AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಣ್ ಧವನ್ ಜೊತೆಗೆ ಸಿನಿಮಾ ಪ್ರಾರಂಭಿಸಿದ ಕೀರ್ತಿ ಸುರೇಶ್

Vijay Deverakonda: ವಿಜಯ್ ದೇವರಕೊಂಡರ 18ನೇ ಸಿನಿಮಾದಿಂದ ಶ್ರೀಲೀಲಾರನ್ನು ಕೈಬಿಡಲಾಗಿದ್ದು, ಆ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ವರುಣ್ ಧವನ್ ಜೊತೆಗೆ ಸಿನಿಮಾ ಪ್ರಾರಂಭಿಸಿದ ಕೀರ್ತಿ ಸುರೇಶ್
ಕೀರ್ತಿ ಸುರೇಶ್
ಮಂಜುನಾಥ ಸಿ.
|

Updated on:Feb 01, 2024 | 5:59 PM

Share

ನಟಿ ಕೀರ್ತಿ ಸುರೇಶ್ (Keerthy Suresh) ದಕ್ಷಿಣ ಭಾರತದ ಜನಪ್ರಿಯ ಮತ್ತು ಬೇಡಿಕೆಯ ನಟಿ. ಸಾಯಿ ಪಲ್ಲವಿ ಹಾಗೂ ಕೀರ್ತಿ ಸುರೇಶ್ ಇಬ್ಬರೂ ಸಹ ಗ್ಲಾಮರ್​ನಿಂದಲ್ಲದೆ ತಮ್ಮ ನಟನಾ ಪ್ರತಿಭೆಯಿಂದ ಸಹಜ ಸೌಂದರ್ಯದಿಂದ ಬೆಳೆದಿರುವವರು, ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡಿರುವ ನಟಿಯರು. ಇದೀಗ ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತ ಚಿತ್ರರಂದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಬಾಲಿವುಡ್ ಸಿನಿಮಾ ಅವಕಾಶ ಪಡೆದುಕೊಂಡಿರುವ ಕೀರ್ತಿ, ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ಕೀರ್ತಿ ಸುರೇಶ್, ಬಾಲಿವುಡ್​ನ ಜನಪ್ರಿಯ ಯುವ ನಟ ವರುಣ್ ಧವನ್ ಜೊತೆಗೆ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದು, ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಅದ್ಧೂರಿಯಾಗಿ ಈ ಸಿನಿಮಾದ ಮುಹೂರ್ತ ನಡೆದಿತ್ತು. ಕೀರ್ತಿ ಸುರೇಶ್ ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಸಿನಿಮಾದ ಚಿತ್ರೀಕರಣವನ್ನು ಸಹ ಅವರು ಪ್ರಾರಂಭ ಮಾಡಿದ್ದಾರೆ.

ವರುಣ್ ಧವನ್ ಇತ್ತೀಚೆಗಷ್ಟೆ ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ಜೊತೆಗೆ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ದಕ್ಷಿಣ ಭಾರತದ ಜನಪ್ರಿಯ ನಟಿಯೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Wed, 31 January 24