ಬಾಲಿವುಡ್ ನಟಿ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಅವರು ಇತ್ತೀಚೆಗೆ ಬ್ರೇಕಪ್ ಮಾಡಿಕೊಂಡರು ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಇದನ್ನು ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಸಾಕಷ್ಟು ವರ್ಷ ಸುತ್ತಾಡಿದ್ದ ಅವರಿಗೆ ಈಗ ಒಬ್ಬರಿಗೊಬ್ಬರ ಅವಶ್ಯಕತೆ ಇಲ್ಲ. ಈಗ ಇವರ ಬ್ರೇಕಪ್ ವಿಚಾರ ಅಧಿಕೃತವಾಗಿದೆ. ಒಬ್ಬರಿಗೊಬ್ಬರು ಅಂಟಿಕೊಂಡು ಇರುತ್ತಿದ್ದ ಇವರು ಈಗ ಪರಸ್ಪರ ದೂರ ಆಗಿದ್ದಾರೆ.
ಬಾಲಿವುಡ್ನಲ್ಲಿ ಇರುವವರು ಎಂದಮೇಲೆ ಅನೇಕ ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ಈಗ ಮಲೈಕಾ ಹಾಗೂ ಅರ್ಜುನ್ಗೂ ಹಾಗೆಯೇ ಆಗಿದೆ. ಇಬ್ಬರೂ ಒಂದೇ ವೇದಿಕೆ ಏರಿದ್ದಾರೆ. ಆದರೆ, ಒಬ್ಬರಿಗೊಬ್ಬರು ನಿರ್ಲಕ್ಷಿಸಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿಲ್ಲ. ಈ ಮೂಲಕ ಬ್ರೇಕಪ್ ವಿಚಾರವನ್ನು ಇವರು ಖಚಿತ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅರ್ಜುನ್ ಕಪೂರ್ ಎದುರಲ್ಲೇ ಮಲೈಕಾ ಹಾದು ಹೋಗಿದ್ದಾರೆ. ಈ ವೇಳೆ ಅಭಿಮಾನಿಗಳು ಮುತ್ತಿಕೊಳ್ಳದಂತೆ ತಡೆದಿದ್ದಾರೆ ಅರ್ಜುನ್ ಕಪೂರ್. ಆದರೆ, ಇದನ್ನು ಮಲೈಕಾ ಅರೋರಾ ಗಮನಿಸಿಯೂ ಇಲ್ಲ. ಅವರು ನೇರವಾಗಿ ಹೊರಟು ಹೋಗಿದ್ದಾರೆ. ಈ ಮೂಲಕ ಬ್ರೇಕಪ್ ವಿಚಾರ ಖಚಿತವಾಗಿದೆ. ಸ್ವತಃ ಮಲೈಕಾ ಅವರೇ ಬ್ರೇಕಪ್ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅರ್ಜುನ್ ಕಪೂರ್ಗೆ ಮಲೈಕಾ ಮೇಲೆ ಇನ್ನೂ ಕಾಳಜಿ ಇದೆ. ಆದರೆ, ಈ ಕಾಳಜಿ ಮಲೈಕಾಗೆ ಇಲ್ಲ.
ಇದನ್ನೂ ಓದಿ: ಬ್ರೇಕಪ್ ಸುದ್ದಿ ಬಳಿಕ ಪರೋಕ್ಷವಾಗಿ ತಿರುಗೇಟು ನೀಡಿದ ಮಲೈಕಾ, ಅರ್ಜುನ್ ಕಪೂರ್
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಕೊವಿಡ್ಗಿಂತಲೂ ಮೊದಲಿಂದ ರಿಲೇಶನ್ಶಿಪ್ನಲ್ಲಿ ಇದ್ದವರು. ಅರ್ಜುನ್ ಕಪೂರ್ಗಿಂತ ಮಲೈಕಾ ವಯಸ್ಸಲ್ಲಿ ಸಾಕಷ್ಟು ದೊಡ್ಡವರು. ಈ ವಿಚಾರ ಇವರ ಪ್ರೀತಿಗೆ ಅಡ್ಡ ಆಗಿರಲಿಲ್ಲ. ಇಬ್ಬರೂ ಹಲವು ಬಾರಿ ಸುತ್ತಾಟ ನಡೆಸಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಇಬ್ಬರೂ ಬೇರೆ ಆಗಿದ್ದಾರೆ. ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳದೆ ಇರುವಷ್ಟು ದ್ವೇಷ ಬೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Sat, 27 July 24