ಮಲೈಕಾ ಅರೋರಾ-ಅರ್ಜುನ್​ ಕಪೂರ್​ ಬ್ರೇಕಪ್​ ಸುದ್ದಿ ಬರೀ ಸುಳ್ಳಾ? ಸಿಕ್ತು ಸ್ಪಷ್ಟನೆ

ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್​ ಕಪೂರ್​ ಅವರ ಬ್ರೇಕಪ್​ ಬಗ್ಗೆ ಸುದ್ದಿ ಕೇಳಿಬಂದಿದ್ದು ಇದೇ ಮೊದಲೇನೂ ಅಲ್ಲ. ಲಾಕ್​ಡೌನ್​ ಸಂದರ್ಭದಲ್ಲಿಯೂ ಇದೇ ರೀತಿ ನ್ಯೂಸ್​ ಹರಡಿತ್ತು. ಆದರೆ ಅದು ನಿಜವಾಗಲಿಲ್ಲ. ಈಗ ಮತ್ತೆ ಅವರಿಬ್ಬರ ವೈಯಕ್ತಿಕ ವಿಷಯದ ಬಗ್ಗೆ ಗುಸುಗುಸು ಕೇಳಿಬಂದಿದೆ. ಆ ಬಗ್ಗೆ ಆಪ್ತರಿಂದ ಸ್ಪಷ್ಟನೆಯೂ ಸಿಕ್ಕಿದೆ.

ಮಲೈಕಾ ಅರೋರಾ-ಅರ್ಜುನ್​ ಕಪೂರ್​ ಬ್ರೇಕಪ್​ ಸುದ್ದಿ ಬರೀ ಸುಳ್ಳಾ? ಸಿಕ್ತು ಸ್ಪಷ್ಟನೆ
ಮಲೈಕಾ ಅರೋರಾ, ಅರ್ಜುನ್​ ಕಪೂರ್​
Follow us
ಮದನ್​ ಕುಮಾರ್​
|

Updated on: May 31, 2024 | 10:32 PM

ಬಾಲಿವುಡ್​ ನಟಿ, ಡ್ಯಾನ್ಸರ್​ ಮಲೈಕಾ ಅರೋರಾ ಅವರು ಹೆಚ್ಚು ಸುದ್ದಿ ಆಗುವುದೇ ವೈಯಕ್ತಿಕ ಕಾರಣಗಳಿಂದ. ನಟ ಅರ್ಜುನ್​ ಕಪೂರ್ (Arjun Kapoor)​ ಅವರ ಜೊತೆ ಮಲೈಕಾ ಅರೋರಾ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿದೆ. ಹಾಗಾಗಿ ಅವರು ಬ್ರೇಕಪ್ (Breakup)​ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ಮಲೈಕಾ ಅರೋರಾ (Malaika Arora) ಅವರ ಮ್ಯಾನೇಜರ್​ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿ ಆಗಿದೆ. ಸದ್ಯಕ್ಕೆ ಬ್ರೇಪಕ್​ ಆಗಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ.

ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಅವರ ಬ್ರೇಕಪ್​ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ‘ಇಂಡಿಯಾ ಟುಡೆ’ ಯತ್ನಿಸಿದೆ. ಮಲೈಕಾ ಅರೋರಾ ಅವರ ಮ್ಯಾನೇಜರ್​ಗೆ ಈ ಬಗ್ಗೆ ಕೇಳಿದಾಗ, ‘ಇಲ್ಲ ಇಲ್ಲ.. ಎಲ್ಲವೂ ವದಂತಿ’ ಎಂದು ಉತ್ತರಿದ್ದಾರೆ ಎಂದು ವರದಿ ಆಗಿದೆ. ಹಾಗಾಗಿ ಸದ್ಯಕ್ಕಂತೂ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ನಡುವೆ ಬ್ರೇಕಪ್​ ಆಗಿಲ್ಲ ಎನ್ನಲಾಗುತ್ತಿದೆ.

ಸೆಲೆಬ್ರಿಟಿಗಳ ನಡುವೆ ಪ್ರೀತಿ-ಪ್ರೇಮ ಚಿಗುರುವುದು, ಮದುವೆ ಆಗುವುದು, ಬ್ರೇಕಪ್​, ವಿಚ್ಛೇದನ ಆಗುವುದು ತುಂಬ ಕಾಮನ್​. ಹಾಗಾಗಿ ಪದೇ ಪದೇ ಇಂಥ ಗಾಸಿಪ್​ಗಳು ಕೇಳಿಬರುತ್ತಲೇ ಇರುತ್ತವೆ. ಆದರೂ ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಂತಾರೆ. ಹಾಗಾಗಿ ಗಾಸಿಪ್​ ಮಂದಿ ಈ ವದಂತಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದಷ್ಟು ಬೇಗ ಸ್ವತಃ ಮಲೈಕಾ ಅರೋರಾ ಅಥವಾ ಅರ್ಜುನ್​ ಕಪೂರ್​ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: 50ರಲ್ಲೂ 30ರಂತೆ ಕಾಣುವ ಮಲೈಕಾ ಅರೋರಾ, ಪಾಲಿಸುವ ಡಯಟ್ ಯಾವುದು?

ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ. ಹಾಗಿದ್ದರೂ ಕೂಡ ಅವರು ಪರಸ್ಪರ ಆಕರ್ಷಿತರಾಗಿದ್ದಾರೆ. 2019ರಲ್ಲಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಜೊತೆಯಾಗಿ ಫೋಟೋ ಪೋಸ್ಟ್​ ಮಾಡುವ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಆದರೆ ಮದುವೆ ಆಗುವ ಬಗ್ಗೆ ಅವರು ಏನನ್ನೂ ಹೇಳಿರಲಿಲ್ಲ. ಈಗ ಅವರ ಬ್ರೇಕಪ್​ ಬಗ್ಗೆ ಗಾಸಿಪ್​ ಹಬ್ಬಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ