ಬಾಲಿವುಡ್​ಗೆ ಹೋಗಿ ಏಕಾಏಕಿ ಗ್ಲಾಮರ್​ ಅವತಾರ ತಾಳಿದ ನಟಿ ಕೀರ್ತಿ ಸುರೇಶ್​

ಇತ್ತೀಚೆಗೆ ‘ಬೇಬಿ ಜಾನ್​’ ಸಿನಿಮಾದ ಚಿತ್ರೀಕರಣದ ವೇಳೆ ನಟ ವರುಣ್​ ಧವನ್​ ಅವರ ಬರ್ತ್​ಡೇ ಸೆಲೆಬ್ರೇಟ್​ ಮಾಡಲಾಯಿತು. ಅಂದು ಸಾಂಗ್​ ಚಿತ್ರೀಕರಣ ನಡೆಯುತ್ತಿತ್ತು. ಕೀರ್ತಿ ಸುರೇಶ್​ ಅವರು ಶೂಟಿಂಗ್​ ನಡುವೆಯೇ ವರುಣ್​ ಧವನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿದ್ದ ಹಾಡಿನ ಕಾಸ್ಟ್ಯೂಮ್​ ಗಮನ ಸೆಳೆದಿದೆ. ಗ್ಲಾಮರಸ್​ ಗೆಟಪ್​​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಬಾಲಿವುಡ್​ಗೆ ಹೋಗಿ ಏಕಾಏಕಿ ಗ್ಲಾಮರ್​ ಅವತಾರ ತಾಳಿದ ನಟಿ ಕೀರ್ತಿ ಸುರೇಶ್​
ವರುಣ್​ ಧವನ್​, ಕೀರ್ತಿ ಸುರೇಶ್​

Updated on: Apr 25, 2024 | 6:05 PM

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ (Keerthy Suresh) ಅವರಿಗೆ ದೊಡ್ಡ ಫ್ಯಾನ್ಸ್ ಫಾಲೋಯಿಂಗ್​ ಇದೆ. ಹೆಚ್ಚಾಗಿ ಅವರು ಗ್ಲಾಮರ್​ ಪಾತ್ರಕ್ಕೆ ಕಟ್ಟುಬಿದ್ದವರಲ್ಲ. ಅಭಿನಯದ ಮೂಲಕವೇ ಜನರನ್ನು ಸೆಳೆದುಕೊಂಡ ನಟಿ ಅವರು. ಆದರೆ ಈಗ ಅವರು ಬಾಲಿವುಡ್​ಗೆ (Bollywood) ಕಾಲಿಟ್ಟಿದ್ದು, ಅಲ್ಲಿ ಏಕಾಏಕಿ ಗ್ಲಾಮರ್​ ಅವತಾರ ತಾಳುವ ಸೂಚನೆ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಕೀರ್ತಿ ಸುರೇಶ್​ ಅವರು ವರುಣ್ ಧವನ್​ (Varun Dhawan) ಜೊತೆ ‘ಬೇಬಿ ಜಾನ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್​ನಿಂದ ಕೆಲವು ಫೋಟೋಗಳು ವೈರಲ್​ ಆಗಿವೆ.

‘ಬೇಬಿ ಜಾನ್​’ ಸೆಟ್​ನಲ್ಲಿ ಇತ್ತೀಚೆಗೆ ನಟ ವರುಣ್​ ಧವನ್​ ಅವರ ಬರ್ತ್​ಡೇ ಆಚರಿಸಲಾಯಿತು. ಅಂದು ಹಾಡಿನ ಶೂಟಿಂಗ್​ ನಡೆಯುತ್ತಿತ್ತು ಎನ್ನಲಾಗಿದೆ. ಅದರಲ್ಲಿ ಕೀರ್ತಿ ಸುರೇಶ್​, ವರುಣ್​ ಧವನ್​ ಭಾಗಿ ಆಗಿದ್ದರು. ಶೂಟಿಂಗ್​ ಬಿಡುವಿನಲ್ಲಿ ವರುಣ್​ ಧವನ್​ ಅವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್​ ಮಾಡಲಾಗಿದೆ. ಹಾಡಿನ ಕಾಸ್ಟ್ಯೂಮ್​ನಲ್ಲೇ ಕೀರ್ತಿ ಸುರೇಶ್​ ಅವರು ಬಂದು ವರುಣ್​ ಧವನ್​ಗೆ ವಿಶ್​ ಮಾಡಿದ್ದಾರೆ. ಆ ವೇಳೆ ಅವರ ಗ್ಲಾಮರಸ್​ ಗೆಟಪ್​​ ಗಮನ ಸೆಳೆದಿದೆ.

‘ಮಹಾನಟಿ’ ಸಿನಿಮಾದಲ್ಲಿ ಲೆಜೆಂಡರಿ ನಟಿ ಸಾವಿತ್ರಿಯ ಪಾತ್ರ ಮಾಡುವ ಮೂಲಕ ಕೀರ್ತಿ ಸುರೇಶ್​ ಅವರು ಅಪಾರ ಜನಮೆಚ್ಚುಗೆ ಗಳಿಸಿದರು. ಆ ಸಿನಿಮಾಗೆ ಅವರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡರು. ಆ ಬಳಿಕ ಅವರು ಮಹೇಶ್​ ಬಾಬು ಜೊತೆ ‘ಸರ್ಕಾರು ವಾರಿ ಪಾಟ’ ಸಿನಿಮಾದ ಹಾಡಿನಲ್ಲಿ ಸ್ವಲ್ಪ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದರು. ಈಗ ಬಾಲಿವುಡ್​ನಲ್ಲಿ ಅವರು ಸಂಪೂರ್ಣ ಗ್ಲಾಮರ್​ ಗೆಟಪ್​ನಲ್ಲಿ ಅಭಿಮಾನಿಗಳ ಎದುರು ಬರುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಗೆಳತಿ ಮದುವೆಗೆ ದುಬಾರಿ ಉಡುಗೊರೆ ಕೊಟ್ಟ ನಟಿ ಕೀರ್ತಿ ಸುರೇಶ್

‘ಬೇಬಿ ಜಾನ್’ ಇದು ತಮಿಳಿನ ‘ಥೇರಿ’ ಸಿನಿಮಾದ ಹಿಂದಿ ರಿಮೇಕ್​. ಮೂಲ ಸಿನಿಮಾದಲ್ಲಿ ದಳಪತಿ ವಿಜಯ್​ ಮಾಡಿದ್ದ ಪಾತ್ರವನ್ನು ಬಾಲಿವುಡ್​ನಲ್ಲಿ ವರುಣ್​ ಧವನ್​ ಮಾಡುತ್ತಿದ್ದಾರೆ. ‘ಥೇರಿ’ ಚಿತ್ರದಲ್ಲಿ ಸಮಂತಾ ರುತ್​ ಪ್ರಭು ನಾಯಕಿ ಆಗಿದ್ದರು. ಆ ಪಾತ್ರವನ್ನು ಹಿಂದಿಯಲ್ಲಿ ಕೀರ್ತಿ ಸುರೇಶ್​ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಅಟ್ಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us