AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suman Ranganathan: ನಟಿ ಸುಮನ್​ ರಂಗನಾಥ್​ ತಾಯಿ ಜ್ಯೋತಿ ಇನ್ನಿಲ್ಲ; ಬಿಪಿ, ಉಸಿರಾಟದ ತೊಂದರೆಯಿಂದ ನಿಧನ

Suman Ranganathan Mother Death: ಸುಮನ್​ ರಂಗನಾಥ್​ ಅವರ ತಾಯಿ ಜ್ಯೋತಿ ಅವರಿಗೆ ಕಳೆದೊಂದು ವರ್ಷದಿಂದ ಅನಾರೋಗ್ಯ ಕಾಡುತ್ತಿತ್ತು. ಬೆನ್ನು ನೋವಿನಿಂದ ಅವರು ಬಳಲುತ್ತಿದ್ದರು.

Suman Ranganathan: ನಟಿ ಸುಮನ್​ ರಂಗನಾಥ್​ ತಾಯಿ ಜ್ಯೋತಿ ಇನ್ನಿಲ್ಲ; ಬಿಪಿ, ಉಸಿರಾಟದ ತೊಂದರೆಯಿಂದ ನಿಧನ
ಜ್ಯೋತಿ, ಸುಮನ್ ರಂಗನಾಥ್
ಮದನ್​ ಕುಮಾರ್​
|

Updated on: Feb 09, 2023 | 7:35 PM

Share

ಬಹುಭಾಷಾ ನಟಿ ಸುಮನ್​ ರಂಗನಾಥ್​ (Suman Ranganathan) ಅವರ ಮನೆಯಲ್ಲಿ ಶೋಕ ಆವರಿಸಿದೆ. ಅವರ ತಾಯಿ ಜ್ಯೋತಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಂದು (ಫೆಬ್ರವರಿ 9) ಬೆಳಗ್ಗೆ 7.50ರ ಸುಮಾರಿಗೆ ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದುಬಂದಿದೆ. ರಕ್ತದೊತ್ತಡ (Blood Pressure) ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಅವರು ನಿಧನರಾಗಿದ್ದಾರೆ. ನಟಿ ಸುಮನ್​ ರಂಗನಾಥ್​ ಅವರ ಕುಟುಂಬದ (Suman Ranganathan Family) ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಜ್ಯೋತಿ ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.

ಕಳೆದೊಂದು ವರ್ಷದಿಂದ ಅನಾರೋಗ್ಯದಲ್ಲಿದ್ದ ಜ್ಯೋತಿ:

ಸುಮನ್​ ರಂಗನಾಥ್​ ಅವರ ತಾಯಿ ಜ್ಯೋತಿ ಅವರಿಗೆ ಕಳೆದೊಂದು ವರ್ಷದಿಂದ ಅನಾರೋಗ್ಯ ಕಾಡುತ್ತಿತ್ತು. ಬೆನ್ನು ನೋವಿನಿಂದ ಅವರು ಬಳಲುತ್ತಿದ್ದರು. ಇತ್ತೀಚೆಗೆ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಅದಕ್ಕಾಗಿ ಜನವರಿ 29ರಂದು ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Jamuna Death: ಕನ್ನಡ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ನಿಧನ

ಇದನ್ನೂ ಓದಿ
Image
Rahul Koli Death: ಆಸ್ಕರ್​ಗೆ ಭಾರತದಿಂದ ಆಯ್ಕೆ ಆದ ‘ಚೆಲ್ಲೋ ಶೋ’ ಚಿತ್ರದ ಬಾಲ ನಟ ಕ್ಯಾನ್ಸರ್​ನಿಂದ ನಿಧನ
Image
Breaking News: ಖ್ಯಾತ ನಟ ಅರುಣ್​ ಬಾಲಿ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ
Image
Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ​ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Image
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ

ಜ್ಯೋತಿ ಅವರಿಗೆ 81 ವರ್ಷ ವಯಸ್ಸಾಗಿದೆ. ಅವರನ್ನು ಕಳೆದುಕೊಂಡು ಕುಟುಂಬದ ಸದಸ್ಯರಿಗೆ ತೀವ್ರ ನೋವು ಉಂಟಾಗಿದೆ. 1970ರ ಏಪ್ರಿಲ್​ 19ರಂದು ರಂಗನಾಥ್​ ಜೊತೆ ಜ್ಯೋತಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಿಂಡಿಕೇಟ್​ ಬ್ಯಾಂಕ್​ನಲ್ಲಿ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು. 1994ರಲ್ಲಿ ಜ್ಯೋತಿ ನಿವೃತ್ತಿ ಹೊಂದಿದ್ದರು. ಲಯನ್ಸ್ ಆರ್ಗನೈಜೇಷನ್, ಲೇಡಿಸ್ ವಿಂಗ್ಸ್ ಲಯನ್ಸ್ ಕ್ಲಬ್​ನಲ್ಲಿ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.