AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಸ್ತೆಯಲ್ಲಿ ರವೀನಾ ಟಂಡನ್​ಗೆ ಥಳಿಸಿದ ಜನರು; ಗಲಾಟೆ ಶುರು ಆಗಿದ್ದು ಹೇಗೆ?

‘ದಯವಿಟ್ಟು ನನಗೆ ಹೊಡೆಯಬೇಡಿ. ನನ್ನನ್ನು ತಳ್ಳಬೇಡಿ..’ ಎಂದು ಖ್ಯಾತ ನಟಿ ರವೀನಾ ಟಂಡನ್​ ಅವರು ಬೇಡಿಕೊಂಡಿದ್ದಾರೆ. ತುಂಬ ಗಾಬರಿಯಲ್ಲಿದ್ದ ಅವರನ್ನು ಜನರು ತಳ್ಳಾಡಿದ್ದಾರೆ. ಕೂದಲು ಹಿಡಿದು ಎಳೆದಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ‘ರವೀನಾ ಟಂಡನ್​ ಅವರೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮೊಹಮ್ಮದ್​ ಎಂಬ ವ್ಯಕ್ತಿಯು ವೈರಲ್​ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.

ನಡುರಸ್ತೆಯಲ್ಲಿ ರವೀನಾ ಟಂಡನ್​ಗೆ ಥಳಿಸಿದ ಜನರು; ಗಲಾಟೆ ಶುರು ಆಗಿದ್ದು ಹೇಗೆ?
ರವೀನಾ ಟಂಡನ್​
ಮದನ್​ ಕುಮಾರ್​
|

Updated on: Jun 02, 2024 | 4:23 PM

Share

ಬಾಲಿವುಡ್​ನ ಖ್ಯಾತ ನಟಿ ರವೀನಾ ಟಂಡನ್​ (Raveena Tandon) ಅವರು ಶನಿವಾರ ರಾತ್ರಿ ಹಲ್ಲೆಗೆ ಒಳಗಾಗಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ರವೀನಾ ಟಂಡನ್​ ಅವರ ಕಾರು ಚಾಲಕನ ಮೇಲೂ ಜನರು ಹಲ್ಲೆ (Assault) ಮಾಡಿದ್ದಾರೆ. ಈ ಗಲಾಟೆಯಲ್ಲಿ ರವೀನಾ ಟಂಡನ್​ ಕೂಡ ಮಹಿಳೆಯರ ಮೇಲೆ ಕೈ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಘಟನೆಯ ವಿಡಿಯೋ (Raveena Tandon Viral Video) ವೈರಲ್​ ಆಗಿದೆ. ರವೀನಾ ಟಂಡನ್​ ಅವರ ಕಾರು ಚಾಲಕ ರಿವರ್ಸ್​ ತೆಗೆಯುವ ವೇಳೆ ಪಾದಚಾರಿಗಳ ಜೊತೆ ಕಿರಿಕ್​ ಆಗಿದೆ ಎನ್ನಲಾಗಿದೆ.

‘ದಯವಿಟ್ಟು ನನಗೆ ಹೊಡೆಯಬೇಡಿ. ನನ್ನನ್ನು ತಳ್ಳಬೇಡಿ..’ ಎಂದು ರವೀನಾ ಟಂಡನ್​ ಅವರು ಬೇಡಿಕೊಂಡಿದ್ದಾರೆ. ತುಂಬ ಗಾಬರಿಯಲ್ಲಿದ್ದ ಅವರನ್ನು ಜನರು ತಳ್ಳಾಡಿದ್ದಾರೆ. ಕೂದಲು ಹಿಡಿದು ಎಳೆದಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಇನ್ನೂ ದೂರು ದಾಖಲಾಗಿಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ಸರಿಯಾದ ಚಿತ್ರಣ ಸಿಗುವುದು ಬಾಕಿಯಿದೆ. ನಟಿಯ ಕಡೆಯಿಂದ ಸ್ಪಷ್ಟನೆ ಹೊರ ಬರಬೇಕಿದೆ.

ಇದನ್ನೂ ಓದಿ: ಮಹಿಳೆ ಮೇಲೆ ರವೀನಾ ಟಂಡನ್ ಹಲ್ಲೆ ಆರೋಪ: ವಿಡಿಯೋ ವೈರಲ್

ವೈರಲ್​ ವಿಡಿಯೋದಲ್ಲಿ ಮೊಹಮ್ಮದ್ ಎಂಬ ವ್ಯಕ್ತಿಯು ರವೀನಾ ಟಂಡನ್​ ಮೇಲೆ ಆರೋಪ ಹೊರಿಸಿದ್ದಾರೆ. ‘ನನ್ನ ಹೆಸರು ಮೊಹಮ್ಮದ್​. ನಾನು ಬಾಂದ್ರಾ ನಿವಾಸಿ. ನನ್ನ ತಾಯಿ, ಸಹೋದರಿ ಮುಂತಾದವರ ಜೊತೆ ನಾವು ಹೊರಗೆ ಹೋಗಿದ್ದೆವು. ಅಲ್ಲಿಂದ ವಾಪಸ್​ ಬರುವಾಗ, ರವೀನಾ ಟಂಡನ್​ ಮನೆಯ ಬಳಿ ನನ್ನ ತಾಯಿ ಮೇಲೆ ಅವರ ಚಾಲಕ ಕಾರು ಹತ್ತಿಸಿದ್ದಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ಆತ ನಮ್ಮ ಮೇಲೆ ಹಲ್ಲೆ ಮಾಡಿದ’ ಎಂದು ಮೊಹಮ್ಮದ್​ ಹೇಳಿದ್ದಾರೆ.

ಹಲ್ಲೆಯ ವೈರಲ್​ ವಿಡಿಯೋ:

‘ರವೀನಾ ಟಂಡನ್​ ಅವರ ಕಾರು ಚಾಲಕ ನನ್ನ ತಾಯಿಗೆ ಹೊಡೆದಿದ್ದಾನೆ. ಅದಾದ ಬಳಿಕ ಕುಡಿದ ನಶೆಯಲ್ಲಿದ್ದ ರವೀನಾ ಟಂಡನ್​ ಅವರು ಕೂಡ ಹೊರಬಂದು ನನ್ನ ತಾಯಿ ಮೇಲೆ ಹಲ್ಲೆ ಮಾಡಿದರು. ತಾಯಿ ತಲೆಗೆ ಪೆಟ್ಟಾಗಿದೆ. ನಾವು ಇಲ್ಲಿ ಪೊಲೀಸ್​ ಠಾಣೆ ಎದುರು ನಾಲ್ಕು ಗಂಟೆಯಿಂದ ನಿಂತಿದ್ದೇವೆ. ನನ್ನನ್ನು ಯಾರೂ ಕೇಳುತ್ತಿಲ್ಲ. ನಮ್ಮ ದೂರನ್ನು ಯಾರೂ ಪಡೆಯುತ್ತಿಲ್ಲ. ರಾಜಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾವು ಯಾಕೆ ರಾಜಿ ಮಾಡಿಕೊಳ್ಳಬೇಕು? ನಮಗೆ ನ್ಯಾಯ ಬೇಕು’ ಎಂದು ವೈರಲ್​ ವಿಡಿಯೋದಲ್ಲಿ ಮೊಹಮ್ಮದ್​ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್