ಬ್ರೇಕಪ್ ಸುದ್ದಿ ಬಳಿಕ ಪರೋಕ್ಷವಾಗಿ ತಿರುಗೇಟು ನೀಡಿದ ಮಲೈಕಾ, ಅರ್ಜುನ್ ಕಪೂರ್

ಮಲೈಕಾ ಅರೋರಾ ಅವರಿಗೆ 51 ವರ್ಷ ವಯಸ್ಸು. ಅರ್ಜುನ್​ ಕಪೂರ್​ ಅವರಿಗೆ 39 ವರ್ಷ ವಯಸ್ಸು. ಇಷ್ಟು ದಿನಗಳ ಕಾಲ ಜೊತೆಯಾಗಿದ್ದ ಅವರಿಬ್ಬರ ನಡುವೆ ಈಗ ಬ್ರೇಕಪ್​ ಆಗಿದೆ ಎಂದು ಹೇಳಲಾಗುತ್ತಿದೆ. ಬ್ರೇಕಪ್​ ಸುದ್ದಿ ಹರಡಿದ ಬಳಿಕ ಅವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಕೆಲವು ಸಾಲುಗಳನ್ನು ಹಂಚಿಕೊಂಡಿದ್ದಾರೆ.

ಬ್ರೇಕಪ್ ಸುದ್ದಿ ಬಳಿಕ ಪರೋಕ್ಷವಾಗಿ ತಿರುಗೇಟು ನೀಡಿದ ಮಲೈಕಾ, ಅರ್ಜುನ್ ಕಪೂರ್
ಅರ್ಜುನ್​ ಕಪೂರ್​, ಮಲೈಕಾ ಅರೋರಾ
Follow us
|

Updated on: Jun 02, 2024 | 8:00 PM

ಒಂದಷ್ಟು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ (Arjun Kapoor) ನಡುವೆ ಈಗ ಬಿರುಕು ಉಂಟಾದಂತಿದೆ. ಈ ಬಗ್ಗೆ ಅನೇಕ ಬಗೆಯ ಸುದ್ದಿಗಳು ಪ್ರಕಟ ಆಗಿವೆ. ಆದರೆ ಸ್ವತಃ ಅರ್ಜುನ್​ ಕಪೂರ್​, ಮಲೈಕಾ ಅರೋರಾ (Malaika Arora) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಈ ರೀತಿ ಗಾಸಿಪ್​ ಕೇಳಿಬಂದಿದೆ ಎಂದರೆ ಬಹುತೇಕ ನಿಜ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್​ಗಳು ಅನುಮಾನ ಮೂಡಿಸಿವೆ.

ಭಾನುವಾರ (ಜೂನ್​ 2) ಮಲೈಕಾ ಅರೋರಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡ ಒಂದು ಸಾಲು ಗಮನ ಸೆಳೆಯುತ್ತಿದೆ. ‘ನಿಮ್ಮಿಂದ ಆಗಲ್ಲ ಎಂದು ಅವರು ಹೇಳಿದಾಗ ನೀವು ಅದನ್ನು ಮಾಡಿ ತೋರಿಸಿ.. ಎರಡು ಬಾರಿ ಮಾಡಿ ಮತ್ತು ಫೋಟೋ ತೆಗೆದುಕೊಳ್ಳಿ’ ಎಂಬ ಸಾಲನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಅರ್ಜುನ್​ ಕಪೂರ್​ಗೆ ತಿರುಗೇಟು ನೀಡುವ ಸಲುವಾಗಿ ಮಲೈಕಾ ಅರೋರಾ ಅವರು ಈ ಸಾಲನ್ನು ಶೇರ್​ ಮಾಡಿಕೊಂಡಿರಬಹುದು ಎಂಬುದು ಎಲ್ಲರ ಗುಮಾನಿ.

ಇನ್ನು, ಅರ್ಜುನ್​ ಕಪೂರ್​ ಕೂಡ ಸುಮ್ಮನೆ ಕುಳಿತಿಲ್ಲ. ಒಂದು ದಿನ ಮುಂಚೆ ಅವರು ಕೂಡ ಇದೇ ರೀತಿ ಪರೋಕ್ಷವಾಗಿ ತಿರುಗೇಟು ನೀಡುವಂತಹ ಪೋಸ್ಟ್​ ಹಂಚಿಕೊಂಡಿದ್ದರು. ‘ನಮಗೆ ಬದುಕಿನಲ್ಲಿ ಎರಡು ಆಯ್ಕೆ ಇದೆ. ಭೂತಕಾಲದ ಬಂಧಿಗಳಾಗಿ ಇರುವುದು ಅಥವಾ ಭವಿಷ್ಯದ ಸಾಧ್ಯತೆಗಳನ್ನು ಅನ್ವೇಷಣೆ ಮಾಡುವುದು’ ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: 50ರಲ್ಲೂ 30ರಂತೆ ಕಾಣುವ ಮಲೈಕಾ ಅರೋರಾ, ಪಾಲಿಸುವ ಡಯಟ್ ಯಾವುದು?

ಬ್ರೇಕಪ್​ ಕುರಿತ ವದಂತಿಗಳ ಬಗ್ಗೆ ಮಲೈಕಾ ಅರೋರಾ ಅವರಾಗಲಿ, ಅರ್ಜುನ್​ ಕಪೂರ್​ ಅವರಾಗಲಿ ನೇರವಾಗಿ ಏನನ್ನೂ ಹೇಳಿಲ್ಲ. ಅವರು ಸೈಲೆಂಟ್​ ಆಗಿದ್ದಾರೆ ಎಂದರೆ ‘ಮೌನಂ ಸಮ್ಮತಿ ಲಕ್ಷಣಂ’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಬ್ರೇಕಪ್​ ಬಗ್ಗೆ ಮಲೈಕಾ ಅವರ ಮ್ಯಾನೇಜರ್​ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಬರೀ ಗಾಸಿಪ್ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು