ನಿರ್ದೇಶನ ಮಾಡಿದ್ದು, ಸಿನಿಮಾದ ಪ್ರಚಾರ ಕುರಿತು ಆಯೋಜನೆ ಮಾಡಲಾಗಿದ್ದ ಸಂದರ್ಶನವೊಂದರಲ್ಲಿ ತುಷಾರ್, ಶರತ್ ಕೇಲ್ಕರ್ ಕೇವಲ 101 ರೂಪಾಯಿ ಸಂಭಾವನೆ ಪಡೆದು ಸಿನಿಮಾದಲ್ಲಿ ನಟಿಸಿರುವ ವಿಷಯ ಹೇಳಿಕೊಂಡಿದ್ದಾರೆ. ‘ಶ್ರೀಕಾಂತ್’ ಸಿನಿಮಾನಲ್ಲಿ ಶರತ್ ಕೇಲ್ಕರ್, ಹೂಡಿಕೆದಾರ ರವಿ ಮಂತಾನ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್​ನವರಾದ ರವಿ ಮಂತಾನ, ಅಂಧ ಸಾಧಕ ಶ್ರೀಕಾಂತ್ ಬೊಲ್ಲ ಅವರ ಸಂಸ್ಥೆಗೆ ಹೂಡಿಕೆ ಮಾಡಿ ಸಹಾಯ ಮಾಡಿದ್ದರು. ಆ ಪಾತ್ರದಲ್ಲಿ ಶರತ್ ಕೇಲ್ಕರ್ ನಟಿಸಿದ್ದಾರೆ.

‘ಶ್ರೀಕಾಂತ್’ ಸಿನಿಮಾ ಶ್ರೀಕಾಂತ್ ಬೊಲ್ಲ ಅವರ ಜೀವನ ಕತೆ ಆಧರಿಸಿದ್ದಾಗಿದೆ. ಆಂಧ್ರದಲ್ಲಿ ಜನಿಸಿದ್ದ ಶ್ರೀಕಾಂತ್ ಅಂಧರಾಗಿದ್ದರು. ಆದರೆ ಹಲವು ಸವಾಲುಗಳನ್ನು ಎದುರಿಸಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಶ್ರೀಕಾಂತ್, ಯಶಸ್ವಿ ಉದ್ಯಮಿಯಾದರು. ಬೋಲ್ಲಂತ್ ಇಂಡಸ್ಟ್ರೀಸ್​ನ ಸಂಸ್ಥಾಪಕ ಶ್ರೀಕಾಂತ್ ಬೊಲ್ಲ. ಇವರ ಕತೆಯನ್ನು ತುಷಾರ್ ಹೀರಾನಂದಾನಿ ತೆರೆಗೆ ತಂದಿದ್ದಾರೆ. ಶ್ರೀಕಾಂತ್ ಎದುರು ನಾಯಕಿಯಾಗಿ ಆಲಿಯಾ ಎಫ್ ನಟಿಸಿದ್ದಾರೆ. ಶ್ರೀಕಾಂತ್​ಗೆ ಬೆಂಬಲವಾಗಿ ನಿಲ್ಲುವ ಶಿಕ್ಷಕಿಯಾಗಿ ಜ್ಯೋತಿಕಾ ನಟಿಸಿದ್ದಾರೆ. ಸಿನಿಮಾವನ್ನು ಭೂಷಣ್ ಕುಮಾರ್ ಹಾಗೂ ಇನ್ನಿಬ್ಬರು ಸೇರಿ ನಿರ್ಮಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ