ಬಾಲಿವುಡ್ನ ಖ್ಯಾತ ನಟ ಜಾವೇದ್ ಖಾನ್ ಅಮ್ರೋಹಿ (Javed Khan Amrohi) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಫೆಬ್ರವರಿ 14) ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಂಬೈನಲ್ಲಿ ಕೊನೆಯುಸಿರು ಎಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಜಾವೇದ್ ಖಾನ್ ಅಮ್ರೋಹಿ ಅವರ ನಿಧನಕ್ಕೆ (Javed Khan Amrohi Death) ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ಆಪ್ತರು ಕಂಬನಿ ಮಿಡಿದಿದ್ದಾರೆ. ಚಿತ್ರರಂಗದಲ್ಲಿ ಅವರು ಅಪಾರ ಅನುಭವ ಹೊಂದಿದ್ದರು. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ‘ಲಗಾನ್’ (Lagaan Movie) ಸಿನಿಮಾದಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದರು. ಓಶಿವರದಲ್ಲಿನ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
ಜಾವೇದ್ ಖಾನ್ ಅಮ್ರೋಹಿ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದೊಂದು ವರ್ಷದಿಂದ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅದರ ಪರಿಣಾಮವಾಗಿ ಅವರು ಹಾಸಿಗೆ ಹಿಡಿದಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಜಾವೇದ್ ಖಾನ್ ಅಮ್ರೋಹಿ ಕೊನೆಯುಸಿರು ಎಳೆದಿದ್ದಾರೆ.
ಇದನ್ನೂ ಓದಿ: ನಟಿ ಸುಮನ್ ರಂಗನಾಥ್ ತಾಯಿ ಜ್ಯೋತಿ ಇನ್ನಿಲ್ಲ; ಬಿಪಿ, ಉಸಿರಾಟದ ತೊಂದರೆಯಿಂದ ನಿಧನ
‘ಹಮ್ ಹೈ ರಾಹೀ ಪ್ಯಾರ್ ಕೇ’, ‘ಅಂದಾಜ್ ಅಪ್ನಾ ಅಪ್ನಾ’, ‘ಇಷ್ಕ್’, ‘ಲಗಾನ್’, ‘ಚಕ್ದೇ ಇಂಡಿಯಾ’, ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಜಾವೇದ್ ಖಾನ್ ಅಮ್ರೋಹಿ ನಟಿಸಿದ್ದರು. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಆಲಿಯಾ ಭಟ್ ಅಭಿನಯದ ‘ಸಡಕ್ 2’ ಸಿನಿಮಾದಲ್ಲಿ. ಆ ಚಿತ್ರ 2020ರಲ್ಲಿ ಬಿಡುಗಡೆ ಆಯಿತು. ಸಿನಿಮಾ ಮಾತ್ರವಲ್ಲದೇ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲೂ ಜಾವೇದ್ ಖಾನ್ ಅಮ್ರೋಹಿ ನಟಿಸಿದ್ದರು. ಆ ಮೂಲಕವೂ ಅವರು ಅಭಿಮಾನಿಗಳಿಗೆ ಹತ್ತಿರವಾಗಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರ ರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
ಜಾವೇದ್ ಖಾನ್ ಅಮ್ರೋಹಿ ಅವರಿಗೆ 60 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ವೈಫಲ್ಯದಿಂದ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಆರೋಗ್ಯ ಕೈ ಕೊಟ್ಟ ಬಳಿಕ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಜಾವೇದ್ ಖಾನ್ ಅಮ್ರೋಹಿ ನಟಿಸಿದ್ದರು. ಮಾಡಿದ್ದೆಲ್ಲವೂ ಚಿಕ್ಕ ಪಾತ್ರಗಳೇ ಆದರೂ ಅವು ಮಹತ್ವಪೂರ್ಣವಾಗಿದ್ದವು.
Gutted to hear about #JavedKhanAmrohi Bhai’s demise. This seems to be a season of farewell. ??
Condolences to his family, friends, colleagues @iptamumbai ??#Nukkadd #Lagaan, and so on and so forth. pic.twitter.com/FpV17XMRO8
— Danish Husain । دانش حُسین । दानिश हुसैन (@DanHusain) February 14, 2023
‘ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಿಂದ ಜಾವೇದ್ ಖಾನ್ ಅಮ್ರೋಹಿ ಅವರು ಪದವಿ ಪಡೆದಿದ್ದರು. ಬಳಿಕ ಅವರು ರಂಗಭೂಮಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಅವರಿಗೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಅವಕಾಶಗಳು ಸಿಕ್ಕವು. ಜಾವೇದ್ ಖಾನ್ ಅಮ್ರೋಹಿ ನಿಧನಕ್ಕೆ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 pm, Tue, 14 February 23